ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅದು ಏನ ಮಾಡಬೇಕು, ಇದು ಏನು ಮಾಡಬಹುದು, ಏನು ಆಹಾರ ತಿನ್ನಬೇಕು, ಕೆಲಸದ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು, ಹಣಕಾಸನ್ನು ಹೇಗೆ ನಿಭಾಯಿಸಬೇಕು, ಆರೋಗ್ಯಕ್ಕೆ ಯಾವುದು ಒಳ್ಳೆಯದು ಹೀಗೆ ಎಂದು ಪ್ರತಿ ಕ್ಷಣ ಒಂದಲ್ಲಾ ಒಂದು ಯೋಚನೆಯಲ್ಲಿ ತೊಡಗಿ ಒಂದೊಂದು ನಿರ್ಧಾರಕ್ಕೆ ಬಂದಿರುತ್ತೇವೆ.

ಹೀಗೆ ಇಡೀ ದಿನ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕೆಲವಕ್ಕೆ ಕ್ಷಣ ಮಾತ್ರದಲ್ಲೇ ನಿರ್ಧಾರಕ್ಕೆ ಬಂದರೆ, ಇನ್ನೂ ಕೆಲವು ವಿಚಾರಗಳಿಗೆ ಹಳೆಯ ನೆನಪಿಗೆ ಹೋಗಬೇಕಾಗಬಹುದು ಅಥವಾ ಕೂಲಂಕಷವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ದೀರ್ಘವಾಗಿ ಯೋಚಿಸಿದಾಗ ಮೆದುಳಿನ ಮೇಲೆ ಒತ್ತಡ ಬೀಳುತ್ತದೆ. ಇದನ್ನು ತಜ್ಞರು ‘ನಿರ್ಧಾರಗಳಿಂದಾಗುವ ಆಯಾಸ’ ಎನ್ನುತ್ತಾರೆ.

‘ಜರ್ನಲ್ ಆಫ್ ಪರ್ಸನಾಲಿಟಿ ಆ್ಯಂಟ್ ಸೋಶಿಯಲ್ ಸೈಕಾಲಜಿ’ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ದಿನದಲ್ಲಿ ಹೆಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುವವರು ಅತಿಯಾದ ಆಯಾಸ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ.

‘ಫ್ರಂಟೈರ್ಸ್’ ಜರ್ನಲ್ನಲ್ಲಿ ಪ್ರಕಟವಾದ ವರದಿ ಪ್ರಕಾರ ಒಬ್ಬ ಆರೋಗ್ಯಕರ ವ್ಯಕ್ತಿ ಒಂದು ದಿನದಲ್ಲಿ ಸರಿಸುಮಾರು 35 ಸಾವಿರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.

ಯಾರಲ್ಲಿ ಈ ನಿರ್ಧಾರದ ಆಯಾಸ ಹೆಚ್ಚು?

ವೈದ್ಯರು, ವಕೀಲರು ಅಥವಾ ಬೇರೆಯವರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಹೆಚ್ಚು ಯೋಚಿಸಿ ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಅಂತವರಿಗೆ ಹೆಚ್ಚು ಆಯಾಸ ಕಾಡಬಲ್ಲದು. ನಿರ್ಧಾರಗಳಿಂದ ಆಯಾಸವಾಗುವುದು ಎಂದರೆ ಅರಿವಿಲ್ಲದೆ ಮೆದುಳಿನ ಮೇಲೆ ಉಂಟಾಗುವ ಒತ್ತಡವಾಗಿದೆ.

ನಿರ್ಧಾರಗಳ ಆಯಾಸ ಉಂಟಾಗುವುದು ಯಾವಾಗೆಂದರೆ...

ಒಂದು ನಿರ್ಧಾರ ತೆಗೆದುಕೊಳ್ಳಲು ಅತಿಯಾದ ಸಮಯ ತೆಗೆದುಕೊಳ್ಳುವುದು.

ಯಾವುದೇ ಹಿನ್ನೆಲೆ, ಪುರಾವೆಗಳಿಲ್ಲದೆ ತಕ್ಷಣಕ್ಕೆ ನಿರ್ಧಾರಕ್ಕೆ ಬರುವುದು.

ಸರಿಯಾದ ಸಮಯ ಬಿಟ್ಟು ನಿರ್ಧಾರಗಳನ್ನು ಮುಂದೂಡುವುದು.

ಒಮ್ಮೆ ನಿರ್ಧರಿಸಿದ ಮೇಲೂ ಪರ್ಯಾಯ ಆಯ್ಕೆಗಳನ್ನು ಕಂಡು ಯೋಚನೆಗೆ ಬೀಳುವುದು.

ಸರಿಯಾದ ನಿದ್ದೆ ಮಾಡದೇ ಇದ್ದಾಗ, ದಿನಚರಿ ಸರಿಯಾಗಿ ಇಲ್ಲದೆ ಇದ್ದಾಗ ಒತ್ತಡವಾಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಂಡಾಗಲೂ ಸುಸ್ತು ಕಾಡಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.