ವನ್ಯಪ್ರಾಣಿಗಳ ಕೈಪಿಡಿ ಬಿಡುಗಡೆ

7

ವನ್ಯಪ್ರಾಣಿಗಳ ಕೈಪಿಡಿ ಬಿಡುಗಡೆ

Published:
Updated:
Prajavani

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗಸ್ವಾಮಿ ಟೆಂಪಲ್‌ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಕಂಡು ಬರುವ ವನ್ಯಜೀವಿಗಳ ಕೈಪಿಡಿಯನ್ನು ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ ಬಿಡುಗಡೆ ಮಾಡಿದೆ.

ವನ್ಯ ಜೀವಿ ತಜ್ಞ ಸಂಜಯ್‌ ಗುಬ್ಬಿ ಅವರ ಪರಿಕಲ್ಪನೆಯಲ್ಲಿ ಸಿದ್ಧಪಡಿಸಲಾಗಿರುವ ಈ ಕೈಪಿಡಿಯಲ್ಲಿ 41 ವನ್ಯಜೀವಿಗಳ ಚಿತ್ರಗಳು ಹಾಗೂ ವಿವರಗಳಿವೆ.

ಕರ್ನಾಟಕದಲ್ಲೇ ಇದೊಂದು ಪ್ರಪ್ರಥಮ ಪ್ರಯತ್ನ ಎಂದು ಸಂಸ್ಥೆ ಹೇಳಿದೆ. ಕೈಪಿಡಿಯಲ್ಲಿರುವ ಎಲ್ಲ ಚಿತ್ರಗಳು ಕೈಯಲ್ಲಿ ಬರೆದಿರುವ ವರ್ಣಚಿತ್ರಗಳಾಗಿವೆ. ವನ್ಯ ಜೋಸೆಫ್‌ ಅವರು ಚಿತ್ರಗಳನ್ನು ಬರೆದಿದ್ದಾರೆ. ಎಚ್‌.ಸಿ. ಪೂರ್ಣೇಶ್‌ ಅವರು ಪ್ರಾಣಿಗಳ ವಿವರಗಳನ್ನು ಅಕ್ಷರಗಳಲ್ಲಿ ದಾಖಲಿಸಿದ್ದಾರೆ.

ಪ್ರಾಣಿಗಳ ಕನ್ನಡ ಹೆಸರು, ಇಂಗ್ಲಿಷ್‌ ಮತ್ತು ವೈಜ್ಞಾನಿಕ ಹೆಸರುಗಳನ್ನೂ ನಮೂದಿಸಲಾಗಿದೆ. ಸ್ಥಳೀಯವಾಗಿ ಪ್ರಚಲಿತದಲ್ಲಿರುವ ಹೆಸರುಗಳನ್ನೇ ಬಳಸಲಾಗಿದೆ. 

ತಮ್ಮ ಸುತ್ತಮುತ್ತಲಿನ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೈಪಿಡಿಯನ್ನು ಸ್ಥಳೀಯ ಜನರಿಗೆ, ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ಫೌಂಡೇಷನ್‌ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !