‘ವೀರಶೈವ ಲಿಂಗಾಯತರಿಗೆ 2 ಎ ಪ್ರವರ್ಗ ಮೀಸಲಾತಿ ನೀಡಿ’

7
ಸಿಂದಗಿಯಲ್ಲಿ ಶ್ರೀಶೈಲ, ಕಾಶಿ ಪೀಠದ ಸ್ವಾಮೀಜಿಗಳ ಆಗ್ರಹ

‘ವೀರಶೈವ ಲಿಂಗಾಯತರಿಗೆ 2 ಎ ಪ್ರವರ್ಗ ಮೀಸಲಾತಿ ನೀಡಿ’

Published:
Updated:

ಸಿಂದಗಿ (ವಿಜಯಪುರ): ‘ವೀರಶೈವ ಲಿಂಗಾಯತ, ಹಿಂದೂ ಧರ್ಮದ ಭಾಗ ಎಂಬುದು ನಮ್ಮ ಪ್ರತಿಪಾದನೆ. ಸಮುದಾಯದ ಹಿತದೃಷ್ಟಿಯಿಂದ 2 ಎ ಪ್ರವರ್ಗದ ಮೀಸಲಾತಿ ನೀಡಿ’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ, ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಕೇಂದ್ರ, ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪಟ್ಟಣದ ಸಾರಂಗಮಠದ ಆವರಣದಲ್ಲಿ ಮಂಗಳವಾರ ನಡೆದ ಚನ್ನವೀರ ಸ್ವಾಮೀಜಿ ರಜತ ಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ‘ಅಖಂಡ ಧರ್ಮ ಒಡೆಯಲು ಮುಂದಾದವರಿಗೆ ಭಾರಿ ಹಿನ್ನಡೆಯಾಗಿದೆ’ ಎಂದರು.

‘ವೀರಶೈವ, ಲಿಂಗಾಯತ ಎರಡೂ ಬೇರೆ ಬೇರೆ ಅಲ್ಲ. ಬಸವಣ್ಣನವರ ಸಹಸ್ರ, ಸಹಸ್ರ ವಚನಗಳಲ್ಲಿ ಒಂದಾದರೂ ವಚನದಲ್ಲಿ ಲಿಂಗಾಯತ ಎಂಬ ಪದ ಬಳಕೆ ಮಾಡಿಲ್ಲ. ಅವರ ಹೆಸರನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ವೀರಶೈವ ಅನಾದಿ ಕಾಲದಿಂದಲೂ ಬಂದಿದೆ. ಎಲ್ಲ ಧರ್ಮ ಗ್ರಂಥಗಳಲ್ಲಿ ವೀರಶೈವ ಪದ ಬಳಕೆಯಾಗಿದೆ. ಲಾಭದ ದೃಷ್ಟಿಯಿಂದ, ಶಿಕ್ಷಣ ಸೌಲಭ್ಯಕ್ಕಾಗಿ ವೀರಶೈವ–ಲಿಂಗಾಯತರಿಗೆ 2 ಎ ಪ್ರವರ್ಗ ಮೀಸಲಾತಿ ನೀಡುವುದು ಯೋಗ್ಯ’ ಎಂದು ಇಬ್ಬರು ಸ್ವಾಮೀಜಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !