ಶೌಚಾಲಯದಲ್ಲಿ 2.8 ಕೆ.ಜಿ ಚಿನ್ನ ಪತ್ತೆ

7

ಶೌಚಾಲಯದಲ್ಲಿ 2.8 ಕೆ.ಜಿ ಚಿನ್ನ ಪತ್ತೆ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಬಚ್ಚಿಡಲಾಗಿದ್ದ 2.8 ಕೆ.ಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಬಾತ್ಮೀದಾರರೊಬ್ಬರು ನೀಡಿದ್ದ ಮಾಹಿತಿಯಂತೆ, ಪ್ರಯಾಣಿಕರ ಕಾಯುವಿಕೆ ಕೊಠಡಿಯ ಶೌಚಾಲಯದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅದೇ ವೇಳೆ ಚಿನ್ನ ಸಿಕ್ಕಿದ್ದು, ಅದರ ಮೌಲ್ಯ ₹87.69 ಲಕ್ಷ.

‘ಶೌಚಾಲಯದ ಕಸದ ಡಬ್ಬಿಗಳಲ್ಲಿ ಹುಡುಕಾಡಿದ್ದೆವು. ಕಪ್ಪು ಬಣ್ಣದ ಪ್ಲಾಸ್ಟಿಕ್‌ನಲ್ಲಿ ಸುತ್ತಿಡಲಾಗಿದ್ದ ಚಿನ್ನದ ಸರ ಹಾಗೂ ಬಳೆಗಳು ಸಿಕ್ಕವು. ಆದರೆ, ಇವುಗಳು ಯಾರಿಗೆ ಸೇರಿದ್ದು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಕಸ್ಟಮ್ಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ನಿಲ್ದಾಣದ ಮೂಲಕ ಚಿನ್ನ ಸಾಗಣೆ ಮಾಡಲು ಯತ್ನಿಸುತ್ತಿರುವ ವ್ಯಕ್ತಿಗಳು, ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಶೌಚಾಲಯದಲ್ಲಿ ಚಿನ್ನವಿಟ್ಟು, ಭದ್ರತಾ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದಾಗ ಅವುಗಳನ್ನು ಸಾಗಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ, ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !