ನಿಮ್ಮ ಹೆಜ್ಜೆಜಾಡು ದಾಖಲಿಸುವ ಗೂಗಲ್‌

7
ನೀವು ಅನುಮತಿ ನೀಡದಿದ್ದರೂ ದಾಖಲಾಗುತ್ತಿದೆ ನಿಮ್ಮ ಸ್ಥಳದ ಮಾಹಿತಿ

ನಿಮ್ಮ ಹೆಜ್ಜೆಜಾಡು ದಾಖಲಿಸುವ ಗೂಗಲ್‌

Published:
Updated:

ಸ್ಯಾನ್‌ ಫ್ರಾನ್ಸಿಸ್ಕೊ: ನೀವು ಯಾವ ಕ್ಷಣದಲ್ಲಿ, ಯಾವ ಸ್ಥಳದಲ್ಲಿ ಇದ್ದೀರಿ ಎಂಬುದನ್ನು ಗೂಗಲ್‌ ನಿರಂತರವಾಗಿ ದಾಖಲಿಸುತ್ತಿದ್ದು, ನಿಮಗೆ ಇಷ್ಟವಿರಲಿ, ಬಿಡಲಿ ನಿಮ್ಮ ಓಡಾಟದ ದಾಖಲೆಯನ್ನು ಅದು ಸಂಗ್ರಹಿಸುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.  

ಆಂಡ್ರಾಯ್ಡ್‌ ಸಾಧನಗಳಲ್ಲಿ ಮತ್ತು ಐಫೋನ್‌ಗಳಲ್ಲಿ ಗೂಗಲ್‌ ಒದಗಿಸುವ ಸೇವೆಗಳ ಮೂಲಕ ನೀವಿರುವ ಸ್ಥಳದ ಮಾಹಿತಿ ದಾಖಲಿಸಲಾಗುತ್ತಿದೆ ಎಂದು ಪ್ರಿನ್ಸ್‌ಟನ್‌ನಲ್ಲಿನ ಕಂಪ್ಯೂಟರ್‌ ವಿಜ್ಞಾನ ಸಂಶೋಧಕರು ಖಚಿತಪಡಿಸಿದ್ದಾರೆ. 

ಪ್ರತಿ ಕ್ಷಣದ ನಿಮ್ಮ ಓಡಾಟದ ಮಾಹಿತಿಯನ್ನು ಹೀಗೆ ಸಂಗ್ರಹಿಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಅದರೊಂದಿಗೆ, ಅಪರಾಧಿಗಳ ಸ್ಥಳದ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರಿಗೆ ಇದರಿಂದ ಅನುಕೂಲವೂ ಆಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ನೀವು ‘ಲೊಕೇಶನ್‌ ಹಿಸ್ಟರಿ’ಯನ್ನು ಯಾವುದೇ ಕ್ಷಣದಲ್ಲಿ ಬಂದ್‌ ಮಾಡಬಹುದು. ಇದರಿಂದ ನಿಮ್ಮ ಓಡಾಟದ ಮಾಹಿತಿ ದೀರ್ಘಾವಧಿಯವರಿಗೆ ಸಂಗ್ರಹವಾಗುವುದಿಲ್ಲ ಎಂದು ಗೂಗಲ್‌ ಸ್ಪಷ್ಟಪಡಿಸಿದೆ. 

ಆದರೆ, ಇದು ಸತ್ಯವಲ್ಲ ಎಂದು ಸಂಶೋಧಕರು ಹೇಳುತ್ತಾರೆ. ‘ಲೊಕೇಶನ್‌ ಹಿಸ್ಟರಿ’ ಬಂದ್‌ ಮಾಡಿದ್ದರೂ, ಗೂಗಲ್‌ನ ಕೆಲವು ಆ್ಯಪ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಸ್ಥಳದ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತವೆ. ನೀವು ಅನುಮತಿ ನೀಡದಿದ್ದರೂ ಈ ಆ್ಯಪ್‌ಗಳಲ್ಲಿ ನಿಮ್ಮ ಸ್ಥಳ ದತ್ತಾಂಶ ಸಂಗ್ರಹವಾಗುತ್ತಿರುತ್ತದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. 

ಉದಾಹರಣೆಗೆ, ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿನ ‘ಗೂಗಲ್‌ ಮ್ಯಾಪ್‌’ ಹಾಗೂ ‘ವೆದರ್‌ ಅಪ್‌ಡೇಟ್ಸ್‌’ನಂತಹ ಆ್ಯಪ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಪ್ರತಿಕ್ಷಣದ ಹೆಜ್ಜೆ ಜಾಡನ್ನು ದಾಖಲಿಸಿಕೊಳ್ಳುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

‘ಸ್ಥಳದ ದತ್ತಾಂಶ ಸಂಗ್ರಹಿಸಿಡುವುದು ಬಳಕೆದಾರರ ನಿಯಮ ಉಲ್ಲಂಘನೆ’ ಎಂದು ಕಂಪ್ಯೂಟರ್‌ ವಿಜ್ಞಾನಿ ಜೊನಾಥನ್‌ ಮೇಯರ್‌ ಹೇಳಿದ್ದಾರೆ.

‘ಜಾಹೀರಾತುದಾರರಿಗೆ ಮಾಹಿತಿ ಒದಗಿಸಿ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಳಕೆದಾರರ ಸ್ಥಳದ ದತ್ತಾಂಶವನ್ನು ಗೂಗಲ್‌ ಸಂಗ್ರಹಿಸುತ್ತಿದೆ’ ಎಂದು ಟೀಕಾಕಾರರು ದೂರಿದ್ದಾರೆ. 

ಮಾಹಿತಿ ಸಂಗ್ರಹ ಹೇಗೆ?
ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿನ ‘ಗೂಗಲ್‌ ಮ್ಯಾಪ್‌’ ಹಾಗೂ ‘ವೆದರ್‌ ಅಪ್‌ಡೇಟ್ಸ್‌’ನಂತಹ ಆ್ಯಪ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಪ್ರತಿಕ್ಷಣದ ಹೆಜ್ಜೆ ಜಾಡನ್ನು ದಾಖಲಿಸಿಕೊಳ್ಳುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

‘ಸ್ಥಳದ ದತ್ತಾಂಶ ಸಂಗ್ರಹಿಸಿಡುವುದು ಬಳಕೆದಾರರ ನಿಯಮ ಉಲ್ಲಂಘನೆ’ ಎಂದು ಕಂಪ್ಯೂಟರ್‌ ವಿಜ್ಞಾನಿ ಜೊನಾಥನ್‌ ಮೇಯರ್‌ ಹೇಳಿದ್ದಾರೆ.

‘ಜಾಹೀರಾತುದಾರರಿಗೆ ಮಾಹಿತಿ ಒದಗಿಸಿ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಳಕೆದಾರರ ಸ್ಥಳದ ದತ್ತಾಂಶವನ್ನು ಗೂಗಲ್‌ ಸಂಗ್ರಹಿಸುತ್ತಿದೆ’ ಎಂದು ಟೀಕಾಕಾರರು ದೂರಿದ್ದಾರೆ.

ಮಾಹಿತಿ ಸಂಗ್ರಹಕ್ಕೆ ತಡೆ ಹೇಗೆ? 
ಗೂಗಲ್‌ ನಿಮ್ಮ ಓಡಾಟದ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಯಬೇಕೆಂದರೆ, ‘ಲೊಕೇಶನ್‌ ಹಿಸ್ಟರಿ’ ಬಂದ್‌ ಮಾಡುವುದರ ಜೊತೆಗೆ, ‘ವೆಬ್‌ ಅಂಡ್‌ ಆ್ಯಪ್‌ ಆ್ಯಕ್ಟಿವಿಟಿ’ ಸೆಟ್ಟಿಂಗ್‌ ಆಫ್‌ ಮಾಡಿಕೊಳ್ಳಬೇಕು. ಈ ‘ವೆಬ್‌ ಅಂಡ್‌ ಆ್ಯಪ್‌ ಆ್ಯಕ್ಟಿವಿಟಿ’ ಚಾಲನೆಯಲ್ಲಿದ್ದರೆ, ನಿಮ್ಮ ಖಾತೆಯಲ್ಲಿನ ಮಾಹಿತಿ ಬೇರಾವುದೇ ಸಾಧನದಲ್ಲಿ ಸ್ವಯಂಚಾಲಿತವಾಗಿ ದಾಖಲಾಗುತ್ತಿರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಕೆಲವೊಂದು ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ವೆಬ್‌ ಅಂಡ್‌ ಆ್ಯಪ್‌ ಆ್ಯಕ್ಟಿವಿಟಿ ಸೆಟ್ಟಿಂಗ್‌ 
ಲಭ್ಯವಿರುವುವುದಿಲ್ಲ.

*
ಬಳಕೆದಾರರು ‘ಲೊಕೇಶನ್‌ ಹಿಸ್ಟರಿ’ಯನ್ನು ಯಾವುದೇ ಕ್ಷಣದಲ್ಲಿ ಬಂದ್‌ ಮಾಡಬಹುದು. ಇದರಿಂದ ಅವರ ಓಡಾಟದ ಮಾಹಿತಿ ದೀರ್ಘಾವಧಿಯವರೆಗೆ ಸಂಗ್ರಹವಾಗುವುದಿಲ್ಲ.
–ಗೂಗಲ್‌

Tags: 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !