ಸಂತೋಷ ಸೂಚ್ಯಂಕ: ಭಾರತದ ಸ್ಥಾನ ಕುಸಿತ

ಮಂಗಳವಾರ, ಏಪ್ರಿಲ್ 23, 2019
31 °C
ಜಾಗತಿಕ ಪಟ್ಟಿಯಲ್ಲಿ 140ನೇ ರ‍್ಯಾಂಕ್‌

ಸಂತೋಷ ಸೂಚ್ಯಂಕ: ಭಾರತದ ಸ್ಥಾನ ಕುಸಿತ

Published:
Updated:

ವಿಶ್ವಸಂಸ್ಥೆ: ಭಾರತೀಯರು ಕಳೆದ ವರ್ಷ ಸಂತೋಷದಿಂದ ಇದ್ದಷ್ಟು ಈ ವರ್ಷ ಇಲ್ಲ.

ಹೀಗಾಗಿ, ಈ ಬಾರಿ ಜಾಗತಿಕ ಪಟ್ಟಿಯಲ್ಲಿ ಭಾರತ 140ನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕಿಂತ ಏಳು ಸ್ಥಾನಗಳಷ್ಟು ಕಡಿಮೆಯಾಗಿದೆ. 2018ರಲ್ಲಿ ಭಾರತ 133ನೇ ಸ್ಥಾನದಲ್ಲಿತ್ತು.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷದ ವರದಿಯಲ್ಲಿ ಫಿನ್‌ಲ್ಯಾಂಡ್‌ ಸತತವಾಗಿ ಎರಡನೇ ವರ್ಷವೂ ಮೊದಲನೇ ಸ್ಥಾನದಲ್ಲಿದೆ.

ನಂತರದ ಸ್ಥಾನಗಳನ್ನು ಡೆನ್ಮಾರ್ಕ್‌, ನಾರ್ವೆ ಪಡೆದಿವೆ. ಪಾಕಿಸ್ತಾನ 67ನೇ ಸ್ಥಾನ, ಬಾಂಗ್ಲಾದೇಶ 125ನೇ ಸ್ಥಾನ ಮತ್ತು ಚೀನಾ 93ನೇ ಸ್ಥಾನದಲ್ಲಿದೆ. ಯುದ್ಧಪೀಡಿತ ಸೂಡಾನ್‌ ಕೊನೆಯ ಸ್ಥಾನದಲ್ಲಿದೆ.

ಮಾರ್ಚ್‌ 20ರಂದು ವಿಶ್ವ ಸಂತೋಷದ ದಿನ ಆಚರಿಸುತ್ತಿರುವುದರಿಂದ ಈ ವರದಿ ಬಿಡುಗಡೆ ಮಾಡಲಾಗಿದೆ.

ಆದಾಯ, ಸ್ವಾತಂತ್ರ್ಯ, ವಿಶ್ವಾಸ, ಆರೋಗ್ಯಕರ ಜೀವನ, ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !