ಬುಧವಾರ, ಅಕ್ಟೋಬರ್ 16, 2019
27 °C

ಗಾಳಿಪಟ ಉತ್ಸವ ನಾಳೆ

Published:
Updated:

ಮೈಸೂರು: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪಸಮಿತಿ ವತಿಯಿಂದ ಎರಡು ದಿನದ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

ಅ.12ರ ಶನಿವಾರ ಸಂಜೆ 5ಗಂಟೆಗೆ ನಗರದ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅ.13ರ ಭಾನುವಾರ ಬೆಳಿಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಹಾರಾಷ್ಟ್ರ, ಗುಜರಾತ್‍ನ ರಾಜ್‍ಕೋಟ್, ಸೂರತ್, ವಡೋದರಾ, ಹೈದರಾಬಾದ್, ಮಂಗಳೂರು ಹಾಗೂ ಬೆಂಗಳೂರಿನ ವೃತ್ತಿ ನಿರತರು ಗಾಳಿಪಟದ ಪ್ರದರ್ಶನ, ಮಾರಾಟ ಹಾಗೂ ಕಾರ್ಯಗಾರ ನಡೆಸಿಕೊಡುವರು.

ಎರಡು ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲಾ ವಯೋಮಾನದವರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post Comments (+)