ಮಂಗಳವಾರ, ಮೇ 18, 2021
22 °C
ಕೋಲ್ಕತ್ತಾ

ಮಾಸ್ಕ್‌ ತೆಗೆಯದೆಯೇ ತಿಂಡಿ ತಿನ್ನಿ; ರೆಸ್ಟೊರೆಂಟ್‌ ಗ್ರಾಹಕರಿಗೆ ಜಿಪ್ ಮಾಸ್ಕ್!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಾಸ್ಕ್ ಧರಿಸಿಯೇ ಆಹಾರ ಸೇವಿಸುತ್ತಿರುವ ರೆಸ್ಟೊರೆಂಟ್‌ನ ಗ್ರಾಹಕರು

ಕೋಲ್ಕತ್ತಾ: ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆ ಪಡೆಯಲು ಹಾಗೂ ಸೋಂಕು ವ್ಯಾಪಿಸದಂತೆ ತಡೆಯಲು ಮಾಸ್ಕ್‌ ಧರಿಸುವುದು ಅತ್ಯಗತ್ಯವಾಗಿದೆ. ಊಟ–ತಿಂಡಿಗೆ ಹೊಟೇಲ್‌ಗೆ ಹೋದರೆ, ತಿನ್ನುವಾಗ ಮಾಸ್ಕ್‌ ತೆಗೆಯುವುದಂತೂ ಅನಿವಾರ್ಯ. ಆದರೆ, ಇಲ್ಲಿನ ಒಂದು ರೆಸ್ಟೊರೆಂಟ್‌ ಮಾಸ್ಕ್‌ ತೆಗೆಯದೆಯೇ ತಿನ್ನುವ ವ್ಯವಸ್ಥೆಯನ್ನು ಗ್ರಾಹಕರಿಗೆ ಕಲ್ಪಿಸಿದೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ರೆಸ್ಟೊರೆಂಟ್‌ ಒಂದರಲ್ಲಿ ಗ್ರಾಹಕರಿಗೆ ಜಿಪ್‌ ಇರುವ ಮಾಸ್ಕ್‌ಗಳನ್ನು ನೀಡುತ್ತಿದೆ. ಗ್ರಾಹಕರು ಆಹಾರ ತಿನ್ನುವಾಗ, ಜ್ಯೂಸ್‌, ನೀರು ಕುಡಿಯುವಾಗ ಮಾಸ್ಕ್‌ ಪೂರ್ಣ ತೆಗೆಯಬೇಕಿಲ್ಲ. ಮಾಸ್ಕ್ ಮಧ್ಯದಲ್ಲಿ ಜಿಪ್‌ ಅಳವಡಿಸಿರುವುದರಿಂದ, ಜಿಪ್‌ ತೆರೆದು ಆಹಾರ, ಪಾನೀಯ ಸೇವಿಸಬಹುದಾಗಿದೆ.

'ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆಯೇ ಗ್ರಾಹಕರಿಗೆ ಈ ಮಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಇದನ್ನು ಯಾರಿಗೂ ಕಡ್ಡಾಯ ಮಾಡಿಲ್ಲ' ಎಂದು ರೆಸ್ಟೊರೆಂಟ್‌ನ ಮಾಲೀಕರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

'ಇದೊಂದು ಅದ್ಭುತ ಅನ್ವೇಷಣೆ, ಹೊಸ ಪ್ರಯತ್ನ...' ಎಂದೆಲ್ಲ ಹಲವು ಮಂದಿ ಎಎನ್ಐ ಫೋಟೊ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು, 'ಇಂದೆಥ ಮೂರ್ಖ ಯೋಚನೆ, ಮಾಸ್ಕ್‌ನಿಂದ ನೇರವಾಗಿ ವೈರಾಣುಗಳು ಬಾಯಿಗೆ' ಎಂದು ಟ್ವೀಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು