ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಕಾಯಿಲೆಗಳ ಪ್ರಮಾಣವು ಬಹಳಷ್ಟು ಹೆಚ್ಚಾಗುತ್ತಿದೆ. ಇದಕ್ಕೆ ಭಾರತದ ಮಹಿಳೆಯರೂ ಹೊರತಲ್ಲ. ಭಾರತದ ಗ್ರಾಮೀಣ ಭಾಗದ ಮಹಿಳೆಯರು ವೈದ್ಯಕೀಯ ತಪಾಸಣೆ ಮತ್ತು ಆಸ್ಪತ್ರೆ ಭೇಟಿಯಿಂದ ದೂರ ಉಳಿಯುವ ಕಾರಣ ಅವರಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಪತ್ತೆಹಚ್ಚುವುದರಲ್ಲಿ ವಿಳಂಬವಾಗುತ್ತಿದೆ. ಈ ಕಾರಣದಿಂದಾಗಿ ಅವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುವುದು ಕೂಡ ಹೆಚ್ಚು ಕಷ್ಟಕರವಾಗಿರುತ್ತದೆ. ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ (Cervical Cancer) ಹೆಚ್ಚಾಗುತ್ತಿವೆ. ಇವನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಅವು ಗುಣವಾಗುವ ಸಂಭವ ಹೆಚ್ಚಾಗಿರುತ್ತದೆ. ಇದನ್ನು ತಡೆಗಟ್ಟುವ ಸಲುವಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ.

ಗರ್ಭಕಂಠದ ಕ್ಯಾನ್ಸರ್ಗೆ ಮುಖ್ಯ ಕಾರಣವೇನೆಂದರೆ, ‘ಹ್ಯೂಮನ್ ಪ್ಯಾಪಿಲೋಮ ವೈರಸ್’ (Human Papilloma Virus– HPV ) ಎಂಬ ವೈರಸ್ ಉಂಟು ಮಾಡುವ ಸೋಂಕು.

ಭಾರತದ ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ಅತಿ ಸಾಮಾನ್ಯ ಕ್ಯಾನ್ಸರ್. ಲಸಿಕೆ (HPV Vaccine) ಮತ್ತು ನಿಯಮಿತ ತಪಾಸಣೆ (Pap smear) ಮೂಲಕ ಇದನ್ನು ತಡೆಯಬಹುದು. 30 ರಿಂದ 65 ವಯೋಮಿತಿಯಲ್ಲಿರುವ ಮಹಿಳೆಯರು ‘ಪ್ಯಾಪ್ ಸ್ಮಿಯರ್’ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚಿ, ಅದು ಸಂಪೂರ್ಣವಾಗಿ ಗುಣವಾಗುವಂತೆ ಮಾಡಬಹುದು.

ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಗುಣಲಕ್ಷಣಗಳನ್ನು ತೋರಿಸದೆ ಇರಬಹುದು. ನಂತರದ ದಿನಗಳಲ್ಲಿ ಅಸಹಜ ರಕ್ತಸ್ರಾವ, ನೋವು, ಹೊಟ್ಟೆಯ ಕೆಳಭಾಗದಲ್ಲಿ ನೋವು, ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವಿನಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಹಂತದಲ್ಲಿ ಕ್ಯಾನ್ಸರ್ ದೇಹದೊಳಗೆ ಹರಡಿಕೊಂಡಿರಬಹುದು.

ಆರಂಭಿಕ ಹಂತದಲ್ಲಿ ಪತ್ತೆಯಾದರೆ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ (Radiation) ಅಥವಾ ಕೀಮೋಥೆರಪಿ ಮೂಲಕ ಚಿಕಿತ್ಸೆ ನೀಡಬಹುದು.

ಗರ್ಭಕಂಠದ ಕ್ಯಾನ್ಸರ್ಗೆ ‘ಹ್ಯೂಮನ್ ಪ್ಯಾಪಿಲೋಮ ವೈರಸ್’ ಮಾತ್ರ ಕಾರಣವಲ್ಲ: ಅಸುರಕ್ಷಿತ ಲೈಂಗಿಕತೆ, ಅತಿಯಾದ ಗರ್ಭನಿರೋಧಕ ಮಾತ್ರೆಗಳ ಸೇವನೆ, ಕಡಿಮೆ ವಯಸ್ಸಿನಲ್ಲಿ ಮದುವೆ ಮತ್ತು ಆನುವಂಶಿಕ ಕಾರಣಗಳಿಂದಲೂ ಈ ಕ್ಯಾನ್ಸರ್ ಬರಬಹುದು. ಎಚ್ಪಿವಿ ವೈರಸ್ನಲ್ಲಿ ಹಲವು ಪ್ರಭೇದಗಳಿವೆ. ಅವುಗಳಲ್ಲಿ ಎಚ್ಪಿವಿ 16 ಮತ್ತು 18 ಪ್ರಭೇದದ ವೈರಸ್ ಉಂಟುಮಾಡುವ ದೀರ್ಘಕಾಲದ ಸೋಂಕಿನಿಂದ ಗರ್ಭಕಂಠದ ಕೋಶಗಳು ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತವೆ.

ಎಚ್ಪಿವಿ 6 ಮತ್ತು ಎಚ್ಪಿವಿ 11 ವೈರಸ್ ಕೂಡ ಗರ್ಭಕಂಠದ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. 99 ಪ್ರತಿಶತ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಹುಟ್ಟಲು ಎಚ್ಪಿವಿ ಸೋಂಕು ಕಾರಣವೆಂಬ ವಿಚಾರ ಬೆಳಕಿಗೆ ಬಂದ ನಂತರ ಆ ವೈರಸ್ ಕುರಿತ ಅಧ್ಯಯನಗಳು ಹೆಚ್ಚಾದವು. ಸೋಂಕು ತಗುಲಿದ ನಂತರ ಗರ್ಭಕಂಠದ ಕಣಗಳು ಕ್ಯಾನ್ಸರ್ ಮಾದರಿಯಲ್ಲಿ ಬದಲಾಗಲು ಸುಮಾರು 15ರಿಂದ 20 ವರ್ಷಗಳಷ್ಟು ದೀರ್ಘ ಸಮಯ ಬೇಕಾಗುತ್ತದೆ.

ಎಚ್ಪಿವಿ ವೈರಾಣುವಿಗೆ ಸೂಕ್ತ ಲಸಿಕೆ ನೀಡಿದರೆ ಹೆಣ್ಣು ಮಕ್ಕಳಲ್ಲಿ ಈ ವೈರಸ್ ಸೋಂಕು ಉಂಟುಮಾಡುವುದನ್ನು ತಡೆಹಿಡಿಯಬಹುದಾಗಿದೆ. ಈ ಸೋಂಕು ಬರದಿದ್ದರೆ, 99 ಪ್ರತಿಶತ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಕಡಿಮೆಯಾಗಬಹುದು.

ಈ ಸೋಂಕು ಲೈಂಗಿಕವಾಗಿ ಸಕ್ರಿಯವಿರುವ ಹೆಣ್ಣುಮಕ್ಕಳಿಗೆ ಬರುವ ಕಾರಣದಿಂದಾಗಿ ಹೆಣ್ಣು ಮಕ್ಕಳು ಹದಿಹರೆಯ ತಲುಪುವ ಮೊದಲೇ ಎಚ್ಪಿವಿ ಲಸಿಕೆ ನೀಡುವ ಕ್ರಮವನ್ನು ಹಲವಾರು ಪಾಶ್ಚಾತ್ಯ ರಾಷ್ಟ್ರಗಳು ಅಳವಡಿಸಿಕೊಂಡಿವೆ.

ಗಂಡಸರಿಂದಲೂ ಈ ಸೋಂಕು ಹೆಣ್ಣುಮಕ್ಕಳಿಗೆ ಹರಡುವುದರಿಂದ ಹಲವು ದೇಶಗಳಲ್ಲಿ ಗಂಡಸರಿಗೂ ಈ ಲಸಿಕೆ ನೀಡುವ ಕ್ರಮವು ಜಾರಿಯಲ್ಲಿದೆ.

ನಮ್ಮ ದೇಶದಲ್ಲಿ ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಎಚ್ಪಿವಿ ಲಸಿಕೆಗಳು ಲಭ್ಯವಿದ್ದವು. ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರವು ಹದಿನಾಲ್ಕು ವರ್ಷ ತುಂಬಿದ ಪ್ರತಿ ಯುವತಿಗೂ ಒಂದು ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.