ತೆಂಗಿನ ಮರವು ಭೂಲೋಕದ ಕಲ್ಪವೃಕ್ಷವಾಗಿದ್ದು, ಇದೊಂದು ಅಮೃತ ಸದೃಶ ಪಾನೀಯವಾಗಿದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಆರೋಗ್ಯವನ್ನು ಕಾಪಾಡುವ ಸರಳ ಹಾಗೂ ಪರಿಣಾಮಕಾರಿ ವಿಧಾನವಾಗಿದೆ.

ಪ್ರಕೃತಿಯ ಅಮೃತವೆಂದು ಕರೆಯಲ್ಪಡುವ ಈ ಪಾನೀಯವು ರುಚಿಪ್ರದ ಮಾತ್ರವಲ್ಲದೆ, ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್ಸ್, ಖನಿಜಗಳು ಮತ್ತು ತಾಜಾತನವನ್ನು ಒದಗಿಸುತ್ತದೆ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ರಾತ್ರಿ ಸಮಯದಲ್ಲಿ ದೇಹದಲ್ಲಿ ಉಂಟಾಗುವ ಜಲಹೀನತೆಯನ್ನು ನಿವಾರಿಸಿ ದೇಹವು ದಿನ ಪೂರ್ತಿ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.
.ವಾರಪೂರ್ತಿ ಫ್ರೆಷ್ ಆಗಿರಲು ಹೀಗೆ ತಯಾರಿಸಿ ತರಹೇವಾರಿ ಎಬಿಸಿ ಜ್ಯೂಸ್.ಶ್ರೀ ರಾಮನವಮಿಯಂದು ಮನೆಯಲ್ಲೇ ತಯಾರಿಸಿ ಕರ್ಬೂಜ ಹಣ್ಣಿನ ಪಾನಕ.
ಆಯುರ್ವೇದ ಗ್ರಂಥಗಳಲ್ಲಿ ನಾರಿಕೇಲ ಜಲದ (ಎಳನೀರು) ಗುಣಗಳನ್ನು ವರ್ಣಿಸಲಾಗಿದೆ. ಭಾವಪ್ರಕಾಶ ನಿಘಂಟುವಿನಲ್ಲಿ ‘‘ತಸ್ಯಾಂಭಃ ಶೀತಲಂ ಹೃದ್ಯಂ ದೀಪನಂ ಶುಕ್ರಲಂ ಲಘು, ಪಿಪಾಸಾಪಿತ್ತಜಿತ್ ಸ್ವಾದು ಬಸ್ತಿಶುದ್ಧಿಕರಂ ಪರಮ್ ’’ಎಂದು ಹೇಳಲಾಗಿದೆ. ಇದರ ಅರ್ಥ ಏನೆಂದರೆ, ದಾಹ, ಪಿತ್ತ ಹಾಗೂ ವಾತದೋಷಗಳನ್ನು ಶಮನಗೊಳಿಸಿ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದಾಗಿ ಸೂಚಿಸುತ್ತದೆ. ಜೊತೆಗೆ ತಾಜಾ ತೆಂಗಿನಕಾಯಿ ನೀರನ್ನು ಭೋಜನಕ್ಕಿಂತ ಮೊದಲು ಸೇವಿಸಿದರೆ ಅಗ್ನಿಯನ್ನು ದೀಪ್ತಿಗೊಳಿಸಿ ಗುಲ್ಮಾದಿ ಸಮಸ್ಯೆಗಳಲ್ಲಿ ಸಹಕಾರಿ ಎಂಬ ಉಲ್ಲೇಖವೂ ದೊರೆಯುತ್ತದೆ.

ಇದನ್ನು ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದು ಜೀರ್ಣಾಗ್ನಿಯನ್ನು ಮೃದುವಾಗಿ ಉತ್ತೇಜಿಸಿ ಅಜೀರ್ಣ ಹಾಗೂ ಆಸಿಡಿಟಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರ ಶೀತ ಗುಣವು ದೇಹದ ಉಷ್ಣತೆಯನ್ನು ಸಮತೋಲನದಲ್ಲಿರಿಸುತ್ತದೆ. ಇದಲ್ಲಿರುವ ಪೊಟ್ಯಾಶಿಯಮ್ ಹೃದಯದ ಆರೋಗ್ಯವನ್ನು ಕಾಪಾಡಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

ಮೆಗ್ನೇಶಿಯಂ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕದಂತಹ ಪೋಷಕಾಂಶಗಳು ಹೇರಳವಾಗಿದೆ. ಇದು ಬೇಸಿಗೆಯ ಧಗೆಯಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳ ನಿವಾರಣೆಗೆ ಸುಲಭವಾಗಿ ದೊರಕುವ ಪ್ರಕೃತಿಯ ವರದಾನವಾಗಿದೆ. ಒಟ್ಟಾರೆ, ಎಳನೀರು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ದೇಹಕ್ಕೆ, ಚರ್ಮಕ್ಕೆ ಕಾಂತಿ ಮತ್ತು ದೀರ್ಘಕಾಲಿಕ ಆರೋಗ್ಯವನ್ನು ನೀಡುವ ಉತ್ತಮ ದೈನಂದಿನ ಕ್ರಮವಾಗಿದೆ.

(ಲೇಖಕರು: ಡಾ ವಿಜಯ್ ನೆಗಳೂರ್, ಪ್ರಧ್ಯಾಪಕರು ವಿಭಾಗ ಮುಖ್ಯಸ್ಥರು ಸ್ವಾಸ್ತ್ಯವ್ರಿತ್ತ ಮತ್ತು ಯೋಗ ವಿಭಾಗ. ಎಸ್ ಡಿ ಮ್ ಆಯುರ್ವೇದ ಕಾಲೇಜು ಆಸ್ಪತ್ರೆ ಉಡುಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.