ಕಲಬುರ್ಗಿ ಹತ್ಯೆಯಲ್ಲೂ ಕೈವಾಡ ಶಂಕೆ

7

ಕಲಬುರ್ಗಿ ಹತ್ಯೆಯಲ್ಲೂ ಕೈವಾಡ ಶಂಕೆ

Published:
Updated:

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಕಲಬುರ್ಗಿ ಹತ್ಯೆಯಲ್ಲೂ ಈ ಆರೋಪಿಗಳ ಕೈವಾಡವಿರುವ ಬಗ್ಗೆ ಸಿಐಡಿ ಅನುಮಾನ ವ್ಯಕ್ತಪಡಿಸಿದೆ.  

ಆರೋಪಿ ಅಮೋಲ್ ಕಾಳೆ ಬಳಿ ಸಿಕ್ಕಿರುವ ಡೈರಿಯಲ್ಲಿ ಕೋಡ್‌ವರ್ಡ್‌ಗಳಿವೆ. ಅದರಲ್ಲಿ ಕಲಬುರ್ಗಿಯವರ ಹೆಸರು ಇರುವ ಅನುಮಾನವಿದೆ. ಆ ಡೈರಿಯನ್ನು ಎಸ್ಐಟಿ ಅಧಿಕಾರಿಗಳು, ಈಗಾಗಲೇ ತಜ್ಞರಿಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ತಜ್ಞರು ವರದಿ ನೀಡಲಿದ್ದಾರೆ. ಅದಾದ ಬಳಿಕ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಿಐಡಿಯ ಅಧಿಕಾರಿಯೊಬ್ಬರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !