ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೊದಲ ಲಸಿಕೆ ಕೊವ್ಯಾಕ್ಸೀನ್‌ ಪ್ರಯೋಗದ ಫಲಿತಾಂಶಗಳು ಆಶಾದಾಯಕ: ತಜ್ಞರು

Last Updated 26 ಜುಲೈ 2020, 7:32 IST
ಅಕ್ಷರ ಗಾತ್ರ

ರೋಹ್ಟಕ್‌: ಕೊರೊನಾ ವೈರಸ್‌ ನಿಯಂತ್ರಿಸಲು ಭಾರತ ಸಿದ್ಧಪಡಿಸಿರುವ ‘ಕೊವ್ಯಾಕ್ಸೀನ್‌’ ಲಸಿಕೆಯ ಮೊದಲ ಹಂತದ ಪ್ರಯೋಗದ, ಮೊದಲ ಭಾಗ ಉತ್ತೇಜನಕಾರಿಯಾಗಿದ್ದು, ಎರಡನೇ ಭಾಗದ ಪ್ರಯೋಗ ಪ್ರಗತಿಯಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ರೋಹ್ಟಕ್‌ನಲ್ಲಿರುವ ಪಂಡಿತ್ ಭಗವತ್ ದಯಾಳ್ ಶರ್ಮಾ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಪಿಜಿಐ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಸಿಕೆ ಪ್ರಯೋಗದ ಪ್ರಧಾನ ತನಿಖಾಧಿಕಾರಿ ಡಾ. ಸವಿತಾ ವರ್ಮಾ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದ್ದಾರೆ.

ಲಸಿಕೆ ಪ್ರಯೋಗದ (ಕೊವಾಕ್ಸಿನ್) ಹಂತ -1ರ ಭಾಗ–1 ಪೂರ್ಣಗೊಂಡಿದೆ. ಭಾರತದಾದ್ಯಂತ 50 ಜನರಿಗೆ ಲಸಿಕೆ ನೀಡಲಾಗಿದೆ. ಅದರ ಫಲಿತಾಂಶಗಳು ಆಶಾದಾಯಕವಾಗಿವೆ. ಮೊದಲ ಹಂತದ ಭಾಗ 2ರಲ್ಲಿ 6 ಜನರಿಗೆ ಶನಿವಾರ ಲಸಿಕೆ ನೀಡಲಾಗಿದೆ,’ ಎಂದು ಅವರು ತಿಳಿಸಿದರು.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೋವಿಡ್‌ಗೆ ಕೊವ್ಯಾಕ್ಸೀನ್‌ ಎಂಬ ಹೆಸರಿನ ಲಸಿಕೆ ಅಭಿವೃದ್ಧಿಪಡಿಸಿದೆ. ಇದು ಭಾರತದಮೊದಲ ಕೊರೊನಾವೈರಸ್ ಲಸಿಕೆ ಎಂಬ ಕೀರ್ತಿಗೂ ಪಾತ್ರವಾಗಿದೆ. ಮಾನವರ ಮೇಲಿನ ಚಿಕಿತ್ಸಾ ಪ್ರಯೋಗ (ಹ್ಯೂಮನ್‌ ಕ್ಲಿನಿಕಲ್‌ ಟ್ರಯಲ್‌) ಪ್ರಾರಂಭಿಸಲು ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (ಡಿಸಿಜಿಐ)ಯಿಂದ ಲಸಿಕೆಯು ಇತ್ತೀಚೆಗಷ್ಟೇ ಅನುಮೋದನೆ ಪಡೆದಿದೆ. ವಿಸ್‌ಕಾನ್ಸಿನ್‌ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT