ಎದೆಹಾಲು ಉಣಿಸಲು ಮಹಿಳೆಯರಿಗೆ ತಾಜ್‌ಮಹಲ್‌ನಲ್ಲಿ ಪ್ರತ್ಯೇಕ ಕೊಠಡಿ 

ಮಂಗಳವಾರ, ಜೂನ್ 18, 2019
29 °C

ಎದೆಹಾಲು ಉಣಿಸಲು ಮಹಿಳೆಯರಿಗೆ ತಾಜ್‌ಮಹಲ್‌ನಲ್ಲಿ ಪ್ರತ್ಯೇಕ ಕೊಠಡಿ 

Published:
Updated:

ನವದೆಹಲಿ: ಚಿಕ್ಕ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋದ ಮಹಿಳೆಯರಿಗೆ ಅಲ್ಲಿ ಮಗುವಿಗೆ ಹಾಲುಣಿಸುವುದೇ ದೊಡ್ಡ ಸಮಸ್ಯೆ. ಜನಜಂಗುಳಿಯಿಂದ ಕೂಡಿರುವ ಪ್ರವಾಸಿ ಸ್ಥಗಳಲ್ಲಿ ಖಾಸಗಿತನಕ್ಕೆ ಅವಕಾಶವೇ ಇರಲಾರದು. ಮಹಿಳೆಯರ ಈ ಸಮಸ್ಯೆ ಕೊನೆಗಾಣಿಸಲು ಭಾರತೀಯ ಪುರತತ್ವ ಇಲಾಖೆ ಮುಂದಾಗಿದೆ. ತನ್ನ ವ್ಯಾಪ್ತಿಗೆ ಒಳಪಟ್ಟ ತಾಜ್‌ ಮಹಲ್‌, ಫತೇಪುರ ಸಿಕ್ರಿ ಮತ್ತು ಆಗ್ರಾ ಕೋಟೆಗಳಲ್ಲಿ ಎದೆಹಾಲುಣಿಸಲೆಂದೇ ಪ್ರತ್ಯೇಕ ಖಾಸಗಿ ಕೋಣೆಗಳನ್ನು ಸಿದ್ಧಪಡಿಸುತ್ತಿದೆ. 

‘ಈ ರೀತಿಯ ವ್ಯವಸ್ಥೆಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿದೆ,’ ಎಂದು ಭಾರತೀಯ ಪುರತತ್ವ ಇಲಾಖೆಯ ಸೂಪರಿಂಡೆಂಟ್‌ ವಸಂತ್‌ ಸ್ವರಂಕರ್‌ ತಿಳಿಸಿರುವುದಾಗಿ ಸುದ್ದಿ ವೆಬ್‌ಸೈಟ್‌ ದಿ ಕ್ವಿಂಟ್‌ ವರದಿ ಮಾಡಿದೆ. 

‘ಪ್ರವಾಸಿ ಸ್ಥಳಗಳಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಹಾಲುಣಿಸಲು ಪರದಾಡುವುದನ್ನು ನಾವು ಗಮನಿಸಿದ್ದೇವೆ. ಇನ್ನು ಹೆಚ್ಚು ಜನರಿರುವ ದಿನಗಳಲ್ಲಂತಲೂ ಅವರ ಕಷ್ಟ ಹೇಳತೀರದು. ಈ ಸಮಸ್ಯೆಯನ್ನು ಮನಗಂಡಿರುವ ನಾವು, ಅವರಿಗಾಗಿ ಒಂದು ಜಾಗ ಕಲ್ಪಿಸಲು ನಿರ್ಧಿರಿಸಿದ್ದೇವೆ,’ ಎಂದೂ ಅವರು ತಿಳಿಸಿದ್ದಾರೆ. 

ಈ ಮೂರು ಸ್ಮಾರಕಗಳಲ್ಲಿ ಈಗಾಗಲೇ ಜಾಗ ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು, ಕೋಣೆಗಳಲ್ಲಿ ವ್ಯವಸ್ಥೆ ಕಲ್ಪಿಸುವ ಕಾರ್ಯಗಳೂ ನಡೆಯುತ್ತಿವೆ. ಈ ಕೋಣೆಗಳಲ್ಲಿ ಬೆಳಕಿನ ವ್ಯವಸ್ಥೆ, ಫ್ಯಾನ್‌, ಕುರ್ಚಿ, ಮೇಜುಗಳು ಇರಲಿವೆ ಎಂದು ಪುರತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  

ಹಾಲುಣಿಸುವ ಮಹಿಳೆಯರನ್ನು ಸ್ಮಾರಕದಿಂದ ಹೊರ ಕಳುಹಿಸಿದ ಪ್ರಸಂಗಗಳು ವಿದೇಶದ ಕೆಲ ಕಡೆ ನಡೆದಿವೆ. ಆದರೆ, ಭಾರತದಲ್ಲಿ ಹೊರಾಂಗಣದಲ್ಲಿ ಹಾಲುಣಿಸಲು ಅಂಥ ನಿರ್ಬಂಧಗಳೇನೂ ಇಲ್ಲ. ಅಲ್ಲದೆ, ಹಾಲುಣಿಸುವ ಮಹಿಳೆಯನ್ನು ಕಂಡ ಕೂಡಲೇ ಸುತ್ತಲ ಪುರುಷರು ಸ್ಪಂದಿಸುವ ವಾತಾವರಣವೂ ಇದೆ. ಪುರತತ್ವ ಇಲಾಖೆಯ ಸಿಬ್ಬಂದಿಯೂ ಕೂಡ ಮಹಿಳೆಗೆ ಸ್ಪಂದಿಸಿದ ಪ್ರಕರಣಗಳೂ ಇವೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 9

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !