ಆರೋಗ್ಯ, ರಕ್ತದಾನ ಶಿಬಿರ

7

ಆರೋಗ್ಯ, ರಕ್ತದಾನ ಶಿಬಿರ

Published:
Updated:
Deccan Herald

ನೆಲಮಂಗಲ: ಬುನಿಯಾದ್‌ ಫೌಂಡೇಷನ್‌ ಅವರು ವಿಸಿಎನ್‌ಆರ್‌ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಪಟ್ಟಣದಲ್ಲಿ ಭಾನುವಾರ ನಡೆಯಿತು.

ಬುನಿಯಾದ್‌ ಫೌಂಡೇಷನ್‌ನ ಜಲಾಲುದ್ದೀನ್‌ ಖಾದ್ರಿ, ‘ರೋಗಿಗಳು ತಮ್ಮ ಆಯ್ಕೆಗೆ ಅನುಗುಣವಾದ ಪದ್ಧತಿ ಅನುಸರಿಸಬಹುದು. ಅದಕ್ಕಾಗಿ ಆಲೊಪತಿ, ಆಯುರ್ವೇದ, ಹೋಮಿಯೊಪತಿ, ಯುನಾನಿ, ನ್ಯಾಚುರೋಪತಿ ಎಲ್ಲ ವೈದ್ಯಕೀಯ ಪದ್ಧತಿಗಳನ್ನು ಒಂದೇ ಶಿಬಿರದಲ್ಲಿ ಆಯೋಜಿಸಿದ್ದೇವೆ’ ಎಂದರು.

ವಿಸಿಎನ್‌ಆರ್‌ ಆಸ್ಪತ್ರೆ ಮುಖ್ಯಸ್ಥ ಡಾ.ವಿನಯ್‌, ‘ವಿವಿಧ ವೈದ್ಯಕೀಯ ಪದ್ಧತಿಗಳ ಬಳಕೆ ಮತ್ತು ಅಡ್ಡಪರಿಣಾಮದ ಬಗ್ಗೆ ಜನರನ್ನು ಜಾಗೃತಗೊಳಿಸಲು ಆರೋಗ್ಯ ವರ್ಧನೆ ಮತ್ತು ಸಂರಕ್ಷಣೆಯ ಕಾರ್ಯಾಗಾರವನ್ನು ಸಹ ಹಮ್ಮಿಕೊಳ್ಳಲಾಗಿದೆ’ ಎಂದರು. ಆರೋಗ್ಯ ಶಿಬಿರವನ್ನು ಪುರಸಭೆ ಸದಸ್ಯ ಎನ್‌.ಪಿ.ಹೇಮಂತಕುಮಾರ್‌, ರಕ್ತದಾನ ಶಿಬಿರವನ್ನು ಪಿಳ್ಳಪ್ಪ ಉದ್ಘಾಟಿಸಿದರು.

550 ಜನರು ಶಿಬಿರದಲ್ಲಿ ಭಾಗವಹಿಸಿದ್ದರು. ಉಚಿತ ಔಷಧ ವಿತರಣೆ ನಡೆಯಿತು. 60 ಯೂನಿಟ್‌ ರಕ್ತ ಸಂಗ್ರಹವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !