ಬುಧವಾರ, ಸೆಪ್ಟೆಂಬರ್ 23, 2020
27 °C

ಕೋವಿಡ್–19 | ಮುಖಗವಸು ತೊಳೆಯಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೀವು ಯಾವುದೇ ಮುಖಗವಸು ಬಳಸಿ, ಅದು ಸರ್ಜಿಕಲ್‌ ಇರಲಿ ಅಥವಾ ಕಾಟನ್‌ ಇರಲಿ ಅದನ್ನು ನಿಯಮಿತವಾಗಿ ಬದಲಾಯಿಸುವುದು ಕಡ್ಡಾಯ. ಕೆಲವನ್ನು ತೊಳೆದುಕೊಂಡು ಮತ್ತೆ ಬಳಸಬಹುದು. ಮುಖಗವಸಿನ ಹೊರಭಾಗದಲ್ಲಿ ಕೊರೊನಾ ವೈರಸ್‌ ಕೂರುವ ಸಾಧ್ಯತೆ ಇರುವುದರಿಂದ ತೊಳೆಯುವುದು ಅಗತ್ಯ.

ಸರ್ಜಿಕಲ್‌ ಮುಖಗವಸನ್ನು ಒಂದು ರೀತಿಯ ಕಾಗದದಿಂದ ತಯಾರಿಸುವುದರಿಂದ ತೊಳೆಯುವುದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಸ್ಟರಿಲೈಸ್‌ ಮಾಡಿ ಮತ್ತೆ ಬಳಸುವುದಕ್ಕೆ ಯತ್ನಿಸಬೇಡಿ. ನಿಮ್ಮ ಉಸಿರಾಟದಿಂದಲೇ ಅದು ಒದ್ದೆಯಾಗಬಹುದು ಅಥವಾ ಹಾಳಾಗಬಹುದು. 3–4 ಗಂಟೆಗಳ ನಂತರ ಅದನ್ನು ಬದಲಾಯಿಸಬೇಕಾಗುತ್ತದೆ. ಹಾಗೆಯೇ ವೈದ್ಯರು ಹಾಗೂ ಇನ್ನಿತರ ಆರೋಗ್ಯ ಕಾರ್ಯಕರ್ತರು ಬಳಸುವ ಎನ್‌95 ಮುಖಗವಸನ್ನು ಕೂಡ ತೊಳೆಯುವುದು ಸಾಧ್ಯವಿಲ್ಲ. ತೊಳೆಯುವಾಗ ಅದರಲ್ಲಿರುವ ಫಿಲ್ಟರ್‌ಗೆ ಹಾನಿಯಾಗಬಹುದು. ಹೀಗಾಗಿ ಒಂದು ಸಲ ಬಳಸಿ ಬಿಸಾಡುವುದು ಸೂಕ್ತ.

ಕಾಟನ್‌ ಮುಖಗವಸು, ಅದು ನೀವೇ ತಯಾರಿಸಿಕೊಂಡಿದ್ದಿರಲಿ ಅಥವಾ ಖರೀದಿಸಿದ್ದಿರಲಿ, ನಿತ್ಯ ಒಂದು ಸಲ ಸೋಪ್‌ ಅಥವಾ ಸೋಪ್‌ ಪುಡಿಯಿಂದ ತೊಳೆದುಕೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಅಂಗಡಿಯಿಂದ ಅಥವಾ ಆನ್‌ಲೈನ್‌ನಿಂದ ಖರೀದಿಸಿದ ಮುಖಗವಸು ತೊಳೆಯುವ ವಿಧಾನದ ಬಗ್ಗೆ ಸೂಚನೆಗಳಿರುತ್ತವೆ. ಸ್ವಲ್ಪ ಬಿಸಿ ನೀರಿನಿಂದ ಸೋಪ್‌ ಬಳಸಿ ತೊಳೆದರೆ ವೈರಸ್‌ ಸಾಯುತ್ತದೆ.

ತೊಳೆದ ಮುಖಗವಸನ್ನು ಡ್ರೈಯರ್‌ನಿಂದ ಒಣಗಿಸಬಹುದು ಅಥವಾ ಸ್ವಚ್ಛವಾದ ಟೇಬಲ್‌ ಮೇಲಿಟ್ಟರೆ ಒಣಗುತ್ತದೆ. ತಂತಿಗೆ ನೇತು ಹಾಕಬೇಡಿ. ಅದರ ಆಕಾರದಲ್ಲಿ ಬದಲಾವಣೆ ಯಾಗುವುದರಿಂದ ಈ ಎಚ್ಚರಿಕೆ ಅಗತ್ಯ. ಬಿಸಿಲಿನಲ್ಲಿ ಒಣಗಿಸಿದರೆ ಅತಿ ನೇರಳೆ ಕಿರಣದಿಂದಾಗಿ ವೈರಸ್‌ ಕೆಲವೇ ನಿಮಿಷಗಳಲ್ಲಿ ತೊಲಗುತ್ತದೆ. ಒಣಗಿದ ಮುಖಗವಸುಗಳನ್ನು ಸ್ವಚ್ಛವಾದ ಪ್ಲಾಸ್ಟಿಕ್‌ ಕವರ್‌ ಅಥವಾ ಡಬ್ಬಿಯಲ್ಲಿ ಇಟ್ಟು ಅಗತ್ಯವಿದ್ದಾಗ ಬಳಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು