ದಿ ಗುಡ್‌ ಕ್ವೆಸ್ಟ್‌ನಿಂದ ಕಂಬಳಿ ವಿತರಣೆ

7

ದಿ ಗುಡ್‌ ಕ್ವೆಸ್ಟ್‌ನಿಂದ ಕಂಬಳಿ ವಿತರಣೆ

Published:
Updated:

ಬೆಂಗಳೂರು: ಚಳಿಯಲ್ಲಿ ನಡುಗುತ್ತಾ ಫುಟ್‌ಪಾತ್‌ ಮೇಲೆ ಮಲಗಿರುವವರಿಗೆ ‘ದಿ ಗುಡ್‌ ಕ್ವೆಸ್ಟ್‌’ ಸಂಘಟನೆ ಕಂಬಳಿ ವಿತರಿಸುವ ಕಾರ್ಯಕ್ಕೆ ಮುಂದಾಗಿದೆ.

ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಉದ್ಯಮ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆಯ ಸದಸ್ಯರು ವಾರಾಂತ್ಯದಲ್ಲಿ ಸಮುದಾಯ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅದರ ಭಾಗವಾಗಿ ಈ ಬಾರಿ ಕಂಬಳಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಂಡದ ಸದಸ್ಯ, ಜೈನ್‌ ವಿಶ್ವವಿದ್ಯಾಲಯದ
ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು. 

‘ಸುಮಾರು 600ರಷ್ಟು ಕಂಬಳಿ ವಿತರಿಸುವ ಗುರಿ ಹೊಂದಿದ್ದೇವೆ. ಟ್ಯಾನರಿ ರಸ್ತೆ, ಶಿವಾಜಿನಗರ, ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ ಮುಂಭಾಗ, ಕೆ.ಆರ್‌. ಮಾರುಕಟ್ಟೆ ಸಮೀಪದ ಬಿಲಾಲ್‌ ಮಸೀದಿ, ರೈಲು ನಿಲ್ದಾಣಗಳ ಪ್ಲಾಟ್‌ ಫಾರಂಗಳಲ್ಲಿ ಕಂಬಳಿ ವಿತರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು. 

ಕಳೆದ ವಾರ ಇದೇ ತಂಡದವರು ಫುಟ್‌ಪಾತ್‌ ವಾಸಿಗಳಿಗೆ ಬಿಸಿ ಸೂಪ್‌ ವಿತರಿಸಿದ್ದರು. 

‘ವಾಟ್ಸ್‌ ಆ್ಯಪ್‌ ಮೂಲಕ ಪರಸ್ಪರ ಸಂವಹನ ನಡೆಸಿ ಕಾರ್ಯಕ್ರಮದ ಯೋಜನೆ ರೂಪಿಸಲಾಗುತ್ತದೆ. ಪ್ರತಿ ವಾರಾಂತ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೆಸರು ಹೇಳಬಯಸದ ಸದಸ್ಯರೊಬ್ಬರು ಹೇಳಿದರು.

ಅಶೋಕ್‌, ಕೀರ್ತಿ, ಸಂತೋಷ್‌ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !