ಜಿಎಸ್‌ಟಿ ವಂಚನೆ: ನಗರದ ವ್ಯಾಪಾರಿ ಬಂಧನ

7

ಜಿಎಸ್‌ಟಿ ವಂಚನೆ: ನಗರದ ವ್ಯಾಪಾರಿ ಬಂಧನ

Published:
Updated:

 ಬೆಂಗಳೂರು: ₹ 8.16 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಿದ ಆರೋಪದಡಿ ವ್ಯಾಪಾರಿಯೊಬ್ಬರನ್ನು  ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಜಿಎಸ್‌ಟಿ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ನಡೆದಿರುವ ಮೊದಲ ಬಂಧನ ಪ್ರಕರಣ ಇದಾಗಿದೆ.

‘ಎಆರ್‌ಎಸ್‌ ಎಂಟರ್‌ಪ್ರೈಸಸ್‌’ ಮಾಲೀಕ ಹಮೀದ್ ರಿಜ್ವಾನ್ ಇಸ್ಮಾಯಿಲ್  (28) ಬಂಧಿತ ಆರೋಪಿ. ಉಕ್ಕಿನ ಕಂಪನಿ ಹೊಂದಿರುವ ಇವರು 129 ವರ್ತಕರಿಗೆ 45 ಕೋಟಿ ಮೌಲ್ಯದ ಬೋಗಸ್ ಇನ್‌ವಾಯ್ಸ್‌ಗಳನ್ನು ಕೊಟ್ಟು, 8.16 ಕೋಟಿ ಜಿಎಸ್ ಟಿ ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಿಕೆರೆ ನಿವಾಸಿಯಾದ ರಿಜ್ವಾನ್‌, ಚಿಕ್ಕಬಾಣಾವರದ ಗಾಣಿಗರಹಳ್ಳಿಯಲ್ಲಿ ಕಂಪನಿ ನಡೆಸುತ್ತಿದ್ದಾರೆ. ಆರೋಪಿಯನ್ನು ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಈ ತಿಂಗಳ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್‌ ನಿತೇಶ್‌ ಕೆ. ಪಾಟೀಲ್‌ ಅವರ ನೇತೃತ್ವದಲ್ಲಿ ದಕ್ಷಿಣ ವಲಯ ಕೋರಮಂಗಲ ಸಹಾಯಕ ಆಯುಕ್ತ ಜಿ.ವಿಶ್ವನಾಥ್‌ ಆರೋಪಿಯನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !