ನವದೆಹಲಿ: ದೇಶದಲ್ಲಿ ಸುಮಾರು ಶೇ 80ರಷ್ಟು ಹದಿಹರೆಯದ ಹುಡುಗಿಯರು ಮುಟ್ಟಿನ ಸಮಸ್ಯೆಗಳಿಂದಾಗಿ ದೈನಂದಿನ ಚಟುವಟಿಕೆಗಳಲ್ಲಿ ಅಡಚಣೆಗಳನ್ನು ಅನುಭವಿಸುತ್ತಿದ್ದಾರೆ. ಶೇ 30ರಷ್ಟು ಮಂದಿ ಶಾಲೆಯನ್ನು ತಪ್ಪಿಸುತ್ತಿದ್ದಾರೆ ಎಂದು ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಮಂಡಳಿಯ ನೇತೃತ್ವದಲ್ಲಿ ನಡೆದ ಸಂಶೋಧನೆಗಳು ತಿಳಿಸಿವೆ.

ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ 'ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ' (Homoeopathy for Sustainable Health) ಎಂಬುವುದಾಗಿದೆ. ಈ ದಿನದಂದು ಮಹಿಳೆಯರು ಮತ್ತು ಹದಿಹರೆಯದವರಲ್ಲಿ ಮುಟ್ಟಿನ ಆರೋಗ್ಯ ಪರಿಸ್ಥಿತಿಗಳನ್ನು ನಿರ್ವಹಿಸಲು ಸಮಗ್ರ ಮತ್ತು ದೀರ್ಘಾವಧಿಯ ವಿಧಾನಗಳತ್ತ ಗಮನಹರಿಸಲಾಗುತ್ತಿದೆ.

ಕೇಂದ್ರ ಆಯುಷ್ ಸಚಿವ ಪ್ರತಾಪ್ರಾವ್ ಜಾಧವ್ ಮಾತನಾಡಿ, 'ಮುಟ್ಟಿನ ಆರೋಗ್ಯವು ಮಹಿಳೆಯರ ಒಟ್ಟಾರೆ ಯೋಗಕ್ಷೇಮ ಮತ್ತು ಘನತೆಗೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಸಮಗ್ರ ಆರೋಗ್ಯದ ರಕ್ಷಣೆಗೆ, ವಿಶೇಷವಾಗಿ ದೀರ್ಘಕಾಲೀನ ನಿರ್ವಹಣೆಯ ಅಗತ್ಯವಿರುವ ಪರಿಸ್ಥಿತಿಗಳಿಗೆ (ಕಾಯಿಲೆ) ಹೋಮಿಯೋಪತಿ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ' ಎಂದು ಅವರು ತಿಳಿಸಿದ್ದಾರೆ.

ಮುಟ್ಟಿನ ಆರೋಗ್ಯ ಸುಧಾರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದಾಗ್ಯೂ, ವಿಶೇಷವಾಗಿ ಹದಿಹರೆಯದವರಲ್ಲಿ ಅಸ್ವಸ್ಥತೆಗೆ ಸಕಾಲಿಕ ಚಿಕಿತ್ಸೆ ಮತ್ತು ನಿರಂತರ ಆರೈಕೆಯಲ್ಲಿ ಸವಾಲುಗಳು ಉಳಿದಿವೆ.

ಆಯುಷ್ ಸಚಿವಾಲಯದ ಕಾರ್ಯದರ್ಶಿ, ವೈದ್ಯ ರಾಜೇಶ್ ಕೋಟೆಚಾ ಮಾತನಾಡಿ, 'ಆರೋಗ್ಯ ರಕ್ಷಣಾ ವ್ಯವಸ್ಥೆಗಳು ಕೇವಲ ಪರಿಣಾಮಕಾರಿಯಾಗಿರುವುದು ಮಾತ್ರವಲ್ಲದೆ ಸುಲಭವಾಗಿ ಲಭ್ಯವಾಗುವಂತಹ ಮತ್ತು ರೋಗಿ-ಸ್ನೇಹಿಯಾಗಿರುವ ಅವಶ್ಯಕತೆ ಇದೆ. ಹೋಮಿಯೋಪತಿಯು ದೀರ್ಘಕಾಲದ ಮುಟ್ಟಿನ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸುಸ್ಥಿರ ಆರೋಗ್ಯಕ್ಕೆ ಉತ್ತಮ ಆಯ್ಕೆ' ಎಂದಿದ್ದಾರೆ.

ಆಯುಷ್ ಸಚಿವಾಲಯದ ಅಡಿಯಲ್ಲಿರುವ ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಮಂಡಳಿ (ಸಿಸಿಆರ್ಎಚ್), ಮುಟ್ಟಿನ ಆರೋಗ್ಯದ ಸವಾಲುಗಳನ್ನು ಪರಿಹರಿಸಲು ಸಂಶೋಧನೆ ಮತ್ತು ಇತರ ಉಪಕ್ರಮಗಳನ್ನು ವಿಸ್ತರಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಶೈಕ್ಷಣಿಕ ಪರಿಣಾಮ:

24 ರಾಜ್ಯಗಳು ಮತ್ತು 127 ಶಾಲೆಗಳ 10,000ಕ್ಕೂ ಹೆಚ್ಚು ಹದಿಹರೆಯದ ಹುಡುಗಿಯರನ್ನು ಒಳಗೊಂಡಂತೆ ಸಿಸಿಆರ್ಎಚ್ ನೇತೃತ್ವದ ಕಾರ್ಯಕ್ರಮದ ಭಾಗವಾಗಿ ಮೊದಲ ಹಂತದ ಸಂಶೋಧನೆ ನಡೆಸಲಾಗಿದೆ. (2024–2025ರಲ್ಲಿ) ಈ ಸಂಶೋಧನಾ ವರದಿಯ ಪ್ರಕಾರ, ಸುಮಾರು ಶೇ 80ರಷ್ಟು ಹುಡುಗಿಯರು ಮುಟ್ಟಿನ ಸಮಸ್ಯೆಗಳಿಂದಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸಿದ್ದಾರೆ. ಅಲ್ಲದೇ ಶೇ 30ರಷ್ಟು ಮಂದಿ ಶಾಲೆಗೆ ಗೈರುಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಸಂಶೋಧನೆ ವಿಸ್ತರಣೆ:

ಕಾರ್ಯಕ್ರಮದ ಎರಡನೇ ಹಂತವನ್ನು ಈಗ 16 ರಾಜ್ಯಗಳು ಮತ್ತು 54 ಶಾಲೆಗಳಿಗೆ ವಿಸ್ತರಿಸಲಾಗುತ್ತಿದೆ. ಇದರಲ್ಲಿ ಕೂಡ 10,000ಕ್ಕೂ ಹದಿಹರೆಯದ ಹುಡುಗಿಯರು ಇರಲಿದ್ದಾರೆ. ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸುವುದು, ಅರಿವು ಮೂಡಿಸುವುದು ಮತ್ತು ಹೋಮಿಯೋಪತಿ ಚಿಕಿತ್ಸೆ ಒದಗಿಸುವುದರ ಮೇಲೆ ಗಮನ ಹರಿಸಲಾಗುವುದು ಎಂದು ಸಿಸಿಆರ್ಎಚ್ ವಿಜ್ಞಾನಿ ಮತ್ತು ಯೋಜನಾ ಸಂಯೋಜಕಿ ಡಾ. ಅನುಪ್ರಿಯಾ ಚೌಧರಿ ಹೇಳಿದ್ದಾರೆ.

ದೀರ್ಘಕಾಲದ ಕಾಯಿಲೆಗಳಿಗೆ ಪರಿಹಾರ:

'ಅನಿಯಮಿತ ಋತುಚಕ್ರ, ಡಿಸ್ಮೆನೊರಿಯಾ (ಮುಟ್ಟಿನ ಸಮಯದಲ್ಲಿ ಕಾಡುವ ತೀವ್ರವಾದ ಹೊಟ್ಟೆ ನೋವು ಅಥವಾ ಸೆಳೆತ) ಮತ್ತು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಓಎಸ್) ನಂತಹ ಸಮಸ್ಯೆಗಳಿಗೆ ದೀರ್ಘಕಾಲದ ಆರೈಕೆಯ ಅಗತ್ಯವಿರುತ್ತದೆ. ಇದಕ್ಕೆ ಹೋಮಿಯೋಪತಿಯು ಉತ್ತಮ ಫಲಿತಾಂಶ ನೀಡಬಲ್ಲದು' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

'ಮಹಿಳೆಯರ ಆರೋಗ್ಯವು ಆರೋಗ್ಯವಂತ ಸಮಾಜದ ಅಡಿಪಾಯ. ಮುಟ್ಟಿನ ಆರೋಗ್ಯವನ್ನು ಸುಧಾರಿಸುವಲ್ಲಿ , ರೋಗಲಕ್ಷಣಗಳ ಹೊರೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಜೀವನ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಹೋಮಿಯೋಪತಿ ಚಿಕಿತ್ಸೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ' ಎನ್ನುತ್ತಾರೆ ಸಿಸಿಆರ್ಎಚ್ ಮಹಾನಿರ್ದೇಶಕ ಡಾ. ಸುಭಾಷ್ ಕೌಶಿಕ್.
.ರಾಮನಗರ: ಮುಟ್ಟಿನ ಸಮಸ್ಯೆ ಈಗ ‘ಆಸಾನ್’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.