ಸಿಬ್ಬಂದಿಗೆ ಪಿಜ್ಜಾ ಪೂರೈಸಿದ ಬುಷ್

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾಗಶಃ ಸ್ಥಗಿತಗೊಂಡಿದ್ದು, ನೌಕರರು ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಸಿಬ್ಬಂದಿಗೂ ಇದರ ಬಿಸಿ ತಾಗಿದೆ.
ಸ್ವತಃ ಬುಷ್ ಹಾಗೂ ಅವರ ಪತ್ನಿ ಲಾರಾ ಬುಷ್ ಅವರು ಒಂದಿಷ್ಟು ಪಿಜ್ಜಾ ಖರೀದಿಸಿ, ತಮ್ಮ ಸಿಬ್ಬಂದಿಗೆ ನೀಡಿದ್ದಾರೆ. ಈ ಚಿತ್ರವನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಬಳಿ ಕೆಲಸ ಮಾಡುತ್ತಿರುವ ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ಸೇರಿದಂತೆ ಸಾವಿರಾರು ಸರ್ಕಾರಿ ನೌಕರರಿಗೆ ಬುಷ್ ಧನ್ಯವಾದ ಹೇಳಿದ್ದಾರೆ. ಸಂಬಳವಿಲ್ಲದಿದ್ದರೂ ದೇಶಕ್ಕಾಗಿ ಕೆಲಸ ಮಾಡುತ್ತಿರುವ ಅವರನ್ನು ಅಭಿನಂದಿಸಿದ್ದಾರೆ.
ಸರ್ಕಾರಿ ಆಡಳಿತ ಸ್ಥಗಿತಗೊಂಡು 27 ದಿನಗಳು ಕಳೆದಿದ್ದು, ಅಮೆರಿಕ ಇತಿಹಾಸದಲ್ಲೇ ಇದು ಅತ್ಯಧಿಕ ಅವಧಿಯಾಗಿದೆ.
ಬರಹ ಇಷ್ಟವಾಯಿತೆ?
2
0
2
0
1
0 comments
View All