ಶುಕ್ರವಾರ, ಡಿಸೆಂಬರ್ 6, 2019
17 °C

ದೇವರಚಿಕ್ಕನಹಳ್ಳಿ; ಆಟೋಟ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬೊಮ್ಮನಹಳ್ಳಿ ವಾರ್ಡ್‌ನ ದೇವರಚಿಕ್ಕನಹಳ್ಳಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಭಾನುವಾರ ಸ್ಥಳೀಯ ನಿವಾಸಿಗಳಿಗಾಗಿ ವಿಶೇಷ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಎಲ್ಲ ವಯೋಮಾನದವರು  ಖುಷಿಯಿಂದ ಆಟೋಟಗಳಲ್ಲಿ ತೊಡಗಿದರು. ಅಕ್ಕಪಕ್ಕದಲ್ಲೇ ಇದ್ದರೂ ನೆರೆಹೊರೆಯವರ ಪರಿಚಯ ಮಾಡಿಕೊಳ್ಳುವ ಗೋಜಿಗೂ ಹೋಗದೇ ಇದ್ದವರು, ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾ, ನಮ್ಮನೆ ಪಕ್ಕದಲ್ಲೇ ಇರೋದಾ! ಎಂದು ಉದ್ಗರಿಸುತ್ತಿದ್ದರು. ಹಿರಿಯರು ಮಕ್ಕಳ ಜತೆ ಆಟಗಳಲ್ಲಿ ಪಾಲ್ಗೊಂಡು ಮಕ್ಕಳಾಗಿ ಮೈಮರೆತರು!

‘ಬಡಾವಣೆಗಳಲ್ಲಿನ ನಿವಾಸಿಗಳಲ್ಲಿ ಒಂದು ಹೊಸತನ ತರುವ ದೃಷ್ಟಿಯಿಂದ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿದೆವು. ನೂರಾರು ಸಂಖ್ಯೆಯ ಜನ ಉತ್ಸಾಹದಿಂದ ಪಾಲ್ಗೊಂಡಿರುವುದು ನಮಗೂ ಖುಷಿ ತಂದಿದೆ. ಇಲ್ಲಿ ವೈಯಕ್ತಿಕ ಸ್ಪರ್ಧೆಗಳಿಗೆ ಅವಕಾಶವಿಲ್ಲ. ತಂಡಗಳಾಗಿ ಮಾತ್ರವೇ ಭಾಗವಹಿಸಬೇಕು. ಈ ಮೂಲಕ ಅವರಲ್ಲಿ ಸಾಮೂಹಿಕ ಪ್ರಜ್ಞೆ ಬೆಳೆಸುವ ಸಣ್ಣ ಪ್ರಯತ್ನ ಇದು’ ಎಂದು ಕಾರ್ಯಕ್ರಮದ ಆಯೋಜಕ ಪಾಲಿಕೆ ಸದಸ್ಯ ರಾಮಮೋಹನ್ ರಾಜ್ ಹೇಳಿದರು.

‘ಎಂದೂ ಯಾರೊಂದಿಗೂ ಬೆರೆಯದ ನಮ್ಮನ್ನು ಇಂಥದ್ದೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಕಾರ್ಯಕ್ರಮದ ಬಗ್ಗೆ ಕುತೂಹಲ ಮೂಡಿತು. ಈ ಕಾರ್ಯಕ್ರಮ ನಮಗೆ ಹೊಸ ಅನುಭವವ ನೀಡಿತು. ಹೊಸ ಗೆಳತಿಯರೂ ಸಿಕ್ಕರು’ ಎಂದು ಗೃಹಿಣಿ ಚಂದ್ರಿಕಾ ಖುಷಿಯಿಂದ ಅಭಿಪ್ರಾಯ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ 30 ಬಡಾವಣೆಗಳ ಮಕ್ಕಳು ಮತ್ತು ಜನ ಭಾಗವಹಿಸಿದ್ದರು.

ವಿಶೇಷ ಬಹುಮಾನ: ಗೆದ್ದ ತಂಡಗಳ ಬಡಾವಣೆಯ ಒಂದು ಕಿಲೋಮೀಟರ್‌ ರಸ್ತೆಗೆ ಡಾಂಬರೀಕರಣ, 20 ಬೀದಿ ದೀಪಗಳು ಹಾಗೂ ನೂರು ಟ್ರೀ ಗಾರ್ಡ್‌ಗಳನ್ನು ಬಹುಮಾನವಾಗಿ ಘೋಷಿಸಲಾಯಿತು. ವಿಜೇತ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)