ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಫ್ರಿಜರೇಟರ್‌ನಲ್ಲಿಟ್ಟ ಮಾಂಸದಲ್ಲೂ 30 ದಿನಗಳ ಕಾಲ ಬದುಕಬಲ್ಲದು ಕೊರೊನಾ ವೈರಸ್!

ಅಮೆರಿಕದ ಕ್ಯಾಂಪ್‌ಬೆಲ್ ವಿ.ವಿ ತಜ್ಞರಿಂದ ಅಧ್ಯಯನ
Last Updated 12 ಜುಲೈ 2022, 10:35 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್‌–19ಗೆ ಕಾರಣವಾಗುವ ‘ಸಾರ್ಸ್‌–ಕೋವ್–2’ ವೈರಸ್ ರೆಫ್ರಿಜರೇಟರ್‌ ಅಥವಾ ಫ್ರೀಜರ್‌ನಲ್ಲಿಟ್ಟ ಮಾಂಸ ಮತ್ತು ಮೀನಿನ ಉತ್ಪನ್ನಗಳಲ್ಲಿ 30 ದಿನಗಳವರೆಗೆ ಜೀವಂತವಾಗಿರಬಲ್ಲದು ಎಂದು ಅಧ್ಯಯನವೊಂದು ಹೇಳಿದೆ.

ಈ ಕುರಿತ ಅಧ್ಯಯನ ವರದಿಯೊಂದು ‘ಅಪ್ಲೈಡ್ ಅಂಡ್ ಎನ್ವಿರಾನ್‌ಮೆಂಟಲ್ ಮೈಕ್ರೊಬಯಾಲಜಿ’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಚಿಕನ್‌, ಗೋಮಾಂಸ, ಹಂದಿ ಮಾಂಸ, ಸಾಲ್ಮೊನ್ ಮೀನುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಅಧ್ಯಯನಕ್ಕೆ ಬಳಸಲಾಗಿದ್ದ ಮಾಂಸ ಹಾಗೂ ಮೀನು ಉತ್ಪನ್ನಗಳನ್ನು ರೆಫ್ರಿಜರೇಷನ್ (4 ಡಿಗ್ರಿ ಸೆಲ್ಸಿಯಸ್) ಹಾಗೂ ಫ್ರೀಜರ್‌ನ (–20 ಡಿಗ್ರಿ ಸೆಲ್ಸಿಯಸ್‌) ತಾಪಮಾನಗಳಲ್ಲಿ ಶೇಖರಣೆ ಮಾಡಲಾಗಿತ್ತು ಎಂದು ಅಧ್ಯಯನ ಕೈಗೊಂಡ ತಂಡದ ಲೇಖಕ, ಅಮೆರಿಕದ ಕ್ಯಾಂಪ್‌ಬೆಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಎಮಿಲಿ ಎಸ್‌.ಬೈಲಿ ಹೇಳಿದ್ದಾರೆ.

‘ಫ್ರಿಡ್ಜ್‌ನಲ್ಲಿ 30 ದಿನಗಳ ಕಾಲ ಮಾಂಸವನ್ನು ಇಡದೆ ಇರಬಹುದು. ಆದರೆ, ಫ್ರೀಜರ್‌ನಲ್ಲಿ ಇಟ್ಟಿರುತ್ತೀರಿ’ ಎಂದು ಅವರು ಹೇಳಿದ್ದಾರೆ.

‘ಕೊರೊನಾ ವೈರಸ್‌ (ಸಾರ್ಸ್‌–ಕೋವ್–2) ಕರುಳು ಹಾಗೂ ಶ್ವಾಸಕೋಶನಾಳದಲ್ಲಿ ಪುನರ್‌ ಉತ್ಪತ್ತಿಯಾಗುವ ಶಕ್ತಿ ಹೊಂದಿದೆ. ಹೀಗಾಗಿ ಈ ವೈರಸ್‌ಅನ್ನು ಹೋಲುವ ಇತರ ವೈರಸ್‌ಗಳು ಸಹ ಇಂತಹ ಕನಿಷ್ಠ ತಾಪಮಾನದಲ್ಲಿ ಬದುಕುಳಿಯಬಲ್ಲವೇ ಎಂಬುದನ್ನು ಪತ್ತೆ ಮಾಡುವುದು ನಮ್ಮ ಉದ್ದೇಶವಾಗಿತ್ತು’ ಎಂದು ಎಮಿಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT