ಬಣ್ಣಗಳಲ್ಲಿ ಆರೋಗ್ಯ

ಬುಧವಾರ, ಜೂನ್ 19, 2019
22 °C

ಬಣ್ಣಗಳಲ್ಲಿ ಆರೋಗ್ಯ

Published:
Updated:

ಬ್ರೆಡ್‌ನಿಂದ ಚಿಪ್ಸ್‌ವರೆಗೆ ಯಾವುದೇ ಕರಿದ ಪದಾರ್ಥವಿರಲಿ ಅವುಗಳಲ್ಲಿ ಅನೇಕ ತಿನಿಸುಗಳು ಕಂದು ಬಣ್ಣದ್ದಾಗಿರುತ್ತವೆ. ಅನೇಕ ನೈಸರ್ಗಿಕ ಆಹಾರಗಳನ್ನು ಗಮನಿಸಿದರೆ ಅವು ಕಣ್ಣಿಗೆ ರಾಚುವ ಗಾಢ ಬಣ್ಣದಿಂದ ಕೂಡಿರುತ್ತವೆ. ಅವುಗಳು ಕಣ್ಣಿಗೆ ಇಷ್ಟವಾಗುವ ಬಣ್ಣದಿಂದ ಕೂಡಿರುತ್ತವೆ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ. ಉದಾಹರಣೆಗೆ ಹಸಿರು ತರಕಾರಿಗಳು, ಹಣ್ಣು, ಸೊಪ್ಪು. ಅವುಗಳನ್ನು ತಿನ್ನುವುದರಿಂದ ದೇಹಕ್ಕೂ, ಮನಸ್ಸಿಗೂ ಹಿತ. ಅಂತಹ ಕೆಲವು ಗಾಢ ಬಣ್ಣದ ತಿನಿಸುಗಳ ಕುರಿತು ಇಲ್ಲಿದೆ ವಿವರ.

ಹೃದಯಕ್ಕೆ ಕೆಂಪು ಉತ್ತಮ: ಸಂಶೋಧನೆಗಳ ಪ್ರಕಾರ ಲೈಕೋಪೀನ್‌ ಹಾಗೂ ಕೆಂಪು ಬಣ್ಣದ ಪೈಕೋ
ನ್ಯೂಟ್ರಿಯೆಂಟ್ ಅಂಶವು ಟೊಮೆಟೊದಲ್ಲಿದೆ. ಈ ಅಂಶವು ಹಾರ್ಟ್‌ಅಟ್ಯಾಕ್‌ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣವು ಅಧಿಕ
ವಾಗಿರುವುದರಿಂದ ಇದು ಹೃದಯಕ್ಕೆ ಸಂಬಂಧಿಸಿದ ತೊಂದರೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

ಕಿತ್ತಳೆ ಪ್ರತಿರಕ್ಷಣ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್‌) ಯನ್ನು ಉತ್ತಮಗೊಳಿಸುತ್ತದೆ: ಕ್ಯಾರೆಟ್‌ನಲ್ಲಿನ ಬೇಟಾ–ಕ್ಯಾರೋಟಿನ್ಸ್‌ ಅಂಶವು ಕ್ಯಾರೆಟ್‌ನ ಬಣ್ಣವನ್ನು ಹೆಚ್ಚಿಸುತ್ತವೆ. ಈ ಎರಡು ಅಂಶಗಳು ಮನುಷ್ಯನ ದೇಹಕ್ಕೆ ‘ವಿಟಮಿನ್ ಎ’ಯನ್ನು ಒದಗಿಸುತ್ತವೆ. ವಿಟಮಿನ್‌ ಎ ಅಂಶ ದೇಹದಲ್ಲಿ ಹೆಚ್ಚಿದ್ದರೆ ಅದು ಪ್ರತಿರಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ರೋಗ ನಿಯಂತ್ರಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಣ್ಣಿಗೆ ಹಳದಿ ಚೆಂದ: ಮೊಟ್ಟೆಯ ಹಳದಿ ಅಂಶ ಕಣ್ಣಿಗೆ ಒಳ್ಳೆಯದು. ಆಪ್ತೋಮಾಲಜಿ ಎಂಬ ಬ್ರಿಟಿಷ್ ಜರ್ನಲ್‌ ಒಂದರ ವರದಿಯ ಪ್ರಕಾರ ಹಳದಿ ಬಣ್ಣದ ಆಹಾರವು ಕಣ್ಣಿನ ರಕ್ಷಣೆಯನ್ನು ಮಾಡುತ್ತದೆ. ವಯಸ್ಸಾದಂತೆ ಕಣ್ಣಿನಲ್ಲಿ ಪೊರೆ ಕಾಣುವುದು, ದೃಷ್ಟಿದೋಷ ಕಾಣಿಸಿಕೊಳ್ಳುವುದನ್ನು ನಿವಾರಿಸಲು ಹಳದಿ ಪದಾರ್ಥಗಳು ಸಹಾಯ ಮಾಡುತ್ತವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !