ನಿಮಗೆ ಮನೆಯಲ್ಲಿ ನಿಮಗೆ ಅತ್ಯಂತ ಇಷ್ಟವಾಗುವ ಸ್ಥಳ ಯಾವುದು? ಅಡುಗೆಮನೆ, ಬಾಲ್ಕನಿ, ಹಾಲ್, ಬೆಡ್ರೂಮ್ – ಯಾವುದೂ ಅಲ್ಲ; ಬದಲಿಗೆ ನಿತ್ಯಕರ್ಮಕ್ಕೆ ಬಳಸುವ ‘ಬಾತ್ರೂಮ್’– ಶೌಚದ ಕೋಣೆ – ಎಂದರೆ ಆಶ್ಚರ್ಯವಾಗುವುದು ಸಹಜ. ಆದರೆ ‘ಜನರೇಷನ್ ಜೆಡ್’ಗೆ(ಹದಿನಾರರಿಂದ ಇಪ್ಪತ್ತೆಂಟು ವರ್ಷ) ಬಾತ್ರೂಮ್ ಅಚ್ಚುಮೆಚ್ಚಿನ ಮಾತ್ರವಲ್ಲ, ರಿಲಾಕ್ಸ್ ಆಗಲು ಅತ್ಯುತ್ತಮ ಜಾಗ! ಸಾಮಾನ್ಯವಾಗಿ ಐದರಿಂದ ಹದಿನೈದು ನಿಮಿಷಗಳ ಕಾಲ ಸ್ನಾನ–ಶೌಚಾದಿಗಳನ್ನು ಮುಗಿಸಿ ಬಾತ್ರೂಮಿನಿಂದ ಹೊರಬರುವುದು ಸರಿ. ಆದರೆ ಇದ್ಯಾವ ಉದ್ದೇಶವೇ ಇಲ್ಲದೇ ಗಂಟೆಗಟ್ಟಲೆ ಅಲ್ಲಿಯೇ ಕುಳಿತು ರಿಲ್ಯಾಕ್ಸ್ ಆಗುವುದು, ಚಿಕ್ಕ ಬ್ರೇಕ್ ಪಡೆಯುವುದು ಯುವಜನರ ಹೊಸ ಟ್ರೆಂಡ್. ಇದನ್ನು ‘ಬಾತ್ರೂಮ್ ಕ್ಯಾಂಪಿಂಗ್’ ಎಂದು ಕರೆಯಲಾಗುತ್ತದೆ.

ಬಾತ್ರೂಮ್ ಕ್ಯಾಂಪಿಂಗ್ ಹೊಸ ಶಬ್ದವೇನಲ್ಲ; ‘ಕ್ಯಾಂಪಿಂಗ್’ ಎಂದರೆ ಮನೆಯಿಂದ ದೂರವಾಗಿ ಹೊರಾಂಗಣದಲ್ಲಿ ತಾತ್ಕಾಲಿಕವಾಗಿ ತಂಗುವ ಡೇರೆ ಅಥವಾ ಶಿಬಿರಗಳು. ಆರಂಭದಲ್ಲಿ ಬಾತ್ರೂಮ್ನಲ್ಲಿ ಹೆಚ್ಚು ಕಾಲ ಕಳೆಯುವುದನ್ನು ಸೂಚಿಸುವ ತಮಾಷೆಯ ಪದ ಇದಾಗಿತ್ತು. ಆದರೆ ಕೋವಿಡ್ನಿಂದಾಗಿ 2020ರಲ್ಲಿ ಮನೆಯಲ್ಲಿಯೇ ಎಲ್ಲರೂ ಇರುವ ಅನಿವಾರ್ಯ ಸಂದರ್ಭ ಎದುರಾಯಿತು. ಆಗ ಖಾಸಗಿಯಾಗಿ ಕೆಲವು ಕ್ಷಣ ಕಳೆಯಲು ಈ ಪ್ರವೃತ್ತಿ ಹೆಚ್ಚಾಯಿತು. ಇದೇ ಸಮಯದಲ್ಲಿ ಸ್ಮಾರ್ಟ್ ಫೋನ್ಗಳ ಬಳಕೆ ಹೆಚ್ಚಿತು. ಆನ್ಲೈನ್ ಕ್ಲಾಸ್, ಟಿಕ್ಟಾಕ್ ವೀಕ್ಷಣೆ, ವಾಟ್ಸ್ಆ್ಯಪ್ – ಹೀಗೆ ಎಲ್ಲವನ್ನೂ ತಮ್ಮಿಷ್ಟದಂತೆ ನೋಡಲು ಬಾತ್ರೂಮ್ ಉತ್ತಮ ಸ್ಥಳ ಎನಿಸಿತು. ಹಾಗೆ ಆರಂಭವಾದದ್ದು ಇದೀಗ ಟ್ರೆಂಡ್ ಆಗಿದೆ. ‘ಕಾಲೇಜು, ಕೆಲಸ, ಓದು – ಹೀಗೆ ಬ್ಯುಸಿ ಬದುಕು ನಮ್ಮದು. ಅದರೊಂದಿಗೆ ಹಾಗೆ ಮಾಡು ಎನ್ನುವ ಸಲಹೆ, ಹೀಗೇಕೆ – ಎನ್ನುವ ಪ್ರಶ್ನೆಗಳಂತೂ ಸದಾ ಇದ್ದದ್ದೇ. ಬರೀ ಕಾಲೇಜು, ಆಫೀಸಿನಲ್ಲಿ ಮಾತ್ರವಲ್ಲ. ಮನೆಗೆ ಬಂದರೂ ಜವಾಬ್ದಾರಿ, ಕರೆಗಳು – ಹೀಗೆ ಒತ್ತಡ ಸದಾ ಇದ್ದದ್ದೇ! ಇವೆಲ್ಲದರಿಂದ ದೂರವಾಗಿ ಒಂದಷ್ಟು ಹೊತ್ತು ನಾವಾಗಿ ಇರಬಹುದಾದ ಜಾಗವೆಂದರೆ ಬಾತ್ರೂಮ್. ಇಲ್ಲಿ ಎಲ್ಲದರಿಂದ ತಪ್ಪಿಸಿಕೊಂಡು ಸುಮ್ಮನೇ ಇರಬಹುದು. ಕಾಲೇಜು, ಮನೆ ಮಾತ್ರವಲ್ಲ, ಎಷ್ಟೋ ಸಲ ಪಾರ್ಟಿ-ಫಂಕ್ಷನ್ಗಳಲ್ಲೂ ಹೀಗೆ ಬಾತ್ರೂಮ್ನಲ್ಲಿ ಸಮಯವನ್ನು ಕಳೆದಿದ್ದೇವೆ. ಒಂಥರಾ ರಿಚಾರ್ಜ್ ಆಗಲು ನಮ್ಮ ಸೇಫ್ ಸ್ಪೇಸ್ ಇದು’ ಎನ್ನುವುದು ಯುವಜನರ ಅಭಿಪ್ರಾಯ.

ಬಾತ್ರೂಮ್ ಎನ್ನುವುದು ಯಾಕೆ ಇವರ ಆಯ್ಕೆಯಾಗಿದೆ ಎಂದರೆ ಸಾಮಾನ್ಯವಾಗಿ ಬಾಗಿಲನ್ನು ಮುಚ್ಚಿ ಭದ್ರವಾಗಿ ಇರಿಸಿದರೆ, ಯಾರಿಗೂ ಪ್ರವೇಶವಿಲ್ಲದ ಒಂದು ಪ್ರತ್ಯೇಕ ಸ್ಥಳ ಬಾತ್ರೂಮ್.
ಮನೆ, ಕಾಲೇಜು, ಕೆಲಸದ ಸ್ಥಳ – ಹೀಗೆ ಎಲ್ಲಿಯೂ ಖಾಸಗಿಯಾಗಿ ಕೆಲವು ಕ್ಷಣಗಳನ್ನು ಕಳೆಯ ಬಹುದಾದಂತಹ ಈ ಸ್ಥಳ ಸುರಕ್ಷಿತವಾದದ್ದು. ಸುಮ್ಮನೆ ಕುಳಿತಿರುವುದು, ಮೊಬೈಲ್ ನೋಡು, ಡೈರಿ ಬರಿ, ಗೇಮ್ಸ್ ಆಡು, ಚಾಟ್ ಮಾಡು, ಹಾಡು ಕೇಳು – ಹೀಗೆ ತಮಗೆ ಇಷ್ಟ ಬಂದಂತೆ ಯಾವ ಅಡ್ಡಿಯೂ ಇಲ್ಲದೆ ಗಂಟೆಗಟ್ಟಲೆ ಸಮಯ ಕಳೆಯಲು ಇದು ಅತ್ಯುತ್ತಮ ಜಾಗ!

ಈ ಬಾತ್ರೂಮ್ ಕ್ಯಾಂಪಿಂಗ್ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕೆಲಮಟ್ಟಿಗೆ ಸಹಕಾರಿ. ಸಾಮಾನ್ಯವಾಗಿ ಎಲ್ಲ ಕಡೆಯೂ ಇರುವ ಬಾತ್ರೂಮ್ ವಿಶೇಷವಾದ ಖರ್ಚಿಲ್ಲದೆ ಸುಲಭವಾಗಿ ಸಿಗುವ ಒಂದು ಖಾಸಗಿ ಸ್ಥಳ. ಹೊರಪ್ರಪಂಚದ ಸದ್ದು , ಮಾತುಕತೆ ಗದ್ದಲ, ಟಿ.ವಿ.-ಮೊಬೈಲಿನ ಹಾವಳಿ, ದೂರು-ಉಪದೇಶ – ಹೀಗೆ ಮನಸ್ಸು ಅಗತ್ಯಕ್ಕಿಂತ ಹೆಚ್ಚು ಪ್ರಚೋದನೆಗೊಂಡಾಗ ಇವೆಲ್ಲದರಿಂದ ದೂರವಾಗಿ ತನ್ನಷ್ಟಕ್ಕೆ ತಾನು ಬಾತ್ರೂಮಿನಲ್ಲಿ ಕಳೆಯುವ ಕೆಲವು ಕ್ಷಣಗಳು ಒತ್ತಡವನ್ನು ಕಡಿಮೆ ಮಾಡಬಲ್ಲದು. ಸ್ವಲ್ಪ ಹೊತ್ತಿನ ಏಕಾಂತದಲ್ಲಿ ದೀರ್ಘವಾಗಿ ಉಸಿರಾಡಿ, ನಿಧಾನವಾಗಿ ಯೋಚಿಸುವುದು, ಭಾವನೆಗಳನ್ನು ಹತೋಟಿಯಲ್ಲಿಡಲು ಖಂಡಿತವಾಗಿಯೂ ಸಹಾಯವನ್ನು ಮಾಡುತ್ತದೆ. ಅದೇ ರೀತಿ ಸಿಟ್ಟು, ದುಃಖ, ಅಸಹನೆಗಳಂಥವನ್ನು ಬೇರೆಯವರ ಎದುರು ಏಕಾಏಕಿ ಹೊರಹಾಕುವುದರ ಬದಲು ಒಬ್ಬರೇ ಕುಳಿತು ಅದರ ಬಗ್ಗೆ ಯೋಚಿಸಿ ಅದನ್ನು ಗುರುತಿಸಲು ಏಕಾಂತ ಒದಗಿಸಲು ಬಾತ್ರೂಮ್ ಒಳ್ಳೆಯ ಸ್ಥಳ. ಹಾಗೆಯೇ, ವಿದ್ಯಾರ್ಥಿಗಳಿಗೆ ಗುಂಪುಗಳಲ್ಲಿದ್ದಾಗ ಯಾವುದಾದರೂ ಅಹಿತಕರ ಘಟನೆ ಸಂದರ್ಭವನ್ನು ಮುಖಾಮುಖಿಯಾಗಿ ಎದುರಿಸುವುದರ ಬದಲು ಅದರಿಂದ ಹೊರಬಂದು, ಬದಲಿ ಮಾರ್ಗವನ್ನು ಯೋಚಿಸಲು ಬಾತ್ರೂಮ್ ಉತ್ತಮ ಸ್ಥಳ.

ಆದರೆ ಬಾತ್ರೂಮ್ ಎನ್ನುವುದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುವ ಸ್ಥಳ; ಅದಕ್ಕಾಗಿಯೇ ಬಳಕೆಯಾಗಬೇಕು. ಈಗಾಗಲೇ ಸಂವಹನ, ಪರಸ್ಪರ ಸಂಪರ್ಕಗಳು ಕಡಿಮೆಯಾಗಿ ಸಂಬಂಧಗಳೇ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಹೀಗೆ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವುದು ಸರಿಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಅದರೊಂದಿಗೆ ಯುವಜನರಲ್ಲಿ ಮೊಬೈಲ್ ಚಟ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ. ಹೀಗಿರುವಾಗ ‘ಪ್ರೈವೆಸಿ’ ಹೆಸರಿನಲ್ಲಿ ಬಾತ್ರೂಮಿನಲ್ಲಿ ಒಬ್ಬರೇ ಕುಳಿತು ಸಮಯ ಸಂದರ್ಭ ಮರೆತು, ನಿರಂತರ ಮೊಬೈಲ್ ವೀಕ್ಷಣೆ, ಅತ್ಯಂತ ಅಪಾಯಕಾರಿ. ಜೊತೆಗೆ ಬೆನ್ನು ಬಗ್ಗಿಸಿ- ತಲೆತಗ್ಗಿಸಿ, ತಪ್ಪಾದ ಭಂಗಿಯಲ್ಲಿ ಕುಳಿತು ಬೆನ್ನು-ಕತ್ತು-ಕಣ್ಣುನೋವು ನಿರೀಕ್ಷಿತವೇ. ತಾಸುಗಟ್ಟಲೇ ಕುಳಿತು ಕಾಲಿಗೆ ರಕ್ತಚಲನೆಯು ಕಡಿಮೆಯಾಗುತ್ತದೆ. ಬಾತ್ರೂಮಿನಲ್ಲಿ ಸ್ನಾನ-ಶೌಚಕ್ರಿಯೆಗಳು ನಡೆಯುವುದರಿಂದ ಅಲ್ಲಿನ ಗಾಳಿಯಲ್ಲಿ ಸಹಜವಾಗಿಯೇ ಸೂಕ್ಷ್ಮಾಣುಜೀವಿಗಳು ಹೆಚ್ಚಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಕಾಲ ಕಳೆದಲ್ಲಿ ಸೋಂಕು ಬರುವ ಸಾಧ್ಯತೆ ಖಂಡಿತವಾಗಿಯೂ ಇದೆ. ಹಾಗೆಯೇ ಕಾಲೇಜು ಅಥವಾ ಕಚೇರಿಗಳಲ್ಲಿ ಹೆಚ್ಚು ಸಮಯ ಬಾತ್ರೂಮ್ ಬಳಸಿದರೆ ನಿಜವಾಗಿಯೂ ಅಗತ್ಯವಿರುವವರಿಗೆ ತೊಂದರೆಯಾಗುತ್ತದೆ. ಪದೇ ಪದೇ ಈ ರೀತಿ ಬಾತ್ರೂಮಿಗೆ ಹೋಗುವ ಅಭ್ಯಾಸವಾದರೆ ಅದು ಸಮಸ್ಯೆಗೆ ಪರಿಹಾರ ಹುಡುಕುವ ಬದಲು ತಪ್ಪಿಸಿಕೊಳ್ಳುವ, ಜವಾಬ್ದಾರಿಯಿಂದ ಪಾರಾಗುವ ಮಾರ್ಗವಾಗುತ್ತದೆ. ಸುಮ್ಮನೆ ಹೀಗೆ ಹೊತ್ತು ಕಳೆಯುವುದರಿಂದ ದಿನಚರಿ, ಓದು, ಕೆಲಸ ಎಲ್ಲದರ ಮೇಲೂ ಪರಿಣಾಮವನ್ನು ಬೀರುತ್ತದೆ. ಇದರಿಂದ ಕುಟುಂಬದವರು, ಶಿಕ್ಷಕರು, ಸಹೋದ್ಯೋಗಿಗಳ ಸಂಶಯಕ್ಕೆ ಕಾರಣವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಆತಂಕ- ಖಿನ್ನತೆ- ಕೀಳರಿಮೆ ಮುಂತಾದ ಮಾನಸಿಕ ಸಮಸ್ಯೆಗಳನ್ನು ಸೂಚಿಸುವ ನಡವಳಿಕೆಯು ಇದಾಗಿರಬಹುದು.

ಹೀಗಾಗಿ ಬಾತ್ರೂಮ್ ಕ್ಯಾಂಪಿಂಗ್ ಆಗಾಗ್ಗೆ ಕೆಲವು ನಿಮಿಷಗಳಿಗೆ ಸೀಮಿತವಾಗಿದ್ದರೆ ಮಾತ್ರ ‘ಮಿ ಟೈಮ್’ ಆಗಿ ಆ ಕ್ಷಣದ ಒತ್ತಡ ಪರಿಹಾರ ಮಾಡಬಲ್ಲದು. ಹಾಗೆಯೇ ಮುಂದುವರಿದರೆ ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.