ಗೌರಿ ಹತ್ಯೆ ಪ್ರಕರಣ: ತಪ್ಪೊಪ್ಪಿಕೊಳ್ಳಲು ₹25 ಲಕ್ಷ ಆಮಿಷ

7

ಗೌರಿ ಹತ್ಯೆ ಪ್ರಕರಣ: ತಪ್ಪೊಪ್ಪಿಕೊಳ್ಳಲು ₹25 ಲಕ್ಷ ಆಮಿಷ

Published:
Updated:

ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವಂತೆ ಆರೋಪಿಗಳಿಗೆ ಒತ್ತಾಯಿಸುತ್ತಿರುವ ಎಸ್ಐಟಿ ಪೊಲೀಸರು, ತಪ್ಪೊಪ್ಪಿಕೊಂಡರೆ ₹ 25 ಲಕ್ಷ ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಮಸೇನೆ ಮುಖಂಡರು, ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದ ನಿಯೋಗ, ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

'ಆಮಿಷದ ಬಗ್ಗೆ ಆರೋಪಿ ಪರಶುರಾಮ ವಾಘ್ಮೋರೆ ಮಾಧ್ಯಮದ ಎದುರು ಹೇಳಿದ್ದಾರೆ. ಜೊತೆಗೆ, ಎಲ್ಲ ಆರೋಪಿಗಳಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಅವರನ್ನೇ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅದು ಯಾರು ಎಂಬುದನ್ನು ಪತ್ತೆ ಹಚ್ಚಬೇಕು' ಎಂದು ಮನವಿಯಲ್ಲಿ ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

  • 9

    Happy
  • 2

    Amused
  • 0

    Sad
  • 0

    Frustrated
  • 7

    Angry

Comments:

0 comments

Write the first review for this !