ಮಾರ್ಗದರ್ಶನ ಮಾಡಿದ ‘ಗೂಗಲ್‌ ಬಾಯ್‌’

7

ಮಾರ್ಗದರ್ಶನ ಮಾಡಿದ ‘ಗೂಗಲ್‌ ಬಾಯ್‌’

Published:
Updated:
Deccan Herald

ಬೆಂಗಳೂರು: ಆತ ಇನ್ನೂ ‍ಪುಟ್ಟ ಬಾಲಕ. ಆದರೆ, ಮಾತು, ವಿಚಾರ, ಬುದ್ಧಿಮತ್ತೆ ಬೆಟ್ಟದಷ್ಟು ದೊಡ್ಡವು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕರಿಯರ್ ಉತ್ಸವ ಕಾರ್ಯಕ್ರಮದಲ್ಲಿ ‘ಗೂಗಲ್ ಬಾಯ್’ ಎಂದು ಖ್ಯಾತಿ ಪಡೆದಿರುವ ಕೌಟಿಲ್ಯ ಪಂಡಿತ್ ಮನಸ್ಸಿನ ಕುರಿತು ಉಪನ್ಯಾಸ ನೀಡಿದ್ದಾರೆ.

‘ಪ್ರತಿಯೊಬ್ಬರಲ್ಲಿಯೂ ಉತ್ತಮ ಸಾಮರ್ಥ್ಯವಿದೆ. ಆತ್ಮವಿಶ್ವಾಸ, ಉತ್ಸಾಹ ತುಂಬಿ, ಪ್ರಚೋದಿಸಿದರೆ ಉತ್ತಮ ಪ್ರತಿಭೆಗಳು ಹೊರಹೊಮ್ಮುತ್ತವೆ. ಈ ನಿಟ್ಟಿನಲ್ಲಿ ಮನಸ್ಸನ್ನು ತರಬೇತುಗೊಳಿಸಿದರೆ ನಿಜವಾದ ಸಾಮರ್ಥ್ಯ ಹೊರಹೊಮ್ಮುತ್ತದೆ’ ಎಂದು ಹೇಳಿದರು.

‘ಪ್ರತಿಯೊಬ್ಬರೂ ದಿನಕ್ಕೆ ಅರ್ಧ ಗಂಟೆ ಮೆದುಳು ಮತ್ತು ಮನಸ್ಸನ್ನು ಚುರುಕುಗೊಳಿಸಲು ಪ್ರಯತ್ನಿಸಿದರೆ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಕರಿಯರ್ ಉತ್ಸವದ ಸಂಸ್ಥಾಪಕ ಶ್ರೀಪಾಲ್ ಜೈನ್, ‘3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸವಕ್ಕೆ ಭೇಟಿ ನೀಡಿದ್ದಾರೆ. ಪರಿಣತ ಉದ್ಯಮಿಗಳು ಮತ್ತು ಕೌನ್ಸಿಲರ್‌ಗಳು ಭೇಟಿ ಮಾಡಿ, ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ‘ದಿ ಲೈಫ್ ಇನ್ ದಿ ಐಐಟಿ ಸೆಷನ್’, ‘ಜೆಇಇ ಪರೀಕ್ಷೆಯಲ್ಲಿ ಪಾಸಾಗುವುದು ಹೇಗೆ’, ‘ಐಐಟಿಯಲ್ಲಿ ಅಧ್ಯಯನ ಮಾಡುವುದು ಹೇಗೆ’ ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಯಿತು’ ಎಂದರು. 

ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತ, ನೃತ್ಯ ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !