7

ರೋಚಕ ‘ಗೇಮರ್ಸ್‌ ಲೂಪ್‌’

Published:
Updated:

ಕಣ್ಣಿಗೊಂದು ಕನ್ನಡಕ ಧರಿಸಿದೆ. ಮುಂದೆ ನಡೆಯಲಿಲ್ಲ... ಮುನ್ನಡೆಸತೊಡಗಿತು. ಕಟ್ಟಡದೊಳಗೆ ಹೋದೆ. ಅಲ್ಲಿ ಇದ್ದಕ್ಕಿದ್ದಂತೆ ತೆರೆದುಕೊಂಡ ಆಕಾಶ. ನೀಲಾಕಾಶದ ಅಡಿಯಲ್ಲಿ ಒಂದೇ ಒಂದು ಹೆಜ್ಜೆ ಇಡಬಹುದಾದಷ್ಟು ಕಿರಿದಾದ ಜಾಗ...

ಬೀಳದಿರಲು ಅದರ ಮೇಲೆಯೇ ಹೆಜ್ಜೆ ಇಟ್ಟು ನಡೆಯಬೇಕು. ಅಕ್ಕ ಪಕ್ಕ ಏನೂ ಇಲ್ಲ. ಎಲ್ಲವೂ ಖಾಲಿಖಾಲಿ. ಕೈ ಹಿಡಿಯಲು ಯಾರೂ ಇಲ್ಲ. ಆಸರೆಗೆ ಕಂಬಿಗಳೂ ಇಲ್ಲ. ಅಂತರ್ಗಾಳಿಯಲ್ಲಿ ಹೆಜ್ಜೆ ಹಾಕುವ ಕಷ್ಟ ಆಗಲೇ ಗೊತ್ತಾಗಿದ್ದು. ಬಯಲಲ್ಲಿದ್ದರೂ ಉಸಿರುಗಟ್ಟಿದ ಅನುಭವ. ಢವಗುಡುವ ಎದೆ ಕಿವಿಯೊಳಗೆ ನಗಾರಿ ಬಾರಿಸಿದಂತೆ.

ಮುಗಿಯಿತಿನ್ನು ಬಾಳ ಹಾದಿ ಎನಿಸುವ ಭಾವ... ಮುಗಿದೇಹೋಯಿತೇ ಜೀವನ ಎನ್ನುವಂಥ ಆತಂಕ... ಹೃದಯ ಬಾಯಿಗೆ ಬಂದಂತೆನಿಸಿದಾಗಲೇ ಕನ್ನಡಕ ತೆಗೆದೆ... ಅಬ್ಬಾ... ಒಂದೆರಡು ಕ್ಷಣಗಳೇ ಬೇಕಾದವು ಸುಧಾರಿಸಿಕೊಳ್ಳಲು.

ಅದು ಕಮರ್ಷಿಯಲ್ ಫ್ಲಾಜಾದ 3ನೇ ಮಹಡಿಯಲ್ಲಿರುವ ಗೇಮರ್ಸ್‌ ಲೂಪ್. ಇಲ್ಲಿಯದ್ದೇ ಒಂದು ಆಟ. ಹಣ ಕೊಟ್ಟು ಏಕಾಂಗಿಯಾಗಿ ಹೆಜ್ಜೆಹಾಕುವ ಆತಂಕವನ್ನು ಅನುಭವಿಸಿದ್ದು 3ಡಿ ಕನ್ನಡಕ ಧರಿಸಿ. ಇಂಥವೇ 20 ವಿವಿಧ ಕ್ರೀಡೆಗಳಿವೆ. ಒಂದಕ್ಕಿಂತ ಒಂದು ಹೆಚ್ಚು ಭಯಗೊಳಿಸುವ ಹಾಗೂ ಸಾಹಸಮಯ ಆಟಗಳಿವು. ಆದರೆ, ಅವುಗಳನ್ನು ಯಶಸ್ವಿಯಾಗಿ ಆಡಲು ಎಂಟೆದೆ ಗುಂಡಿಗೆ  ಬೇಕಷ್ಟೇ.  ಮಕ್ಕಳಿಗಾಗಿ ‘ಕಿಡ್ಸ್‌ ಜೋನ್’ ಇದೆ.

ಭಯಗೊಳಿಸುವ ‘ರೋಲರ್ ಕೋಸ್ಟರ್’

ರೋಚಕ ಹಾಗೂ ಭಯಗೊಳಿಸುವ ಅನುಭವ ‘ರೋಲರ್ ಕೋಸ್ಟರ್’. ವರ್ಚುವಲ್ ಗೇಮ್ ಮಾದರಿಯಲ್ಲೇ ಈ ಆಟವೂ ಇದೆ.    ಎಲ್ಲ ಆಟಗಳನ್ನು ಆಡಿ ಹೊರಬರುವಷ್ಟರಲ್ಲಿ ಧೈರ್ಯದ ಜೊತೆ ಹೊಟ್ಟೆಯೂ ಖಾಲಿಯಾಗಿರುತ್ತದೆ. ಹಸಿವು ನೀಗಿಸಲು ಗೇಮರ್ಸ್‌ ಲೂಪ್‌ನ ಅಂಗಳದಲ್ಲಿಯೇ ಕಪೂರ್ ಕೆಫೆ, ಚಿಕಿಂಗ್, ಪೆಟೂ, ಗೆಲಾಟೊ ಇಟಾಲಿನೊ ಎಂಬ ಹೆಸರಿನ ರೆಸ್ಟೊರೆಂಟ್‌ಗಳು ಇವೆ. ಸಸ್ಯಾಹಾರ ಹಾಗೂ ಮಾಂಸಾಹಾರದ ಖಾದ್ಯಗಳೂ ಇಲ್ಲಿ ಲಭ್ಯ.

 ಪಾರ್ಟಿ ಹಾಲ್: ಆಟಗಳು ಹಾಗೂ ಫುಡ್‌ ಕೋರ್ಟ್‌ ಜೊತೆ ಗೇಮರ್ಸ್‌ಲೂಪ್‌ನಲ್ಲಿ ‘ಪಾರ್ಟಿ ಹಾಲ್’ ಇದೆ. ಇದರಲ್ಲಿ ಸಮಾರು 400 ಮಂದಿ ಭಾಗವಹಿಸಬಹುದಾಗಿದೆ. ಹುಟ್ಟುಹಬ್ಬ ಆಚರಣೆ, ನಿಶ್ಚಿತಾರ್ಥ, ಕಿಟ್ಟಿ ಪಾರ್ಟಿ, ಕಾರ್ಪೊರೇಟ್ ಸಭೆ–ಸಮಾರಂಭಗಳಿಗೆ ಇದು ಸೂಕ್ತವಾಗಿದೆ. 

ಸಂಪರ್ಕ: 9886627860

**

ಜುಲೈ 31ರವರೆಗೆ ಆಫರ್

ಗೇಮರ್ಸ್‌ ಲೂಪ್ ಪ್ರಾರಂಭೋತ್ಸವದ ಕೊಡುಗೆಯಾಗಿ ವಿಶೇಷ ‘ಕಾಂಬೊ’ ಪ್ಯಾಕೇಜ್ ಅನ್ನು ಜುಲೈ 31ರವರೆಗೆ ನೀಡಿದೆ. ಈ ಕೊಡುಗೆಯಲ್ಲಿ ₹299 ಪಾವತಿಸಿದರೆ ರೋಲರ್ ಕೋಸ್ಟರ್, ಬಾಕ್ಸಿಂಗ್, ಆರ್ಚರಿ, ಶೂಟಿಂಗ್ ಹಾಗೂ ವರ್ಚುವಲ್ ರಿಯಾಲಿಟಿ ಗೇಮ್‌ಗದಳನ್ನು ಆಡಬಹುದು.

**

ಯುವಜನಾಂಗ ಬಯಸುವ ಥ್ರಿಲ್‌, ಸಾಹಸ, ರೋಚಕತನದ ಕೊರತೆ ಇಲ್ಲಿದ್ದಿದ್ದರಿಂದ ಈ ಗೇಮ್‌ ಲೂಪ್‌ ಆರಂಭಿಸಿದೆವು
– ಸೈಯದ್‌, ಗೇಮರ್ಸ್‌ ಲೂಪ್ ಮಾಲೀಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !