ವಿದ್ಯಾರ್ಥಿ, ಸರ್ಕಾರಿ ನೌಕರರ ಹೆಸರಿನಲ್ಲೂ ಎನ್‍ಎಂಆರ್‌!

ಸೋಮವಾರ, ಮೇ 20, 2019
33 °C
ಹನೂರು: ಕಣ್ಣೂರು ಗ್ರಾ.ಪಂ ನಲ್ಲಿ ಎರಡು ವರ್ಷವಾದರೂ ಬಾರದ ಉದ್ಯೋಗ ಖಾತರಿ ಹಣ

ವಿದ್ಯಾರ್ಥಿ, ಸರ್ಕಾರಿ ನೌಕರರ ಹೆಸರಿನಲ್ಲೂ ಎನ್‍ಎಂಆರ್‌!

Published:
Updated:
Prajavani

ಹನೂರು: ತಾಲ್ಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮತ್ತು ಗ್ರಾಮ ಪಂಚಾಯಿತಿ ನೌಕರನ ಹೆಸರಿನಲ್ಲಿ ಎನ್ಎಂಆರ್‌ (ಮಾನವ ದಿನಗಳ ಹಾಜರಾತಿ ನೋಂದಣಿ) ತೆಗೆದಿರುವುದು ಬೆಳಕಿಗೆ ಬಂದಿದೆ. ‌

ನರೇಗಾದ ಫಲಾನುಭವಿಗಳ ಹೆಸರಿನಲ್ಲಿ ಎನ್‌ಎಂಆರ್‌ ತೆಗೆಯದೇ, ಇತರರ ಹೆಸರಿನಲ್ಲಿ ತೆಗೆಯಲಾಗಿದೆ. ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ್‌ ಎಂಬ ಕಂಪ್ಯೂಟರ್‌ ಆಪರೇಟರ್‌ ಅಕ್ರಮವಾಗಿ ಈ ರೀತಿ ಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಆಶ್ರಯ ಯೋಜನೆಗಳಡಿ ಮನೆ ನಿರ್ಮಿಸಿಕೊಂಡು ಎರಡು ವರ್ಷಗಳು ಕಳೆದರೂ ಫಲಾನುಭವಿಗಳಿಗೆ ನರೇಗಾ ಹಣ ಬಂದಿಲ್ಲ ಎಂಬ ಆರೋಪ‍ ಕೇಳಿ ಬಂದಿತ್ತು. ಇದರ ಪರಿಶೀಲನೆಗಾಗಿ ಕಳೆದ ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್‌ ಅವರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದಾಗ ಅಕ್ರಮ ಎಸ‌ಗಿರುವುದು ಗೊತ್ತಾಗಿದೆ. 

ಗ್ರಾಮದಲ್ಲಿ ಇದುವರೆಗೆ ಇದುವರೆಗೂ 130 ಫಲಾನುಭವಿಗಳು ನರೇಗಾ ಹಣದಿಂದ ವಂಚಿತರಾಗಿರುವುದು ಈ ಸಂದರ್ಭದಲ್ಲಿ ತಿಳಿದು ಬಂದಿದೆ. 

ಯೋಜನೆ ಫಲಾನುಭವಿಗಳ ಆಧಾರ್, ಹಾಗೂ ಖಾತೆ ಸಂಖ್ಯೆ ಬದಲಾಯಿಸಿದ ಪರಿಣಾಮ 2016-17ರಲ್ಲಿ ಮನೆ ನಿರ್ಮಿಸಿದ 37 ಫಲಾನುಭವಿಗಳಿಗೆ ಇದುವರೆಗೂ ಉದ್ಯೋಗ ಖಾತ್ರಿ ಯೋಜನೆ ಹಣ ಬಿಡುಗಡೆಯಾಗಿಲ್ಲ. 2017-18ರಲ್ಲಿ 93 ಫಲಾನುಭವಿಗಳು ಇದರಿಂದ ವಂಚಿತರಾಗಿದ್ದಾರೆ.

ಎನ್‌ಎಂಆರ್‌ ಪ್ರಕ್ರಿಯೆ: ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದ್ದಂತೆ ಫಲಾನುಭವಿ ಹೆಸರಿನಲ್ಲಿ ಎನ್‍ಎಂಆರ್ ತೆಗೆದು ಉದ್ಯೋಗ ಖಾತರಿ ಚೀಟಿ ವಿತರಿಸಿ ಅಡಿಪಾಯದ ಹಣದ ಜತೆಗೆ ಕೂಲಿ ಹಣ ಅವರ ಖಾತೆಗೆ ಜಮಾ ಮಾಡುವುದು. ಪ್ರತಿ ಹಂತದಲ್ಲೂ ಆಯಾ ಸಮಯದಲ್ಲೇ ಎನ್‍ಎಂಆರ್ ತೆಗೆದು ಉದ್ಯೋಗ ಖಾತರಿ ಹಣ ಖಾತೆಗೆ ಹಾಕುವುದು ನಿಯಮ.

ಆದರೆ, ಇಲ್ಲಿನ ಕಂಪ್ಯೂಟರ್ ಆಪರೇಟರ್ ಮನೆ ನಿರ್ಮಾಣ ಮುಕ್ತಾಯವಾದರೂ ಫಲಾನುಭವಿ ಹೆಸರಿನಲ್ಲಿ ಒಂದು ಬಾರಿಯೂ ಎನ್‍ಎಂಆರ್ ತೆಗೆದಿಲ್ಲದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸರ್ಕಾರಿ ನೌಕರರ ಹೆಸರಿನಲ್ಲೂ ಎನ್‍ಎಂಆರ್: ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ, ಗುಳೇ ಹೋಗುವುದನ್ನು ತಪ್ಪಿಸುವ ಸಲುವಾಗಿ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಗ್ರಾಮದಲ್ಲಿರುವ ನಿರುದ್ಯೋಗಿಗಳಿಗೆ ವರ್ಷದಲ್ಲಿ ಕನಿಷ್ಠ ನೂರು ದಿನ ಕೂಲಿ ನೀಡುವುದು ಇದರ ಉದ್ದೇಶ. ಆದರೆ, ಇಲ್ಲಿನ ಕಂಪ್ಯೂಟರ್ ಆಪರೇಟರ್ ಅರ್ಹ ಫಲಾನುಭವಿಗಳನ್ನು ಬಿಟ್ಟು ವಿದ್ಯಾರ್ಥಿ, ಸರ್ಕಾರಿ, ನೌಕರ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ಮೇಲೂ ಎನ್‍ಎಂಆರ್ ತೆಗೆದಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ಶಿವಪುರ ಹಾಗೂ ಜಿ.ಕೆ. ಹೊಸೂರು ಗ್ರಾಮದ ಇಬ್ಬರು ವಿದ್ಯಾರ್ಥಿಗಳು, ಕಣ್ಣೂರು ಗ್ರಾಮದ ಒಬ್ಬರು ಸರ್ಕಾರಿ ನೌಕರ ಹಾಗೂ ಜಿ.ಕೆ. ಹೊಸೂರು ಗ್ರಾಮದ ನೀರುಗಂಟಿ ಹೆಸರಿನಲ್ಲೂ ಎನ್‍ಎಂಆರ್ ತೆಗೆದಿರುವುದನ್ನು ಅಧಿಕಾರಿಗಳು ಪರಿಶೀಲನೆ ವೇಳೆ ಬಯಲಿಗೆಳೆದಿದ್ದಾರೆ. 

ತಪ್ಪಿತಸ್ಥರ ವಿರುದ್ಧ ಕ್ರಮ: ಇಒ
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಉಮೇಶ್‌ ಅವರು, ‘ಗ್ರಾಮಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನರೇಗಾ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗದಿರುವುದು, ಸರ್ಕಾರಿ ನೌಕರ, ವಿದ್ಯಾರ್ಥಿಗಳು ಹಾಗೂ ಗ್ರಾಮಪಂಚಾಯಿತಿ ನೌಕರರ ಹೆಸರಿನಲ್ಲೂ ಎನ್‍ಎಂಆರ್ ತೆಗೆದಿರುವುದು ಗೊತ್ತಾಗಿದೆ’ ಎಂದರು.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಅವರು ಉದ್ದೇಶಪೂರ್ವಕವಾಗಿ ಈ ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದು.  ಇಬ್ಬರನ್ನೂ ಬದಲಾಯಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !