ಸ್ವೆಟರ್‌ನಲ್ಲೇ ಮದುವೆಯಾದೆ!

7

ಸ್ವೆಟರ್‌ನಲ್ಲೇ ಮದುವೆಯಾದೆ!

Published:
Updated:
Deccan Herald

ನನ್ನ ಮದುವೆಗೆ ಇನ್ನೂ ಎಂಟು ದಿನಗಳಿವೆ ಎಂದಾಗ ನಾನು ನರ್ಸಿಂಗ್ ಹೋಮ್‌ನಲ್ಲಿ ಅಡ್ಮಿಟ್ ಆಗಿದ್ದೆ. ನನಗೆ ತೀವ್ರ ಜ್ವರ. ಎಲ್ಲಿ ಮದುವೆ ನಿಂತು ಹೋಗುತ್ತೆ ಎಂದು ಎಲ್ಲರಲ್ಲೂ ಹೆದರಿಕೆ ತುಂಬಿಕೊಂಡಿತ್ತು.

ಅಂತೂ ಮದುವೆ ನಾಡಿದ್ದು ಅನ್ನುವ ಹೊತ್ತಿಗೆ ಮನೆಗೆ ಬಂದಿದ್ದೆ. ಡಾಕ್ಟರ್‌ ‘ಮದ್ವೆ ಅಂತ ಸ್ನಾನ–ಗೀನ ಏನೂ ಮಾಡಬೇಡಮ್ಮ. ತಲೆಗಂತೂ ನೀರೇ ಸೋಕಬಾರದು. ಮತ್ತೆ  ಜ್ವರ ಮರುಕಳಿಸಿದರೆ ತುಂಬಾ ಕಷ್ಟ’ ಎಂದು ಕಟ್ಟಪಣೆ ಹೊರಡಿಸಿದ್ದರು. ನಾನು ಮಲಗಿದ್ದಲ್ಲಿಂದಲೇ ಬೇರೆಯವರ ಸಡಗರ, ಓಡಾಟ ನೋಡುತ್ತಿದ್ದೆ. ನಾನೇನೂ ಮದುವೆ ಬಗ್ಗೆ ಮಧುರಾತಿಮಧುರ ಕನಸಗಳನ್ನು ಕಂಡವಳಲ್ಲ. ಆದರೂ ನನ್ನಲ್ಲಿ ಮದುವೆ ಬಗ್ಗೆ ಅಪಾರ ನಿರೀಕ್ಷೆ ಇತ್ತು.

ಸ್ವೆಟರ್ ಹಾಕಿಕೊಂಡು, ಶಾಲು ಹೊದ್ದುಕೊಂಡೇ ನನ್ನ ಮದುವೆಯ ಕಾರ್ಯವೂ ಮುಗಿಯಿತು. ಮದುವೆಯಾಗಿ ಈಗ 40 ವರ್ಷಗಳಾಗಿವೆ. ಇಂದಿಗೂ ನನಗೆ ಈ ನೆನಪು ಕಾಡುತ್ತಿರುತ್ತಿದೆ. ಎಲ್ಲರ ಮದುವೆಯೂ ಸುಖಾನುಭವದ ಅನುಭವ ಕೊಡಲೇಬೇಕೆಂದಿಲ್ಲವಲ್ಲ. ‘ಏನಾಗಲೀ ಮುಂದೆ ಸಾಗು ನೀ.. ಬಯಸಿದ್ದೆಲ್ಲಾ ಸಿಗದು ಬಾಳಲ್ಲಿ...’ ಅನ್ನುವ ಹಾಡಿನಿಂದ ಸ್ಫೂರ್ತಿ ಪಡೆದು ಖುಷಿ ಅನುಭವಿಸುತ್ತೇನಷ್ಟೇ.
-ಚಂದ್ರಿಕಾ, ವಿದ್ಯಾನಗರ, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !