ಜಿಎಸ್‌ಟಿ ಜಾರಿಯಾದ್ರೂ ಧಾರಣೆ ಕಡಿಮೆಯಾಗಲಿಲ್ರೀ..!

7
ಕಿರಾಣಿ ವಹಿವಾಟು: ಸಣ್ಣ ವ್ಯಾಪಾರಿಗಳಿಗೆ ಅನುಕೂಲವಿಲ್ರೀ; ಹಿಂದಿಗಿಂತ ಹೆಚ್ಚಿಗೆ ತೆರಿಗೆ ಕಟ್ಟುತ್ತಿದ್ದೇವ್ರೀ...

ಜಿಎಸ್‌ಟಿ ಜಾರಿಯಾದ್ರೂ ಧಾರಣೆ ಕಡಿಮೆಯಾಗಲಿಲ್ರೀ..!

Published:
Updated:
Deccan Herald

ವಿಜಯಪುರ:  ಏಕರೂಪ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬರೋಬ್ಬರಿ 13 ತಿಂಗಳ ಹಿಂದೆ ಜಾರಿಗೊಂಡ ಬಳಿಕ ದಿನಸಿ, ಆಹಾರ ಧಾನ್ಯಗಳ ಧಾರಣೆ ಇಳಿಮುಖಗೊಳ್ಳುವುದು ಎಂಬ ನಿರೀಕ್ಷೆ ಹುಸಿಯಾಗಿದೆ...

ಜಿಎಸ್‌ಟಿ ಸಣ್ಣ ಕಿರಾಣಿ ವರ್ತಕರಿಗೆ ಏನ್ ಅನುಕೂಲ ಇಲ್ರೀ... ಎಲ್ಲಾ ಲಾಭಾನೂ ದೊಡ್ಡವರ ಪಾಲೇ. ಹಿಂದಿನ ವ್ಯಾಟ್‌ ಪದ್ಧತಿಗಿಂತ ತುಸು ಹೆಚ್ಚೇ ತೆರಿಗೆ ಕಟ್ಟುತ್ತಿದ್ದೇವೆ...

ಜಿಎಸ್‌ಟಿ ಜಾರಿಗೊಂಡ ಬಳಿಕ ನಗರದ ಕಿರಾಣಾ ಬಜಾರ್‌ನಲ್ಲಿ ಗ್ರಾಹಕರು, ಸಣ್ಣ ವ್ಯಾಪಾರಿಗಳು ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದ ಅನಿಸಿಕೆಯಿದು.

ಪರ್ಕ್‌ ಇಲ್ರೀ:  ‘ಜಿಎಸ್‌ಟಿಯಿಂದ ನಮಗೇನು ಪರ್ಕ್‌ ಬಿದ್ದಿಲ್ಲ. ನಮ್‌ ವಹಿವಾಟು ಯಥಾಪ್ರಕಾರ ನಡೆದೈತಿ. ಈ ಹಿಂದಿನಂತೆ ಹಬ್ಬ, ಸೀಝನ್‌ಗಳಲ್ಲಿ ಧಾರಣೆ ಹೆಚ್ಚಿಸಲು ಬರಲ್ಲ. ಮಾಲು ಬಂದಂಗೆ, ಗ್ರಾಹಕರು ಕೊಂಡಂಗೆ ಧಾರಣೆ ಇರುತ್ತೆ’ ಎಂದು ನಗರದ ಕಿರಾಣಾ ಬಜಾರ್‌ನ ವ್ಯಾಪಾರಿ ಮಂಜುನಾಥ ಪಲ್ಲೇದ ತಿಳಿಸಿದರು.

‘ಜಿಎಸ್‌ಟಿಗೂ ಮುಂಚೆ ದೊಡ್ಡ ದೊಡ್ಡ ವ್ಯಾಪಾರಿ ಕುಳಗಳು ತಮ್ಮ ಗೋದಾಮುಗಳಲ್ಲಿ ಸಾಕಷ್ಟು ದಿನಸಿ, ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡುತ್ತಿದ್ದರು. ಮಾರುಕಟ್ಟೆಗೆ ಉತ್ಪನ್ನಗಳ ಪೂರೈಕೆಯಿದ್ದರೂ; ತಮ್ಮ ಸಾಮರ್ಥ್ಯದಿಂದ ಸಾಕಷ್ಟು ಖರೀದಿಸಿ, ಸಂಗ್ರಹಿಸಿಟ್ಟುಕೊಂಡು ಬಜಾರ್‌ನಲ್ಲಿ ಕೃತಕ ಬೇಡಿಕೆ ಸೃಷ್ಟಿಸುತ್ತಿದ್ದರು.

ಆ ಸಂದರ್ಭ ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಧಾರಣೆ ಗಗನಮುಖಿಯಾಗಿರುತ್ತಿತ್ತು. ಗ್ರಾಹಕರು ಹಿಡಿಶಾಪ ಹಾಕಿಕೊಂಡು ಖರೀದಿಸಲು ಮುಗಿ ಬೀಳುತ್ತಿದ್ದರು. ಇಂತಹ ಹೊತ್ತಲ್ಲಿ ತಮ್ಮಲ್ಲಿನ ಉತ್ಪನ್ನವನ್ನು ಬಜಾರ್‌ಗೆ ಪೂರೈಸಿ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಯಾವ ಲೆಕ್ಕವೂ ಇರುತ್ತಿರಲಿಲ್ಲ.

ಆದರೆ ವರ್ಷದಿಂದ ಈಚೆಗೆ ಇಂಥ ದಂಧೆಗೆ ಬಹುಪಾಲು ಕಡಿವಾಣ ಬಿದ್ದಿದೆ. ಉತ್ಪನ್ನ ಖರೀದಿಸಿ, ಸಂಗ್ರಹಿಸಿಟ್ಟುಕೊಂಡರೇ ಎಲ್ಲದಕ್ಕೂ ಜಿಎಸ್‌ಟಿ ಅನ್ವಯವಾಗುವುದರಿಂದ, ಹೆಚ್ಚಿನ ಲಾಭ ಸಿಗದಿರುವುದರಿಂದ ಗೋದಾಮು ದಾಸ್ತಾನಿಗೆ ದೊಡ್ಡ ವ್ಯಾಪಾರಿಗಳು ಬ್ರೇಕ್‌ ಹಾಕಿದ್ದಾರೆ. ಇದೇ ಜಿಎಸ್‌ಟಿಯ ಸಾಧನೆ ಎಂದರೂ ತಪ್ಪಾಗದು’ ಎಂದು ಮಂಜುನಾಥ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !