7

ನಮ್ಮ ನಿಮ್ಮೊಳಗಿನ ಜಾಗೃತಿ

Published:
Updated:

ಯೋಗ ಚಲನಶೀಲ. ಯೋಗ ಯಾವಾಗಲೂ ಇರುತ್ತದೆ ಮತ್ತು ಏಕತಾನತೆಯಿಂದ ಇರುವುದಿಲ್ಲ. ನಿಜವಾದ ಸ್ವಯಂ ಅನುಭವಗಳ ಸೃಷ್ಟಿಯೇ ಯೋಗ.

ಪ್ರಸ್ತುತ ಸನ್ನಿವೇಶದಲ್ಲಿ ‘ನಾನು’ ಮತ್ತು ‘ನನ್ನದು’ ಎಂಬುದು ಮೇಳೈಸುತ್ತಿದೆ. ನಮ್ಮ ಬೇಕು–ಬೇಡಗಳು ಬಲಗೊಳ್ಳುತ್ತಿವೆ. ಹೀಗಾಗಿ ನಾವು ಒಬ್ಬರ ಸತ್ಯವನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ನಾವು ಒಬ್ಬರಿಗೊಬ್ಬರು ಮತ್ತು ದೇವರಿಗಿಂತ ಭಿನ್ನರಾಗಿದ್ದೇವೆ ಎಂದು ಭಾವಿಸುತ್ತಿದ್ದೇವೆ.

ಸಮಾಜದ ಶ್ರೇಯೋಭಿವೃದ್ಧಿಗೆ ಸ್ವಯಂಪ್ರೇರಣೆಯ ಸೇವೆ, ಧ್ಯಾನ, ಮಂತ್ರಗಳ ಪಠಣೆ ಅಥವಾ ಗ್ರಂಥಗಳನ್ನು ಅಧ್ಯಯನ ಮಾಡುವುದು ಸೇರಿದಂತೆ ವಿವಿಧ ಆಧ್ಯಾತ್ಮಿಕ ಪದ್ಧತಿಗಳು ನಮ್ಮ ನಿದ್ರಾಹೀನತೆಯನ್ನು ತೊಲಗಿಸಲು ನೆರವಾಗುತ್ತವೆ. ಈ ಮೂಲಕ ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯುತ್ತವೆ. ಇದನ್ನೇ ನಾವು ‘ಯೋಗ’ ಎಂದು ಕರೆಯುತ್ತೇವೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಯೋಗ ಎಂದು ಯೋಚಿಸುವವರು ಹಟಯೋಗದ ಮೂಲಕ ನಿರ್ದಿಷ್ಟವಾದ ಭಂಗಿಗಳನ್ನು ಧ್ಯಾನದ ಮೂಲಕ ಮಾಡುತ್ತಾರೆ, ಸರಿಯಾದ ಕ್ರಮದಲ್ಲಿ ಜಾಗೃತಿಯಿಂದ ಮಾಡುವ ಯೋಗ ಆಧ್ಯಾತ್ಮಿಕ ಅಭ್ಯಾಸಕ್ಕೆ ಪರಿಣಾಮಕಾರಿಯಾಗಿ ಲಾಭದಾಯಕವಾಗಬಲ್ಲದು. ಯೋಗದಲ್ಲಿ ನೀವು ಮಾಡುವ ಪ್ರತಿಯೊಂದು ಭಂಗಿ ಅಥವಾ ಆಸನಗಳ ಬಗ್ಗೆ ಜಾಗೃತರಾಗಿರಬೇಕು. ಯೋಗ ಮಾಡುವ ಸಂದರ್ಭದಲ್ಲಿ ನೀವು ನಿಮ್ಮ ಕೈಗಳನ್ನು ಮೇಲೆತ್ತಿದಾಗ ಅದರ ಚಲನೆಯ ಬಗ್ಗೆ ಅರಿವಿರಲಿ. ಅದೇ ರೀತಿ, ನಿಮ್ಮ ಕೈಗಳನ್ನು ಕೆಳಗಿಳಿಸುವ ಸಂದರ್ಭದಲ್ಲೂ ಅದರ ಚಲನೆ 
ಬಗ್ಗೆ ಅರಿವಿರಬೇಕು. ಈ ರೀತಿಯ ಬಾಹ್ಯ ಅರಿವಿನಿಂದಾಗಿ ನಿಮಗೆ ಆಂತರಿಕ ಅರಿವಿನ ಅನುಭವ ಆಗುತ್ತದೆ. ಈ ರೀತಿಯಲ್ಲಿ ಯೋಗ ಪದ್ಧತಿಯನ್ನು ಅನುಸರಿಸಿದರೆ, ಯೋಗ ಎಂಬುದು ಕೇವಲ ಒಂದು ವ್ಯಾಯಾಮದ ರೂಪವಲ್ಲ. ನಮ್ಮ ಆರೋಗ್ಯ ಸುಧಾರಣೆ ಮಾಡುತ್ತದೆ. ಆದರೆ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ನಮ್ಮನ್ನು ಪರಿಷ್ಕಾರ ಮಾಡುತ್ತದೆ.

ಪ್ರತಿಯೊಂದು ಕ್ರಮವನ್ನೂ ಜಾಗೃತಿಯಿಂದ ಮಾಡಿದರೆ ಅದು ಯೋಗ ಆಗುತ್ತದೆ. ಪ್ರತಿಯೊಂದು ಸಂದರ್ಭದಲ್ಲಿಯೂ ನಾವು ನಿಶ್ಚಿತ ಆಸನಗಳ ಮೂಲಕ ಯೋಗವನ್ನು ಮಾಡಬೇಕಿದೆ. ಈ ಮೂಲಕ ನಾವು ನಮ್ಮ ನಿಜ ಸ್ವರೂಪದ ಮೇಲೆ ಗಮನಹರಿಸಬಹುದಾಗಿದೆ. ಆಗ ನಮಗೆ ಶಾಂತಿ ಮತ್ತು ಏಕಾಂತದ ಅನುಭವ ಆಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !