ಆ್ಯಸಿಡ್ ದಾಳಿ: ಸ್ನೇಹಿತೆ ಸೆರೆ

7

ಆ್ಯಸಿಡ್ ದಾಳಿ: ಸ್ನೇಹಿತೆ ಸೆರೆ

Published:
Updated:

ಬೆಂಗಳೂರು: ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿ ಶುಭಾ ಗೌಡ ಎಂಬುವರ ಮೇಲೆ ಆ್ಯಸಿಡ್ ಎರಚಿದ್ದ ಆರೋಪದಡಿ, ಅವರ ಸ್ನೇಹಿತೆ ರೂಪಾಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಶುಭಾ, ವಿವಾಹಿತೆ. ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರವಾಗಿ 3 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ನಗರದಲ್ಲಿ ನೆಲೆಸಿದ್ದರು.

‘ಶುಭಾ ಅವರ ಮನೆಗೆ ನುಗ್ಗಿದ್ದ ರೂಪಾ, ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್‌ನ್ನು ಮೈಮೇಲೆ ಎರಚಿ ಪರಾರಿಯಾಗಿದ್ದಳು’.

‘ಗಾಯಗೊಂಡ ಶುಭಾ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಅವರು ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಾರ್ಖಾನೆಯಲ್ಲಿ ಶುಭಾ ಜೊತೆಯೇ ಕೆಲಸ ಮಾಡುತ್ತಿದ್ದ ರೂಪಾ, ಸ್ನೇಹಿತೆಯಾಗಿದ್ದರು. ಅವರಿಬ್ಬರ ನಡುವೆ ಹಣಕಾಸಿನ ವ್ಯವಹಾರ ಸಂಬಂಧ ಮೈಮನಸ್ಸು ಮೂಡಿತ್ತು. ಅದೇ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಳು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !