ಎಚ್–1ಬಿ ವೀಸಾ ಹೊಂದಿದವರಿಗೆ ಕೆಲಸಕ್ಕೆ ಉತ್ತಮ ವಾತಾವರಣ ಕೊರತೆ: ವರದಿ

7

ಎಚ್–1ಬಿ ವೀಸಾ ಹೊಂದಿದವರಿಗೆ ಕೆಲಸಕ್ಕೆ ಉತ್ತಮ ವಾತಾವರಣ ಕೊರತೆ: ವರದಿ

Published:
Updated:
Prajavani

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಉತ್ತಮ ಕೆಲಸದ ವಾತಾವರಣವೇ ಇಲ್ಲ. ಅವರೇ ಹೆಚ್ಚು ನಿಂದನೆಗೆ ಗುರಿಯಾಗುತ್ತಿದ್ದಾರೆ ಎಂದು ಅಮೆರಿಕದಲ್ಲಿರುವ ಚಿಂತಕರ ಚಾವಡಿ ಸೌಥ್ ಏಷ್ಯಾ ಸೆಂಟರ್‌ ಆಫ್‌ ದಿ ಅಟ್ಲಾಂಟಿಕ್ ಕೌನ್ಸಿಲ್‌ ವರದಿ ಮಾಡಿದೆ.

‘ಇಂತಹ ಉದ್ಯೋಗಿಗಳು ಕೆಲಸ ಮಾಡುವ ಸ್ಥಳಗಳ ಸುಧಾರಣೆ ಆಗಬೇಕು. ಗುಣಮಟ್ಟದ ಜೀವನಕ್ಕಾಗಿ ಅವರಿಗೆ ನೀಡುವ ಸಂಬಳವನ್ನು ಹೆಚ್ಚಿಸಬೇಕು ಹಾಗೂ ಉದ್ಯೋಗಿಗಳಿಗೆ ಹೆಚ್ಚಿನ ಹಕ್ಕುಗಳನ್ನು ನೀಡಬೇಕು’ ಎಂದೂ ಸಂಘಟನೆ ಪ್ರತಿಪಾದಿಸಿದೆ.

ಎಚ್–1ಬಿ ವೀಸಾ ಹೊಂದಿರುವವರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಸುಧಾರಣೆಗಳನ್ನು ತರಲಾಗುತ್ತದೆ. ಈ ಉದ್ಯೋಗಿಗಳು ಅಮೆರಿಕದಲ್ಲಿ ವಾಸಿಸಲು ಹಾಗೂ ಪೌರತ್ವ ಪಡೆಯಲು ಈ ಸುಧಾರಣಾ ಕ್ರಮಗಳು ನೆರವಾಗಲಿವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಸಂಘಟನೆ ವರದಿ ಬಿಡುಗಡೆ ಮಾಡಿದೆ.

‘ಈಗಿನ ವ್ಯವಸ್ಥೆ ಅಮೆರಿಕ ಜನರಿಗೇ ಹೆಚ್ಚು ಹಾನಿಯಾಗುತ್ತಿದೆ. ಇನ್ನೊಂದೆಡೆ ಎಚ್‌–1ಬಿ ವೀಸಾ ಹೊಂದಿದ
ವರನ್ನು ಶೋಷಣೆ ಮಾಡಲು ಅವಕಾಶ ನೀಡುತ್ತದೆ’ ಎಂದು ವರದಿ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !