ಜ. 3ಕ್ಕೆ ‘ದೇಸಿ ಆಹಾರ ಸಂಪೂರ್ಣ ಆರೋಗ್ಯ’ ಉಪನ್ಯಾಸ

7

ಜ. 3ಕ್ಕೆ ‘ದೇಸಿ ಆಹಾರ ಸಂಪೂರ್ಣ ಆರೋಗ್ಯ’ ಉಪನ್ಯಾಸ

Published:
Updated:
Prajavani

ಬೆಂಗಳೂರು: ದೇಸಿ ಆಹಾರ ಸಂಸ್ಕೃತಿ ಉತ್ತೇಜಿಸುವ ಸಲುವಾಗಿ ‘ದೇಸಿ ಆಹಾರ ಹಾಗೂ ಸಂಪೂರ್ಣ ಆರೋಗ್ಯ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಗ್ರಾಮೀಣ ಅಂಗಡಿಯು ನಗರದಲ್ಲಿ ಇದೇ 13ರಂದು ಹಮ್ಮಿಕೊಂಡಿದೆ.

ಆಹಾರ ತಜ್ಞ ಹಾಗೂ ಹೋಮಿಯೋಪಥಿ ವೈದ್ಯರಾದ ಡಾ. ಖಾದರ್ ಅವರು ಉಪನ್ಯಾಸ ನೀಡಲಿದ್ದಾರೆ. ಸಿರಿಧಾನ್ಯಗಳು ಮತ್ತು ಕಷಾಯಗಳಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ನಿಯಂತ್ರಣ ಮತ್ತು ನಿರ್ಮೂಲನೆ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ ಎಂದು ಗ್ರಾಮೀಣ ಅಂಗಡಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬನಶಂಕರಿ 2ನೇ ಹಂತದ ಬಿ.ವಿ.ಕಾರಂತ ರಸ್ತೆ (9ನೇ ಮುಖ್ಯರಸ್ತೆ) ಬಳಿ ಇರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅತಿಥಿಗಳಾಗಿ ಕಲಾವಿದ ಬಿ.ಸುರೇಶ್, ಪಾಲಿಕೆ ಸದಸ್ಯೆ ಡಿ.ಎಚ್.ಲಕ್ಷ್ಮಿ ಉಮೇಶ್ ಹಾಗೂ ಗ್ರಾಮೀಣ ಅಂಗಡಿಯ ಸಂಸ್ಥಾಪಕರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 10.

ಇನ್ನು ರಾಜಾಜಿನಗರ 4ನೇ ಹಂತದ 10ನೇ ಮುಖ್ಯರಸ್ತೆ ಬಳಿ ಇರುವ ಶ್ರೀರಾಮ ಮಂದಿರ ಸಭಾಂಗಣದಲ್ಲಿ 2ನೇ ಉಪನ್ಯಾಸ ಕಾರ್ಯಕ್ರಮವು ಸಂಜೆ 4ಕ್ಕೆ ನಡೆಯಲಿದೆ. ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್, ಪಾಲಿಕೆ ಸದಸ್ಯೆ ದೀಪಾ ನಾಗೇಶ್, ಶ್ರೀರಾಮ ಮಂದಿರ ಸೇವಾ ಮಂಡಳಿಯ ಉಪಾಧ್ಯಕ್ಷರಾದ ಕೆ.ಎಸ್.ಶ್ರೀಧರ್ ಪಾಲ್ಗೊಳ್ಳಲಿದ್ದಾರೆ.

ಸಂಪರ್ಕ: 9731105526

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !