ಸೋಮವಾರ, ಜನವರಿ 17, 2022
26 °C

ರೋಗಬಾಧಿತರಿಗೆ ಆಶಾಕಿರಣ ವಂಶವಾಹಿನಿ ಚಿಕಿತ್ಸೆ: ಸಮರ್ಥ ಕುಲಕರ್ಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನರ ಆರೋಗ್ಯ ನಿರ್ವಹಣೆಗೆ ವಂಶವಾಹಿನಿ ಆಧಾರಿತ ಚಿಕಿತ್ಸಾ ಅಳವಡಿಸಿಕೊಂಡ ಕಾರಣದಿಂದ ರೋಗ ಬಾಧಿತರಿಗೆ ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆಗಳು ಲಭ್ಯವಾಗುತ್ತಿದ್ದು, ಇವುಗಳಿಂದಾಗಿ ಬಾಧಿತರು ಚೇತರಿಸಿಕೊಳ್ಳಲು ಸಹಕಾರಿಯಾಗುತ್ತಿವೆ  ಎಂದು ಕ್ರಿಸ್ಪರ್ ಸಂಸ್ಥೆಯ ಸಿ.ಇ.ಒ. ಸಮರ್ಥ ಕುಲಕರ್ಣಿ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದ ಮೊದಲ ದಿನವಾದ ಬುಧವಾರ ‘ವಂಶವಾಹಿನಿ ಆಧಾರಿತ ಔಷಧಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳಿಗೆ ಔಷಧಗಳನ್ನು ತಯಾರಿಸಲು ಕನಿಷ್ಠ 15-20 ವರ್ಷಗಳ ನಿರಂತರವಾದ ಸಂಶೋಧನೆ ಅಗತ್ಯವಾಗಿತ್ತು. ಆನಂತರವೂ ಯಶಸ್ಸು ಸಾಧಿಸುವುದು ಸುಲಭದ ಕೆಲಸ ಏನಾಗಿರಲಿಲ್ಲ. ಹಲವು ಹಂತಗಳ ಪ್ರಯೋಗಗಳ ನಂತರ ಜನರಿಗೆ ನೀಡಬಲ್ಲ ಮದ್ದು ಮತ್ತು ಲಸಿಕೆಗಳು ಸಿದ್ಧವಾಗುತ್ತಿದ್ದವು’ ಎಂದರು. 

ಕ್ಯಾನ್ಸರ್ ಕಾರಕ ರೋಗಾಣುಗಳನ್ನು ವಂಶವಾಹಿನಿಗಳ ಮಟ್ಟದಲ್ಲೇ  ಕಂಡು ಹಿಡಿದು ಅಲ್ಲೇ ಸರಿಪಡಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ವಿನೂತನ ಕ್ರಾಂತಿ ಮಾಡಲಾಗುತ್ತಿದೆ. ತಲಸ್ಸೇಮಿಯಾ, ಹೃದ್ರೋಗ, ಡಯಾಬಿಟಿಸ್, ಅಂತಹ ಸಮಸ್ಯೆಗಳಿಗೂ ಸಹ ಜೀನ್ ಥೆರಪಿಯ ನೀಡುವ ಕ್ರಮ ಆರಂಭವಾಗಿದೆ. ವಿಜ್ಞಾನದ ಜೊತೆಗೆ ತಂತ್ರಜ್ಞಾನದ ಸಮರ್ಥ ಬಳಕೆಯಿಂದ ಕಾಲಾನುಕಾಲಕ್ಕೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಆರೋಗ್ಯ ಕ್ಷೇತ್ರದ ಚಿಕಿತ್ಸಾ ಕ್ರಮಗಳು ಬರುವ ದಿನಗಳಲ್ಲಿ ಹೊಸ ರೂಪ ಪಡೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು