ಗೂಗಲ್‌ ಸೋಷಿಯಲ್‌ ನೆಟ್‌ವರ್ಕ್‌ ಸ್ಥಗಿತ

7

ಗೂಗಲ್‌ ಸೋಷಿಯಲ್‌ ನೆಟ್‌ವರ್ಕ್‌ ಸ್ಥಗಿತ

Published:
Updated:

ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಆನ್‌ಲೈನ್‌ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿ ದೋಷ ಕಂಡು ಬಂದಿದ್ದರಿಂದ ತನ್ನ ಗ್ರಾಹಕರ ಐದು ಲಕ್ಷಕ್ಕೂ ಹೆಚ್ಚು ಖಾತೆಗಳಲ್ಲಿನ ಖಾಸಗಿ ದತ್ತಾಂಶ ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ತನ್ನ ಸೋಷಿಯಲ್‌ ನೆಟ್‌ವರ್ಕ್‌ ಅನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಗೂಗಲ್‌ ಸೋಮವಾರ ಘೋಷಣೆ ಮಾಡಿದೆ. 

ಫೇಸ್‌ಬುಕ್‌ಗೆ ಪರ್ಯಾಯವಾಗಿ ‘ಸನ್‌ಸೆಟ್‌’ ಗೂಗಲ್‌+ ಸೋಷಿಯಲ್‌ ನೆಟ್‌ವರ್ಕ್‌ ಅನ್ನು ಗೂಗಲ್‌ ಅಭಿವೃದ್ಧಿ ಪಡಿಸಿತ್ತು. 

‘ಸೋಷಿಯಲ್‌ ನೆಟ್‌ವರ್ಕ್‌ ಅಭಿವೃದ್ಧಿ ಮತ್ತು ನಿರ್ವಹಣೆ ವಿಷಯದಲ್ಲಿ ನಾವು ಸೋತಿದ್ದು, ನಿರೀಕ್ಷಿತ ಬಳಕೆದಾರರನ್ನು ತಲುಪುವಲ್ಲಿಯೂ ನಾವು ವಿಫಲವಾಗಿದ್ದೇವೆ. ಈ ನಿಟ್ಟಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ‘ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !