116 ವರ್ಷದ ಮಹಿಳೆಗೆ ಗಿನ್ನಿಸ್ ಗರಿ

ಬುಧವಾರ, ಮಾರ್ಚ್ 27, 2019
26 °C

116 ವರ್ಷದ ಮಹಿಳೆಗೆ ಗಿನ್ನಿಸ್ ಗರಿ

Published:
Updated:
Prajavani

ಟೋಕಿಯೊ: 116 ವರ್ಷ ವಯಸ್ಸಿನ ಜಪಾನ್‌ನ ಕೇನ್ ತನಕಾ ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಗಿನ್ನಿಸ್‌ ದಾಖಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ನೈರುತ್ಯ ಜಪಾನ್‌ನ ಫುಕುವೊಕಾದ ನರ್ಸಿಂಗ್ ಹೋಮ್‌ನಲ್ಲಿ ಶನಿವಾರ ಏರ್ಪಡಿಸಿದ್ದ  ಸಮಾರಂಭದಲ್ಲಿ ಕೇನ್ ತನಕಾ ಅವರನ್ನು ಗೌರವಿಸಲಾಯಿತು. ಅವರ ಕುಟುಂಬ ಸದಸ್ಯರು ಮತ್ತು ಮೇಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1903ರ ಜನವರಿ 2ರಂದು ಕೇನ್ ಜನಿಸಿದ್ದಾರೆ. 1922ರಲ್ಲಿ ಹೈಟಿಯೊ ತನಕಾ ಅವರನ್ನು ಮದುವೆಯಾದ ಕೇನ್ ಅವರಿಗೆ  ನಾಲ್ವರು ಮಕ್ಕಳಿದ್ದು, ಇನ್ನೊಂದು ಮಗುವನ್ನು ದತ್ತು ಪಡೆದುಕೊಂಡಿದ್ದರು.‌ ಈ ಹಿಂದಿನ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಜಪಾನಿನ ಮಹಿಳೆ ಚಿಯೊ ಮಿಯಾಕೊ ತಮ್ಮ 117 ವರ್ಷ ವಯಸ್ಸಿನಲ್ಲಿ ಮೃತಪಟ್ಟರು.

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !