ಹಂಗಳಕ್ಕೆ ವಿದೇಶಿ ಪ್ರಶಿಕ್ಷಣಾರ್ಥಿಗಳ ಭೇಟಿ

7
ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಪ್ರತಿನಿಧಿಗಳು

ಹಂಗಳಕ್ಕೆ ವಿದೇಶಿ ಪ್ರಶಿಕ್ಷಣಾರ್ಥಿಗಳ ಭೇಟಿ

Published:
Updated:
Deccan Herald

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮ ಪಂಚಾಯಿತಿಗೆ ಸೋಮವಾರ ಆಫ್ರಿಕಾ ಮತ್ತು ಮಧ್ಯ ಏಷ್ಯಾದ 16 ದೇಶಗಳ ಪ್ರಶಿಕ್ಷಣಾರ್ಥಿಗಳು ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಘಾನಾ, ಇಥಿಯೋಪಿಯಾ, ಅಲ್ಗೇರಿಯಾ, ಮಾಲಿ, ಉಗಾಂಡ, ಸುಡಾನ್‌ ಸೇರಿದಂತೆ ವಿವಿಧ ದೇಶಗಳ ಪ್ರಶಿಕ್ಷಣಾರ್ಥಿಗಳು ಹೈದರಾಬಾದ್‌ನ ಎನ್ಐಆರ್‌ಡಿ ಮತ್ತು ಪಿಆರ್ ಸಂಸ್ಥೆ ಆಯೋಜಿಸಿದ್ದ ತರಬೇತಿ ಮತ್ತು ಅಧ್ಯಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಹಂಗಳ ಗ್ರಾಮ ಪಂಚಾಯಿತಿಗೆ ಕಳುಹಿಸಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶೀಲಾ, ಉಪಾಧ್ಯಕ್ಷೆ ಸುಜಾತಾ, ಪಿಡಿಒ ಕುಮಾರಸ್ವಾಮಿ ಅವರು ಪ್ರಶಿಕ್ಷಣಾರ್ಥಿಗಳನ್ನು ಬರಮಾಡಿ ಕೊಂಡರು. ಗ್ರಾ.ಪಂ.ನ ಆಡಳಿತ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನದ ಕುರಿತು ಕುಮಾರಸ್ವಾಮಿ ವಿವರಿಸಿದರು.

‘ಗ್ರಾ.ಪಂ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ಇದರಿಂದ ಜನರ ಜೀವನಮಟ್ಟದಲ್ಲಿ ಆಗಿರುವ ಸುಧಾರಣೆ ಬಗ್ಗೆ ಅಧ್ಯಯನ ನಡೆಸಲು ಇಲ್ಲಿಗೆ ಬಂದಿದ್ದೇವೆ’ ಎಂದು ಪ್ರಶಿಕ್ಷಣಾರ್ಥಿಯೊಬ್ಬರು ತಿಳಿಸಿದರು.

ಗ್ರಾಮದಲ್ಲಿರುವ ಲಿಡ್ಕರ್ ಸಂಸ್ಥೆಯ ಚಮ್ಮಾರ ಕುಟೀರ ಹಾಗೂ ಶಾಲಾ– ಕಾಲೇಜಿಗೆ ಪ್ರಶಿಕ್ಷಣಾರ್ಥಿಗಳು ಭೇಟಿ ನೀಡಿದರು.

ಪಂಚಾಯಿತಿ ಸದಸ್ಯರಾದ ಮಂಜುನಾಥ್, ನಾಗಮಲ್ಲು, ಮೂರ್ತಿ, ಮಹದೇವೇಗೌಡ, ಲಿಡ್ಕರ್ ಸಂಘದ ಅಧ್ಯಕ್ಷ ಮೇಟಯ್ಯ, ಸಿದ್ದಪ್ಪಾಜಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !