ಶನಿವಾರ, ಮೇ 30, 2020
27 °C

ಧೂಮಪಾನಿಗಳೇ ಎಚ್ಚರ: ಕೋವಿಡ್-19 ಸಾಧ್ಯತೆ ಹೆಚ್ಚು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಧೂಮಪಾನಿಗಳು ಹಾಗೂ ತಂಬಾಕು ಸೇವನೆ ಮಾಡುವವರಿಗೆ ಕೊರೊನಾ ವೈರಸ್‌ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಸಿಗರೇಟ್‌, ಬಿಡಿ, ಚುಟ್ಟ ಸೇದುವವರಲ್ಲಿ ಬೆರಳುಗಳು ಮತ್ತು ತುಟಿಗಳು ಸಂಪರ್ಕದಲ್ಲಿ ಇರುವುದರಿಂದ ಧೂಮಪಾನಿಗಳಿಗೆ ಬೇಗನೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಇವರಿಗೆ ಶ್ವಾಸಕೋಶದ ಸಮಸ್ಯೆಗಳು ಇದ್ದರೆ ಅಪಾಯ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸೇದಿ ಬೀಸಾಡಿರುವ ಸಿಗರೇಟ್‌ ಅಥವಾ ಬಿಡಿಯ ತುಂಡುಗಳಿಂದಲೂ ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಅಪಾಯ ಇದೆ.

ಧೂಮಪಾನ ಮಾಡುವವರಲ್ಲಿ ಮೊದಲೇ ಶ್ವಾಸಕೋಶ ಸಮಸ್ಯೆ ಇರುತ್ತದೆ. ಇವರಿಗೆ ಸೋಂಕು ಹರಡಿದರೆ ಉಸಿರಾಟ ಸಮಸ್ಯೆ ಎದುರಾಗಲಿದೆ. ಶ್ವಾಸನಾಳ ಬ್ಲಾಕ್‌ ಆಗುವುದರಿಂದ ಅಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ನ್ಯುಮೋನಿಯಾ ಕಾಣಿಸಿಕೊಂಡು ಅಪಾಯ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು