ಗೌಹಾರ್‌ ಖಾನ್‌ಗೆ ಅವರೇ ಹೀರೊ

7

ಗೌಹಾರ್‌ ಖಾನ್‌ಗೆ ಅವರೇ ಹೀರೊ

Published:
Updated:
Deccan Herald

ಗೌಹಾರ್‌ ಖಾನ್‌ ಚಂದದ ನಿಲುವು, ನೀಳಕಾಯದ ಚೆಲುವೆ. ಮೂವತ್ತೈದರ ಹರೆಯದ ಈ ಚೆಲುವೆಯ ಬದುಕಿನಲ್ಲಿ ತನಗೆ ತಾನೇ ಹೀರೊ ಎಂದು ಹೇಳಿಕೊಂಡಿದ್ದಾಳೆ.

ಬಿಗ್‌ಬಾಸ್‌ ಸರಣಿಯಲ್ಲಿ ಪಾಲ್ಗೊಂಡ ನಂತರವೇ ಈ ರೂಪದರ್ಶಿ ಬಾಲಿವುಡ್‌ಗೆ ಕಾಲಿಟ್ಟಿದ್ದು. ಇತ್ತೀಚಿನ ರಾಕೆಟ್‌ ಸಿಂಗ್‌, ಬೇಗಂ ಜಾನ್‌ ಮುಂತಾದ ಚಿತ್ರಗಳಲ್ಲಿಯ ಮನೋಜ್ಞ ಅಭಿನಯದಿಂದ ಗಮನಸೆಳೆದಾಕೆ.

ಮಾಡೆಲಿಂಗ್‌ನಲ್ಲಿದ್ದಾಗ ಮಾರ್ಜಾಲ ನಡಿಗೆಯ ಮೂಲಕವೇ ಜಾಹೀರಾತು ಪ್ರಪಂಚದಲ್ಲಿ ಮಿಂಚಿದ್ದಳು. ಈ ನಡುವೆ ಕೋರಿಯೋಗ್ರಾಫರ್‌ ಮೆಲ್ವಿನ್‌ ಲುಯಿಸ್‌ ಜೊತೆಗೆ ಸ್ನೇಹವೇ ಪ್ರೀತಿಯೇ ಎಂಬ ಸಂಬಂಧದಲ್ಲಿಯೇ ಇದ್ದಾಕೆ. ಗೌಹಾರ್‌ ಖಾನ್‌ಗೆ ಪ್ರೀತಿ, ಪ್ರೇಮ ಹಾಗೂ ಹೃದಯ ಭಗ್ನವಾಗುವುದು ಹೊಸತೇನಲ್ಲ. ಆದರೆ ಬದುಕಿನಲ್ಲಿ ಬಂದದ್ದೆಲ್ಲವನ್ನೂ ಸ್ವೀಕರಿಸಿ, ಅದಮ್ಯ ಜೀವನಪ್ರೀತಿಯಿಂದ ಬದುಕುತ್ತಿರುವ ಚೆಲುವೆಯಾಕೆ.

ಅವಳ ಈ ಗಟ್ಟಿತನಕ್ಕೆ ಯಾರು ಮಾಡೆಲ್‌ ಎಂದು ಕೇಳಿದಾಗ, ನನ್ನ ಜೀವನದಲ್ಲಿ ನಾನೇ ಯಾವತ್ತಿಗೂ ಹೀರೊ. ಎಂದೂ ಸೋಲದ ಹೀರೊ ಎಂದು ಹೇಳಿಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !