ವಿಜಯಪುರ ಸಮೀಪದ ಒಂದು ವಸತಿ ಶಾಲೆಯಲ್ಲಿ ಮಾರ್ಚ್ನ ಮೊದಲ ವಾರ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಮೂರು ವರ್ಷದ ಅಜಯ್ ಅತಿಯಾದ ಜ್ವರ, ತೀವ್ರ ತಲೆನೋವು, ಮೈನೋವಿನಿಂದ ಬಳಲು ಪ್ರಾರಂಭಿಸಿದ್ದ. ಎರಡು ದಿನಗಳ ನಂತರ ಚರ್ಮದ ಮೇಲೆ ಕೆಂಪುಗುಳ್ಳೆಗಳು ಕಂಡುಬಂದವು. ಜ್ವರವನ್ನು ವೈರಾಣುಜ್ವರ ಎಂದು ಭಾವಿಸಲಾಯಿತು. ಕೆಲವೇ ದಿನಗಳಲ್ಲಿ ವಸತಿ ಶಾಲೆಯ ಇತರೆ ವಿದ್ಯಾರ್ಥಿಗಳಲ್ಲೂ ಇದೇ ರೀತಿಯ ಲಕ್ಷಣಗಳು ಕಂಡುಬಂದವು. ವೈದ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಲಾಯಿತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಕ್ಕಳ ಬಟ್ಟೆಗಳ ಹೊಲಿಗೆಯ ಭಾಗದಲ್ಲಿ ಹೇನು ಅಥವಾ ಕೂರೆ (body lice), ಕೂದಲಿನಲ್ಲಿ ಸೀರು (nits) ಕಂಡುಬಂದವು. ‘ಎಪಿಡೆಮಿಕ್ ಟೈಫಸ್’ ಎಂದು ಶಂಕಿಸಲಾಯಿತು. ತಕ್ಷಣ ಚಿಕಿತ್ಸೆಯನ್ನು ನೀಡಿ ನಿಯಂತ್ರಣ ಕ್ರಮ ಕೈಗೊಳ್ಳಲಾಯಿತು.

ಹೇನುಗಳು ಮಾನವದೇಹದಲ್ಲಿ ವಾಸಿಸುವ ಸಣ್ಣ ಪರೋಪಜೀವಿಗಳು. ಇವುಗಳು ಸಾಮಾನ್ಯವಾಗಿ ತಲೆಯ ಕೂದಲು, ದೇಹದ ಮೇಲೆ, ಬಟ್ಟೆಗಳ ನಡುವೆ, ಜನನಾಂಗದ ಭಾಗದಲ್ಲಿ ಕಂಡುಬರುತ್ತದೆ. ಈ ಹೇನುಗಳು ಮಾನವನ ರಕ್ತವನ್ನು ಹೀರಿಕೊಂಡು ಬದುಕುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ಮನುಷ್ಯರಿಗೆ ಅಪಾಯಕಾರಿ ರೋಗಕಾರಕ ಜೀವಾಣುಗಳನ್ನು ಹರಡುವ ಸಾಧ್ಯತೆ ಇದೆ. ಇವುಗಳಿಂದ ಉಂಟಾಗುವ ರೋಗವನ್ನು ‘ಲೌಸ್ ಬಾರ್ನ್ ಇನ್ಫೆಕ್ಷನ್’ ಅಥವಾ ‘ಹೇನುಗಳಿಂದ ಹರಡುವ ಸೋಂಕು’ ಎಂದು ಕರೆಯಲಾಗುತ್ತದೆ.

ಹೇನುಗಳಲ್ಲಿ ಮೂರು ಪ್ರಕಾರಗಳಿವೆ. ಮೊದಲನೆಯದು, ತಲೆಯ ಹೇನು. ಈ ಹೇನುಗಳು ತಲೆಯ ಕೂದಲಿನಲ್ಲಿ ವಾಸಿಸುತ್ತವೆ. ತುರಿಕೆಯನ್ನು ಉಂಟುಮಾಡುತ್ತವೆ. ಎರಡನೆಯದು, ದೇಹದ ಹೇನು: ಇವು ದೇಹದ ಮೇಲೆ, ಬಟ್ಟೆಗಳ ಹೊಲಿಗೆ ಸಂದುಗಳಲ್ಲಿ ಕಂಡುಬರುತ್ತವೆ. ಇದನ್ನು ‘ಕೂರೆ’ ಎಂದೂ ಕರೆಯಲಾಗುತ್ತದೆ. ಇದು ಅಪಾಯಕಾರಿಯಾಗಬಲ್ಲದು. ಏಕೆಂದರೆ ಇವು ಗಂಭೀರ ಸೋಂಕನ್ನು ಹರಡುವ ಸಾಮರ್ಥ್ಯವನ್ನು ಹೊಂದಿವೆ. ಮೂರನೇ ವಿಧದ ಹೇನು, ‘ಫ್ಯೂಬಿಕ್ ಲೌಸ್’. ಜನನಾಂಗದ ಬಳಿಯ ಕೂದಲಿನಲ್ಲಿ ವಾಸಿಸುವ ಇವುಗಳನ್ನು ‘ಕ್ರಾಬ್ ಲೈಸ್’ (crab lice) ಎಂದೂ ಕರೆಯಲಾಗುತ್ತದೆ. ಕೆಲವೊಮ್ಮೆ ಕಂಕುಳಿನ ಕೂದಲು, ಎದೆಯ ಮೇಲಿನ ಕೂದಲು, ಗಡ್ಡ ಮತ್ತು ಕಣ್ಣಿನ ರೆಪ್ಪೆಯ ಕೂದಲಿನಲ್ಲಿಯೂ ಇವು ಕಂಡುಬರುವ ಸಾಧ್ಯತೆ ಇದೆ.

ಇವು ನೇರ ದೇಹಸಂಪರ್ಕದ ಮೂಲಕ ಹರಡುತ್ತವೆ. ತೀವ್ರವಾದ ತುರಿಕೆ, ಚರ್ಮದ ಉರಿಯೂತಕ್ಕೆ ಕಾರಣವಾಗುತ್ತವೆ. ಹೆಚ್ಚಿನ ಕೆರೆತದಿಂದ ಗಾಯಗಳು ಉಂಟಾಗಬಹುದು. ಆ ಗಾಯಗಳ ಮೂಲಕ ಬ್ಯಾಕ್ಟೀರಿಯಾಗಳು ದೇಹದೊಳಗೆ ಪ್ರವೇಶಿಸಿ ದ್ವಿತೀಯ ಸೋಂಕು (ಸೆಕೆಂಡರಿ ಬ್ಯಾಕ್ಟೀರಿಯಲ್ ಇನ್ಫೆಕ್ಷನ್) ಉಂಟಾಗಿ ಕೀವು, ನೋವು ಉಂಟಾಗಬಹುದು.

ಇವುಗಳಲ್ಲಿ ದೇಹದ ಹೇನು ಹೆಚ್ಚು ಅಪಾಯಕಾರಿ. ಏಕೆಂದರೆ ಅವು ಕೆಲವು ಗಂಭೀರ ಸೋಂಕುಗಳನ್ನು ಹರಡುವ ಸಾಮರ್ಥ್ಯವನ್ನು ಹೊಂದಿವೆ. ಅವು ಹರಡಬಹುದಾದ ಪ್ರಮುಖ ರೋಗಗಳು ಮೂರು; ಎಪಿಡೆಮಿಕ್ ಟೈಫಸ್, ಟ್ರೆಂಚ್ ಫೀವರ್ ಮತ್ತು ರಿಲ್ಯಾಪ್ಸಿಂಗ್ ಫೀವರ್.

ಮೊದಲನೆಯದು, ಎಪಿಡೆಮಿಕ್ ಟೈಫಸ್. ರಿಕೆಟ್ತಿಯೋ ಪ್ರೊವೋಝಾಕಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆ ಇದಾಗಿದ್ದು, ತೀವ್ರ ಜ್ವರ, ತಲೆನೋವು, ಮೈಕೈನೋವು, ಬಳಲಿಕೆ, ಚರ್ಮದ ಮೇಲೆ ಕೆಂಪುಗುಳ್ಳೆ ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳು.

ದೇಹದ ಹೇನುಸೋಂಕಿತ ವ್ಯಕ್ತಿಯ ರಕ್ತವನ್ನು ಹೀರಿಕೊಂಡಾಗ ಈ ಬ್ಯಾಕ್ಟೀರಿಯಾ ಹೇನುಗಳ ದೇಹವನ್ನು ಪ್ರವೇಶಿಸುತ್ತದೆ. ಹೇನುಗಳ ದೇಹದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಸುತ್ತವೆ. ನಂತರ ಹೇನಿನ ಮಲದ ಮೂಲಕ ಬ್ಯಾಕ್ಟೀರಿಯಾಗಳು ದೇಹದ ಮೇಲಿನ ಗಾಯದ ಮೂಲಕ ಮಾನವದೇಹವನ್ನು ಪ್ರವೇಶಿಸುತ್ತವೆ. ಈ ಸೋಂಕು ಗಂಭೀರವಾದರೆ ಜೀವಕ್ಕೆ ಅಪಾಯಕಾರಿಯಾಗಬಲ್ಲದು. ಎರಡನೆಯದು, ಟ್ರೆಂಚ್ ಫೀವರ್; ಇದು ಕೂಡ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದ್ದು, ಮೊದಲ ಮಹಾಯುದ್ಧದ ವೇಳೆ ಸೈನಿಕರಲ್ಲಿ ಈ ರೋಗ ಕಂಡುಬಂದಿತ್ತು.

ಮೂರನೇಯದು, ರಿಲ್ಯಾಪ್ಸಿಂಗ್ ಫಿವರ್ ಕೂಡ ಬ್ಯಾಕ್ಟೀರಿಯಾದ ಮೂಲಕ ಹರಡುವ ಕಾಯಿಲೆ. ಈ ಕಾಯಿಲೆಯಲ್ಲಿ ಜ್ವರ ಕೆಲವು ದಿನ ಕಾಣಿಸಿಕೊಂಡು ಬಳಿಕ ಕಡಿಮೆಯಾಗುತ್ತದೆ. ಮರುಜ್ವರ, ತಲೆನೋವು ಈ ರೋಗದ ಪ್ರಮುಖ ಲಕ್ಷಣಗಳು.

ಕಾರಣವೇನು?

ಹೇನುಗಳು ಸಾಮಾನ್ಯವಾಗಿ ಸ್ವಚ್ಛತೆ ಕೊರತೆಯಾದ ಸಂದರ್ಭಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜನಸಂದಣಿ ಹೆಚ್ಚಿರುವ ಸ್ಥಳಗಳು, ವಸತಿಶಾಲೆಗಳು, ನಿರಾಶ್ರಿತ ಶಿಬಿರಗಳಂಥವುಗಳಲ್ಲಿ ಹೆಚ್ಚು. ಶುದ್ಧ ಬಟ್ಟೆಗಳ ಕೊರತೆ, ಸರಿಯಾದ ವೈಯಕ್ತಿಕ ಸ್ವಚ್ಛತೆ ಇಲ್ಲದಿರುವುದು, ನಿಯಮಿತ ಸ್ನಾನದ ಅಭಾವ, ಸರಿಯಾಗಿ ಬಟ್ಟೆ ತೊಳೆಯದೇ ಇರುವುದೂ ಹೇನು ಹರಡುವಿಕೆಗೆ ಕಾರಣಗಳಾಗಬಹುದು.

ಸೋಂಕು ತಡೆ

ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ. ನಿಯಮಿತವಾಗಿ ಸ್ನಾನ ಮಾಡುವುದು, ಸ್ವಚ್ಛವಾಗಿ ಬಟ್ಟೆಗಳನ್ನು ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸುವುದು. ಕೂದಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ನಿಯಮಿತವಾಗಿ ತಲೆಸ್ನಾನ ಮಾಡುವುದು, ಹೇನು ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯುವುದು ಅಗತ್ಯ.

ಹೇನುಗಳನ್ನು ನಿವಾರಿಸಲು ಔಷಧೀಯ ಶಾಂಪುಗಳು ಮತ್ತು ಲೋಷನ್ಗಳಿ ಲಭ್ಯವಿದ್ದು, ಅವುಗಳನ್ನು ವೈದ್ಯರ ಸಲಹೆಯಂತೆ ಬಳಸಬಹುದು. ಜೊತೆಗೆ ಸೋಂಕಿತ ವ್ಯಕ್ತಿಯ ಬಟ್ಟೆಗಳು ಮತ್ತು ಹಾಸಿಗೆಗಳನ್ನು ಕೂಡ ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು.

ಒಟ್ಟಿನಲ್ಲಿ ಹೇನುಗಳು ಸಣ್ಣ ಜೀವಿಗಳಾಗಿದ್ದರೂ ಅವುಗಳಿಂದ ಹರಡುವ ಸೋಂಕುಗಳು ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಬಹುದು.ಹಾಗಾಗಿ ವೈಯಕ್ತಿಕ ಸ್ವಚ್ಛತೆ. ಆರೋಗ್ಯರಕ್ಷಣೆ, ಸರಿಯಾದ ಚಿಕಿತ್ಸೆ ಮೂಲಕ ಹೇನುಗಳನ್ನು ನಿಯಂತ್ರಿಸುವುದು ಬಹಳ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.