ಯುದ್ಧಕ್ಕೆ ಸಿದ್ಧವಾಗಿರಿ: ಸೇನೆಗೆ ಷಿ ಆದೇಶ

7

ಯುದ್ಧಕ್ಕೆ ಸಿದ್ಧವಾಗಿರಿ: ಸೇನೆಗೆ ಷಿ ಆದೇಶ

Published:
Updated:
Prajavani

ಬೀಜಿಂಗ್ : ಯುದ್ಧ ಎದುರಿಸಲು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಿ ಎಂದು ಚೀನಾದ ಸೇನೆ ಪೀಪಲ್ಸ್ ಲಿಬರೇಷನ್ ಆರ್ಮಿಗೆ (ಪಿಎಲ್‌ಎ) ಅಧ್ಯಕ್ಷ ಷಿ ಜಿನ್‌ಪಿಂಗ್ ಆದೇಶಿಸಿದ್ದಾರೆ. 

ಕೇಂದ್ರ ಸೇನಾ ಸಮಿತಿಯ (ಸಿಎಂಸಿ) ಸಭೆ ಉದ್ದೇಶಿಸಿ ಮಾತನಾಡಿದ ಷಿ, ‘ಅಪಾಯ ಮತ್ತು ಸವಾಲುಗಳು ಸದಾ ಇರುತ್ತವೆ. ಶತಮಾನದಲ್ಲಿಯೇ ಕಾಣದಿರುವಂತಹ ಮಹತ್ತರ ಬದಲಾವಣೆಗಳಿಗೆ ವಿಶ್ವ ಸಾಕ್ಷಿಯಾಗುತ್ತಿದೆ. ಸೇನೆ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು’ ಎಂದು ಹೇಳಿದ್ದಾಗಿ ಚೀನಾ ಡೈಲಿ ವರದಿ ಮಾಡಿದೆ. 

‘ಚೀನಾ, ಅಭಿವೃದ್ಧಿಗೆ ವ್ಯೂಹಾತ್ಮಕ ಅವಕಾಶ ಹೊಂದಿರುವ ‌ಪ್ರಮುಖ ಕಾಲಘಟ್ಟದಲ್ಲಿದೆ. ಮಹತ್ತರ ಬದಲಾವಣೆ, ಅಂದಾಜಿಸಲಾಗದ ಅಪಾಯಗಳು ಇರುವ ಕಾಲದಲ್ಲಿ ಸಿದ್ಧತೆ ಮುಖ್ಯವಾದುದು’ ಎಂದು ಅವರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !