ಮಾರ್ಗ ಬದಲಿಸಿದರೆ ‘ಅಲರ್ಟ್‌ ಮೆಸೇಜ್‌’

ಬುಧವಾರ, ಜೂನ್ 26, 2019
29 °C

ಮಾರ್ಗ ಬದಲಿಸಿದರೆ ‘ಅಲರ್ಟ್‌ ಮೆಸೇಜ್‌’

Published:
Updated:
Prajavani

ಸ್ಯಾನ್‌ ಫ್ರಾನ್ಸಿಸ್ಕೊ: ಪ್ರಯಾಣಿಸುವ ಸಂದರ್ಭಗಳಲ್ಲಿ ಮಾರ್ಗ ತೋರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್‌, ತನ್ನ ’ಗೂಗಲ್‌ಮ್ಯಾಪ್ಸ್‌‘ ಸೇವೆಯನ್ನು ಇನ್ನಷ್ಟು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಮುಂದಾಗಿದೆ.

ಗೂಗಲ್‌ ಮ್ಯಾಪ್ಸ್‌ ಬಳಸಿ ಪ್ರಯಾಣಿಸುವ ಸಂದರ್ಭದಲ್ಲಿ ಬಳಕೆದಾರರು/ಚಾಲಕ ವಾಹನವನ್ನು ನಿರ್ದಿಷ್ಟ ಮಾರ್ಗ ಬಿಟ್ಟು, 500 ಮೀ.ಗಿಂತ ಹೆಚ್ಚು ದೂರ ಓಡಿಸಿದಾಗ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.

ಇಂತಹ ’ಆಫ್‌–ರೂಟ್‌‘ ಸೇವೆಯನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ಗೂಗಲ್‌ ಸಂಸ್ಥೆ ಪರಿಚಯಿಸುತ್ತಿದ್ದು, ಇದಕ್ಕಾಗಿ ಗೂಗಲ್‌ ಮ್ಯಾಪ್ಸ್‌ನ ಮೆನುವಿನಲ್ಲಿ ’ಸ್ಟೇ ಸೇಫರ್‌‘ ಎಂಬ ಆಯ್ಕೆಯನ್ನು ಬಳಸಿಕೊಳ್ಳಬಹುದು ಎಂದು ಎಕ್ಸ್‌ಡಿಎ ಡೆವೆಲಪರ್ಸ್‌ ಎಂಬ ಮೊಬೈಲ್‌ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆ ವರದಿ ಮಾಡಿದೆ.

’ನಿರ್ದಿಷ್ಟ ಮಾರ್ಗ ಬಿಟ್ಟು ವಾಹನ ಚಲಿಸಿದ ಪ್ರತಿ ಸಂದರ್ಭದಲ್ಲಿಯೂ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಬಳಕೆದಾರರು ನಗರವೊಂದರ ಅಪರಿಚಿತ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಕ್ಯಾಬ್‌ ಚಾಲಕ ಮಾರ್ಗ ಬದಲಿಸಿ ಮಾಡಬಹುದಾದ ವಂಚನೆಯನ್ನು ತಡೆಗಟ್ಟುವುದು ಈ ಸೇವೆಯ ಮುಖ್ಯ ಉದ್ದೇಶ‘ ಎಂದೂ ಸಂಸ್ಥೆಯ ತನ್ನ ವರದಿಯಲ್ಲಿ ತಿಳಿಸಿದೆ.

’ಮಾರ್ಗವನ್ನು ಬಿಟ್ಟು ಚಲಿಸಿದ ಸಂದರ್ಭದಲ್ಲಿ, ಈ ಆಯ್ಕೆಯು ಪರ್ಯಾಯ ಮಾರ್ಗವನ್ನು (ರಿ ರೂಟ್‌) ತೋರಿಸುವುದಿಲ್ಲ. ಬದಲಾಗಿ, ಬಳಕೆದಾರರ ಫೋನಿಗೆ ಈ ಬಗ್ಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ.

ಚಲಿಸುತ್ತಿರುವ ರೈಲುಗಳ ಮಾಹಿತಿ, ಬಸ್‌ಗಳು ಹೊರಡುವ ಸಮಯ ಸೇರಿದಂತೆ ಹಲವಾರು ಸೇವೆಗಳನ್ನು ದೇಶದ 10 ಮಹಾನಗರಗಳಲ್ಲಿ ಆರಂಭಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !