ಗಾಂಜಾ ಮಾರಾಟ; ಮೂವರ ಸೆರೆ

7

ಗಾಂಜಾ ಮಾರಾಟ; ಮೂವರ ಸೆರೆ

Published:
Updated:
Deccan Herald

ಬೆಂಗಳೂರು: ಕೇರಳದ ಮಲಪುರಂ ಜಿಲ್ಲೆಯ ಜಮೀನುಗಳಲ್ಲಿ ಬೆಳೆಯುತ್ತಿದ್ದ ಗಾಂಜಾವನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸುದ್ದಗುಂಟೆಪಾಳ್ಯದ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ರಿಸಾದ್ ಪಿ. (26), ಮಹಮ್ಮದ್ ರಹೀಸ್ ಟಿ. (32) ಹಾಗೂ ಸಾದಿಕ್ ಪಾಷಾ (31) ಬಂಧಿತರು. ಅವರಿಂದ 5 ಕೆ.ಜಿ 200 ಗ್ರಾಂ ಗಾಂಜಾ ಹಾಗೂ 100 ಗ್ರಾಂ ತೂಕದ ಚರಸ್ ಜಪ್ತಿ ಮಾಡಲಾಗಿದೆ.

‘ಮಲಪುರಂ ಜಿಲ್ಲೆಯ ನಿವಾಸಿಗಳಾದ ರಿಸಾದ್ ಹಾಗೂ ರಹೀಸ್, ತಮ್ಮೂರಿನ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ್ದರು. ಅದನ್ನು ಕಟಾವು ಮಾಡಿ, ಅಲ್ಲಿಯೇ ಒಣಗಿಸಿ ಬೆಂಗಳೂರಿನ ವಾಲ್ಮೀಕಿ ನಗರದ ಸಾದಿಕ್ ಪಾಷಾ ಮೂಲಕ ಮಾರಾಟ ಮಾಡಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು. 

‘ಕಾಲೇಜು, ಖಾಸಗಿ ಕಂಪನಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುತ್ತಿದ್ದ ಸಾದಿಕ್, ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಹೊಸೂರು ರಸ್ತೆಯ ಕಾಲೇಜು ಬಳಿಯೇ ಆರೋಪಿಗಳನ್ನು ಬಂಧಿಸಲಾಯಿತು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !