ತಹಶೀಲ್ದಾರ್‌ ಕೊಠಡಿಗೆ ನುಗ್ಗಿದ ರೌಡಿ; ಬೆಚ್ಚಿದ ಸಿಬ್ಬಂದಿ

7
ತಾಲ್ಲೂಕು ಕಚೇರಿಯಲ್ಲಿ ರೌಡಿ ಶೀಟರ್‌ಗಳು

ತಹಶೀಲ್ದಾರ್‌ ಕೊಠಡಿಗೆ ನುಗ್ಗಿದ ರೌಡಿ; ಬೆಚ್ಚಿದ ಸಿಬ್ಬಂದಿ

Published:
Updated:
Deccan Herald

ಗೌರಿಬಿದನೂರು: ನಗರದ ತಾಲ್ಲೂಕು ‌ಕಚೇರಿ ಬುಧವಾರ ಸಂಜೆ ರೌಡಿ ಶೀಟರ್‌ಗಳ ಪ್ರವೇಶದಿಂದ ಸಿನಿಮೀಯ ಘಟನೆಗಳಿಗೆ ಸಾಕ್ಷಿಯಾಯಿತು.

ಹೊಸೂರು ಹೋಬಳಿಯ ಹಳೇ ಉಪ್ಪಾರಹಳ್ಳಿಯ ನಿವಾಸಿ ರೌಡಿ ಶೀಟರ್ ಗಿರೀಶ್ (27) ಕಾರ್ಯ ನಿಮಿತ್ತ ತಾಲ್ಲೂಕು ಕಚೇರಿಗೆ ಬಂದು ಉಪನೋಂದಣಾಧಿಕಾರಿ ಕಚೇರಿಯಲ್ಲಿದ್ದ. ಇದನ್ನು ತಿಳಿದ ನಾಗಯ್ಯರೆಡ್ಡಿ ಬಡಾವಣೆಯ ನಿವಾಸಿ ರೌಡಿ ಶೀಟರ್ ಮೈಲಾರಿ (27) ಸಹ ಲಾಂಗ್ ಸಮೇತ ಉಪನೋಂದಣಾಧಿಕಾರಿ ಕಚೇರಿಗೆ ಪ್ರವೇಶಿಸಿದ. ಈ ಇಬ್ಬರ ನಡುವೆ ಹಳೇ ವೈಷಮ್ಯ ಇದೆ. ಆಗ ಅಲ್ಲಿನ ಸಿಬ್ಬಂದಿ ಹಾಗೂ ನಾಗರಿಕರು ಬೆಚ್ಚಿ ಕೂಡಲೇ ಕಚೇರಿಯಿಂದ ಹೊರ ನಡೆದರು.

ಈ ವಿಷಯ ತಿಳಿದ ಗಿರೀಶ್, ಮೈಲಾರಿಯಿಂದ ತಪ್ಪಿಸಿಕೊಳ್ಳಲು ತಹಶೀಲ್ದಾರ್ ಎಚ್.ಶ್ರೀನಿವಾಸ್ ‌ಅವರ ಕೊಠಡಿಗೆ ನುಗ್ಗಿದ್ದಾನೆ. ಕೂಡಲೇ ತಹಶೀಲ್ದಾರ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಸ್‌ಐ ಸುಂದರ್ ಮತ್ತು ಸಿಬ್ಬಂದಿ ಬಂದು ಗಿರೀಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಮೈಲಾರಿ ತಪ್ಪಿಸಿಕೊಂಡಿದ್ದಾನೆ.

ಬರಹ ಇಷ್ಟವಾಯಿತೆ?

  • 10

    Happy
  • 3

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !