ನ್ಯೂಯಾರ್ಕ್: ಜಗತ್ತಿನ ಪ್ರತಿಷ್ಟಿತ ಫ್ಯಾಷನ್ ಶೋ ಮೆಟ್ ಗಾಲಾದಲ್ಲಿ (Met Gala) ಭಾಗಿಯಾಗಿದ್ದ ಇಶಾ ಅಂಬಾನಿ ವಿಶಿಷ್ಟವಾದ ಉಡುಪು ಧರಿಸಿ ಮಿಂಚಿದ್ದಾರೆ.

ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಪ್ರತಿ ವರ್ಷ ಮೇ ಮೊದಲ ಸೋಮವಾರದಿಂದ ಈ ಮೆಟ್ ಗಾಲಾ ಫ್ಯಾಶನ್ ಶೋ ಆರಂಭವಾಗುತ್ತದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಉಡುಪನ್ನು ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ್ದಾರೆ.

ಉಡುಪಿನಲ್ಲಿ 1,800 ಕ್ಯಾರೆಟ್ಗಳಿಗೂ ಹೆಚ್ಚು ವಜ್ರಗಳ ಜೊತೆಗೆ ಪಚ್ಚೆ ಹರಳು, ಪೋಲ್ಕಿ ಮತ್ತು ಕುಂದನ್ ಅನ್ನು ಬಳಸಲಾಗಿದೆ. ಇವುಗಳನ್ನು ಕೈಯಿಂದ ನೇಯ್ದ ಚಿನ್ನದ ನೂಲಿನ ಟಿಶ್ಯೂ ಸೀರೆಗೆ ಜೋಡಿಸುವ ಮೂಲಕ ವಿನ್ಯಾಸಗೊಳಿಸಲಾಗಿದೆ.

ಸೀರೆಯ ಬಾರ್ಡರ್ನಲ್ಲಿ ಪಿಚ್ವಾಯಿ ಪೇಂಟಿಂಗ್ ಮಾಡಲಾಗಿದ್ದು, ಅಜಂತಾ ಗುಹೆಗಳ ಕಲಾಕೃತಿಗಳು ಮತ್ತು ಭಾರತೀಯ ನಿಸರ್ಗದ ಚಿತ್ರಣವನ್ನು ನೀಡಲಾಗಿದೆ. ಉಡುಪಿಗೆ ಬಳಸಿರುವ ಸಾವಿರಕ್ಕೂ ಹೆಚ್ಚು ವಜ್ರಗಳು ನೀತಾ ಅಂಬಾನಿ ಅವರ ಸಂಗ್ರಹದ್ದೇ ಎನ್ನುತ್ತಿವೆ ವರದಿಗಳು.

ಕೈಯಲ್ಲಿ ಮಾವು, ತಲೆಗೆ ಮಲ್ಲಿಗೆ ಹೂವು, ಚಿನ್ನದ ಸೀರೆ, ವಜ್ರದ ರವಿಕೆ ಇಶಾ ಅಂಬಾನಿ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.

ಮೂಲಗಳ ಪ್ರಕಾರ ಈ ಉಡುಪು ತಯಾರಿಸಲು 50ಕ್ಕೂ ಹೆಚ್ಚು ವಿನ್ಯಾಸಕಾರರು 1,200 ಗಂಟೆಗೂ ಹೆಚ್ಚು ಸಮಯ ವ್ಯಯಿಸಿದ್ದಾರೆ.

ಸೋಮವಾರ (ಮೇ 4) ಮೆಟ್ ಗಾಲಾ ಕಾರ್ಯಕ್ರಮವಾಗಿದೆ. 'ವೋಗ್' ನಿಯತಕಾಲಿಕೆಯ ಸಂಪಾದಕಿ ಅನ್ನಾ ವಿಂಟರ್ ಇದರ ನೇತೃತ್ವವಹಿಸಿದ್ದಾರೆ. 2026ರ ಮೆಟ್ ಗಾಲಾ ಕೇವಲ ಫ್ಯಾಷನ್ ಮಾತ್ರವಲ್ಲದೆ, ಕಲೆ ಮತ್ತು ತಂತ್ರಜ್ಞಾನದ ಸಂಗಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.