ಚೀನಾಗಾಗಿ ಸರ್ಚ್ ಎಂಜಿನ್‌ ಅಭಿವೃದ್ಧಿ: ಗೂಗಲ್ ವಿರುದ್ಧ ನೌಕರರ ಪ್ರತಿಭಟನೆ

7

ಚೀನಾಗಾಗಿ ಸರ್ಚ್ ಎಂಜಿನ್‌ ಅಭಿವೃದ್ಧಿ: ಗೂಗಲ್ ವಿರುದ್ಧ ನೌಕರರ ಪ್ರತಿಭಟನೆ

Published:
Updated:

ವಾಷಿಂಗ್ಟನ್‌: ಚೀನಾಗಾಗಿ ರಹಸ್ಯವಾಗಿ ಸರ್ಚ್‌ ಎಂಜಿನ್‌ ಅಭಿವೃದ್ಧಿಪಡಿಸುವ ಕಾರ್ಯವನ್ನು ಗೂಗಲ್‌ ನಮ್ಮಿಂದ ಮಾಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ನೌಕರರು ಕಂಪನಿ ವಿರುದ್ಧ ಪತ್ರ ಬರೆದಿದ್ದಾರೆ. 1,400ಕ್ಕೂ ಹೆಚ್ಚು ನೌಕರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. 

‘ಕೆಲವು ಅಂಶಗಳ ಹುಡುಕುವಿಕೆಗೆ ನಿರ್ಬಂಧ ವಿಧಿಸುವ ‘ಸೆನ್ಸಾರ್‌ ಸ್ನೇಹಿ’ ಸರ್ಚ್ ಎಂಜಿನ್‌ನ್ನು ಚೀನಾಗಾಗಿ ಅಭಿವೃದ್ಧಿ ಮಾಡಿಕೊಡಲಾಗುತ್ತಿದೆ. ಆದರೆ, ಈ ಬಗ್ಗೆ ನೌಕರರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಈ ವಿಷಯದಲ್ಲಿ ಕಂಪನಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂದು ನೌಕರರು ಮನವಿ ಮಾಡಿದ್ದಾರೆ. 

ಚೀನಾದ ಕಠಿಣ ಸೆನ್ಸಾರ್‌ ನಿಯಮಗಳಿಗೆ ಅನುಗುಣವಾಗಿ ಈ ಎಂಜಿನ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಗೆ ‘ಡ್ರಾಗನ್‌ ಫ್ಲೈ’ ಎಂಬ ರಹಸ್ಯ ಹೆಸರು ನೀಡಲಾಗಿದೆ. ಆದರೆ, ನಾಗರಿಕರಿಂದ ಮಾಹಿತಿಯನ್ನು ಮುಚ್ಚಿಡುವಂತಹ ಯಾವುದೇ ತಂತ್ರಾಂಶ ಅಭಿವೃದ್ಧಿ ಸರಿಯಲ್ಲ ಎಂದು ನೌಕರರು ಅಭಿಪ್ರಾಯಪಟ್ಟಿದ್ದಾರೆ. 

ಕಠಿಣ ಸೆನ್ಸಾರ್‌ ನಿಯಮಗಳು ಮತ್ತು ಹ್ಯಾಕಿಂಗ್‌ ಕಾರಣ, ಎಂಟು ವರ್ಷಗಳ ಹಿಂದೆ ಗೂಗಲ್‌, ಚೀನಾದಿಂದ ತನ್ನ ಸರ್ಚ್‌ ಎಂಜಿನ್‌ ಅನ್ನು ಹಿಂತೆಗೆದುಕೊಂಡಿತ್ತು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !