ಎಚ್‌ಎಎಲ್‌ ಕೊಡುಗೆ: ರಾಜ್ಯಕ್ಕೆ 13ರಂದು ರಾಹುಲ್‌

7

ಎಚ್‌ಎಎಲ್‌ ಕೊಡುಗೆ: ರಾಜ್ಯಕ್ಕೆ 13ರಂದು ರಾಹುಲ್‌

Published:
Updated:

ಬೆಂಗಳೂರು: ಎಚ್ಎಎಲ್ ಕೊಡುಗೆ ಕುರಿತಂತೆ ಕಬ್ಬನ್‌ ಪಾರ್ಕ್‌ ಬಳಿಯ ಇರುವ ಸಂಸ್ಥೆಯ ಕಾರ್ಪರೇಟ್‌ ಕಚೇರಿಯಲ್ಲಿ ಇದೇ 13ರಂದು ನಡೆಯಲಿರುವ ಸಂವಾದದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಈ ಸಂವಾದದಲ್ಲಿ ಎಚ್ಎಎಲ್ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಸೇರಿ ಆಯ್ದ ಕೆಲವರು ಪಾಲ್ಗೊಳ್ಳಲಿದ್ದಾರೆ. ಎಚ್ಎಎಲ್ ಸಂಸ್ಥೆಯ ಒಳಗೆ ಪಕ್ಷದ ವತಿಯಿಂದ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ’ ಎಂದರು.

ಅದೇ ದಿನ ಹೆಣ್ಣೂರು ಬಳಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಅವರ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಅನುಮತಿ ನೀಡಿಲ್ಲ. ಹೀಗಾಗಿ, ಆ ಕಾರ್ಯಕ್ರಮವನ್ನು ಕಾಂಗ್ರೆಸ್‌ ರದ್ದು‍ಪಡಿಸಿದೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !