ಪ್ರತಿದಿನ ಯೋಗಾಸನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ. ದೇಹದ ಅಮೂಲ್ಯ ಅಂಗಗಳಲ್ಲಿ ಕಣ್ಣುಗಳು ಕೂಡ ಒಂದು. ಅತಿಯಾಗಿ ಮೊಬೈಲ್ ಬಳಕೆ ಮಾಡುವುದು, ನಿರಂತರ ಪುಸ್ತಕ ಓದುವುದರಿಂದ ಕಣ್ಣಿಗೆ ಆಯಾಸ ಆಗಬಹುದು. ಇದರ ಒತ್ತಡವನ್ನು ಕಡಿಮೆ ಮಾಡಿ, ದೃಷ್ಠಿ ಆರೋಗ್ಯ ಸುಧಾರಿಸಲು ಇಲ್ಲಿವೆ ಕೆಲವು ಯೋಗಾಸನಗಳು.

ಪಾಮಿಂಗ್

ಮಾಡುವ ವಿಧಾನ: ಮೊದಲು ಆರಾಮವಾಗಿ ಕುಳಿತುಕೊಳ್ಳಿ. ನಂತರ ಎರಡೂ ಅಂಗೈಗಳನ್ನು ಒಂದಕ್ಕೊಂದು ಬೆಚ್ಚಗಾಗುವವರೆಗೆ ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ಕಣ್ಣುಗಳನ್ನು ಮುಚ್ಚಿ, ಬೆಚ್ಚಗಿನ ಅಂಗೈಗಳನ್ನು ಕಣ್ಣುಗಳ ಮೇಲೆ ಮೃದುವಾಗಿ ಇರಿಸಿ. ಆದರೆ, ಕಣ್ಣಿನ ಗುಡ್ಡೆಗಳ ಮೇಲೆ ಹೆಚ್ಚು ಒತ್ತಡ ಹಾಕದೇ ಅಂಗೈಯ ಶಾಖವನ್ನು ನೀಡುತ್ತಾ ಕಣ್ಣುಗಳಿಗೆ ವಿಶ್ರಾಂತಿ ನೀಡಿ.

ಬಳಿಕ, ಕೆಲವು ನಿಮಿಷಗಳ ಕಾಲ ನಿಶ್ಯಬ್ದವಾಗಿ ಕುಳಿತು, ನಿಧಾನವಾಗಿ ಉಸಿರಾಡಿ. ಪ್ರತಿದಿನ ಹೀಗೆ 5–10 ನಿಮಿಷ ಮಾಡುವುದರಿಂದ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಲಿದೆ.

ಕಣ್ಣು ಮಿಟುಕಿಸುವುದು

ಅನೇಕರು ಮೊಬೈಲ್, ಕಂಪ್ಯೂಟರ್ ನೋಡುವ ಸಂದರ್ಭದಲ್ಲಿ ಕಣ್ಣು ಮಿಟುಕಿಸುವುದನ್ನು ಮರೆತು ಬಿಡುತ್ತಾರೆ. ದೀರ್ಘಕಾಲ ಆದರೂ ಕಣ್ಣು ಮಿಟುಕಿಸದೆ ಇದ್ದರೆ ಕಣ್ಣಿನ ಸ್ನಾಯುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಕಣ್ಣು ಮಿಟುಕಿಸುವುದು ಹೇಗೆ? : ಮೊದಲು ಆರಾಮವಾಗಿ ಕುಳಿತುಕೊಳ್ಳಿ. ಕೆಲವು ಸೆಕೆಂಡುಗಳ ಕಾಲ ವೇಗವಾಗಿ ಕಣ್ಣುಗಳನ್ನು ಮಿಟುಕಿಸಿ. ನಂತರ ಕಣ್ಣುಗಳನ್ನು ಮುಚ್ಚಿ ಕೆಲವು ಕ್ಷಣ ವಿಶ್ರಾಂತಿ ಪಡೆಯಿರಿ. ಈ ಪ್ರಕ್ರಿಯೆಯನ್ನು ಪ್ರತಿದಿನ ಹಲವು ಬಾರಿ ಪುನರಾವರ್ತಿಸಿ. ಹೀಗೆ ಮಾಡುವುದರಿಂದ ಕಣ್ಣುಗಳಲ್ಲಿ ತೇವಾಂಶ ಉಳಿದು ಕಣ್ಣುಗಳು ಆರಾಮದಾಯಕವಾಗಿರಲು ಉಪಯುಕ್ತವಾಗಿದೆ.

ಕಣ್ಣುಗಳನ್ನು ತಿರುಗಿಸುವ ವ್ಯಾಯಾಮ

ಕಣ್ಣುಗಳ ದೃಷ್ಠಿ ಸರಿಯಾಗಿರಲು ‘ಐ ರೊಟೇಶನ್‘ ಉಪಯುಕ್ತ ವ್ಯಾಯಾಮವಾಗಿದೆ.

ಮಾಡುವ ವಿಧಾನ : ನೇರವಾಗಿ ಕುಳಿತುಕೊಳ್ಳಿ. ನಂತರ ನಿಮ್ಮ ಕಣ್ಣುಗುಡ್ಡೆಗಳನ್ನು ನಿಧಾನವಾಗಿ ವೃತ್ತಾಕಾರದಲ್ಲಿ ತಿರುಗಿಸಿ. ಮೊದಲು ಮೇಲೆ ನೋಡಿ, ನಂತರ ನಿಧಾನವಾಗಿ ಬಲಕ್ಕೆ, ಕೆಳಕ್ಕೆ, ಎಡಕ್ಕೆ ಮತ್ತು ಪುನಃ ಮೇಲಕ್ಕೆ ನೋಡಿ. ಈ ವ್ಯಾಯಮ ಮಾಡುವಾಗ ಕಣ್ಣುಗಳಿಗೆ ಹೆಚ್ಚು ಒತ್ತಡ ಹಾಕಬಾರದು.

ಕಣ್ಣುಗಳನ್ನು ಮೇಲೆ ಮತ್ತು ಕೆಳಗೆ ಚಲಿಸುವ ವ್ಯಾಯಾಮ

ಮಾಡುವ ವಿಧಾನ: ಈ ವ್ಯಾಯಾಮ ಮಾಡುವಾಗ ಯೋಗದ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ತಲೆಯನ್ನು ಅಲ್ಲಾಡಿಸದೆ ಸ್ಥಿರವಾಗಿಟ್ಟುಕೊಳ್ಳಿ. ಇಲ್ಲಿ ಕೇವಲ ಕಣ್ಣುಗಳನ್ನು ಮಾತ್ರ ಚಲಿಸಬೇಕು.

ತಲೆಯನ್ನು ನೇರವಾಗಿ ಇರಿಸಿ, ಮೊದಲು ನಿಧಾನವಾಗಿ ಮೇಲೆ ನೋಡಿ. ನಂತರ ಅಷ್ಟೇ ನಿಧಾನವಾಗಿ ದೃಷ್ಟಿಯನ್ನು ಕೆಳಕ್ಕೆ ಮಾಡಿ. ಈ ಪ್ರಕ್ರಿಯೆಯನ್ನು ನಿಧಾನವಾಗಿ ಕೆಲವು ಬಾರಿ ಪುನರಾವರ್ತಿಸಿ.

ಪ್ರತಿದಿನ ಹೀಗೆ ಮಾಡುವುದರಿಂದ ದೀರ್ಘಕಾಲ ಪರದೆ ಅಥವಾ ಪುಸ್ತಕ ಓದುವವರಿಗೆ ಸಹಕಾರಿಯಾಗಲಿದೆ.

ಕಣ್ಣುಗಳನ್ನು ಅಕ್ಕಪಕ್ಕಕ್ಕೆ ಚಲಿಸುವುದು

ಮಾಡುವ ವಿಧಾನ: ನಿಮ್ಮ ಕುತ್ತಿಗೆ ಮತ್ತು ತಲೆಯನ್ನು ಅತ್ತಿತ್ತ ತಿರುಗಿಸದೆ ನೇರವಾಗಿ ಕುಳಿತುಕೊಳ್ಳಿ. ಮೊದಲು ಕಣ್ಣುಗಳಿಂದ ಪೂರ್ತಿ ಎಡಭಾಗಕ್ಕೆ ನೋಡಿ. ನಂತರ ನಿಧಾನವಾಗಿ ದೃಷ್ಠಿಯನ್ನು ಪೂರ್ತಿ ಬಲಭಾಗಕ್ಕೆ ಚಲಿಸಿ. ಇದೇ ರೀತಿ ಎಡ ಮತ್ತು ಬಲಕ್ಕೆ ಕೆಲವು ಬಾರಿ ಈ ಪ್ರಕ್ರಿಯೆಯನ್ನು ಮಾಡಿ. ಕಣ್ಣುಗಳಿಗೆ ವಿಶ್ರಾಂತಿ ನೀಡಲು ಇದು ಸಹಕಾರಿ.

ದೃಷ್ಠಿ ಕೇಂದ್ರೀಕರಿಸುವುದು

ಈ ಯೋಗಾಸನ ಮಾಡುವುದು ಹೇಗೆ? : ಮೊದಲು ಸ್ಥಿರವಾಗಿ ಕುಳಿತುಕೊಳ್ಳಿ. ನಿಮ್ಮ ಕೈಯ ಹೆಬ್ಬೆರಳನ್ನು ಮುಖದ ಮುಂದೆ ನೇರವಾಗಿ ಹಿಡಿಯಿರಿ ಮತ್ತು ಕೆಲವು ಸೆಕೆಂಡುಗಳ ಕಾಲ ಅದನ್ನು ದಿಟ್ಟಿಸಿ ನೋಡಿ. ನಂತರ ತಕ್ಷಣವೇ ನಿಮ್ಮದೃಷ್ಠಿಯನ್ನು ದೂರದಲ್ಲಿರುವ ವಸ್ತುಗಳತ್ತ ಬದಲಾಯಿಸಿ.

ಹೀಗೆ ಪ್ರತಿದಿನ ಮಾಡುವುದರಿಂದ ಇದು ಕಣ್ಣಿನ ಸ್ನಾಯುಗಳ ನಮ್ಯತೆಯನ್ನು ಸುಧಾರಿಸುತ್ತದೆ.

ವರದಿ: ಎನ್ ಡಿ ಟಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.