ಬೇಸಿಗೆಯಲ್ಲಿ ಅತಿಯಾಗಿ ಕಾಡುವ ತೊಂದರೆ ಎಂದರೆ ನಿರ್ಜಲೀಕರಣ (ಡಿಹೈಡ್ರೇಷನ್). ಎಂದರೆ, ದೇಹದಲ್ಲಿ ನೀರಿನಂಶವು ಕಡಿಮೆಯಾಗುವುದು. ನಾಲಗೆ, ಗಂಟಲು, ಮೈ ಮತ್ತು ಚರ್ಮಗಳ ಒಣಗುವಿಕೆ – ಹೀಗೆ ಅನೇಕ ಲಕ್ಷಣಗಳನ್ನು ‘ನಿರ್ಜಲೀಕರಣ’ದ ಸಮಯದಲ್ಲಿ ಗಮನಿಸಬಹುದು.

ನಿರ್ಜಲೀಕರಣವು ಹೆಚ್ಚಾಗಿ ನಾವು ಸಾಕಷ್ಟು ದ್ರವಗಳನ್ನು ಸೇವಿಸದ ಕಾರಣ ಉಂಟಾಗುತ್ತದೆ. ಹೆಚ್ಚಿನ ತಾಪಮಾನ ಮತ್ತು ಬಿಸಿ ವಾತಾವರಣದಿಂದಾಗಿ ದೇಹದಲ್ಲಿ ದ್ರವನಷ್ಟಗೊಳ್ಳುವ ವೇಗ ಹೆಚ್ಚಾಗುತ್ತದೆ. ಅತಿಯಾದ ವ್ಯಾಯಾಮ ಅಥವಾ ಅತಿಯಾದ ಶ್ರಮದ ಕೆಲಸ ಮಾಡುವುದರಿಂದ ಬೆವರುವಿಕೆ ಹೆಚ್ಚಾಗಿ ನಿರ್ಜಲೀಕರಣ ಸಂಭವಿಸಬಹುದು. ಕೆಲವು ದೀರ್ಘಕಾಲೀನ ರೋಗಗಳೂ ನಿರ್ಜಲೀಕರಣಕ್ಕೆ ಕಾರಣವಾಗಬಹುದಾದರೂ, ಅತಿಯಾದ ಶಾಖ ಅಥವಾ ನೀರಿನಂಶದ ಕೊರತೆಯೇ ನಿರ್ಜಲೀಕರಣಕ್ಕೆ ಮುಖ್ಯ ಕಾರಣವಾಗುತ್ತದೆ. ಇದಲ್ಲದೆ ಕಡಿಮೆ ಆಮ್ಲಜನಕ, ಶುಷ್ಕ ಗಾಳಿ, ಅತಿಯಾದ ಮಾನಸಿಕ ಒತ್ತಡ – ಇವು ಕೂಡ ನಿರ್ಜಲೀಕರಣಕ್ಕೆ ಕಾರಣವಾಗಬಲ್ಲದು. ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಹೆಚ್ಚು.

ಈ ಲಕ್ಷಣಗಳು ಕಂಡುಬಂದರೆ ತಜ್ಞರನ್ನು ಭೇಟಿ ಮಾಡಿ: ದ್ರವಪದಾರ್ಥಗಳನ್ನು ಕುಡಿದ ನಂತರವೂ ಬಾಯಾರಿಕೆ ತಣಿಯದಿದ್ದರೆ, ಬಾಯಿ ಒಣಗಿದರೆ, ಕಡಿಮೆ ಮೂತ್ರವಿಸರ್ಜನೆಯಾಗುತ್ತಿದ್ದರೆ, ಮೂತ್ರ ಹಳದಿಬಣ್ಣದ್ದಾಗಿದ್ದರೆ, ಎದ್ದು ನಿಂತಾಗ ತಲೆಸುತ್ತುವಂತಾಗುತ್ತಿದ್ದರೆ, 24 ಗಂಟೆಗಳಿಗೂ ಹೆಚ್ಚು ಕಾಲ ನಿರಂತರ ತಲೆನೋವಿದ್ದರೆ, ನಿದ್ರೆ ಬಾರದಿದ್ದರೆ, ಕೈ ಕಾಲುಗಳು ಎಳೆದಂತಾದರೆ, ವಿನಾ ಕಾರಣ ಹೃದಯದ ಬಡಿತ ಹೆಚ್ಚಾದರೆ, ನಿರಂತರವಾದ ಸ್ನಾಯುಸೆಳೆತ ಉಂಟಾದರೆ, ವಿನಾ ಕಾರಣ ಮಾನಸಿಕ ಒತ್ತಡ ಹೆಚ್ಚಾದರೆ, ಮೂರ್ಛೆ ಬಂದಂತಾದರೆ, ಆಲಸ್ಯ, ಕಿರಿಕಿರಿ – ಇಂತಹ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ದೇಹದಲ್ಲಿ ನಿರ್ಜಲೀಕರಣವಾದೀತು ಎಂಬುದನ್ನು ಗಮನಿಸಿ, ಹೆಚ್ಚಾದರೆ ತಜ್ಞವೈದ್ಯರನ್ನು ಕೂಡಲೇ ಭೇಟಿ ಮಾಡಬೇಕು.

ನಿಮ್ಮ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸಲು ಹೆಣಗಾಡಿದಾಗ ಶಾಖದ ಬಳಲಿಕೆಯು ಸಂಭವಿಸಬಹುದು. ಚಿಕಿತ್ಸೆ ನೀಡದಿದ್ದರೆ, ಶಾಖದ ಬಳಲಿಕೆಯು ವೈದ್ಯಕೀಯ ತುರ್ತುಸ್ಥಿತಿಯಾದ ಶಾಖದ ಹೊಡೆತಕ್ಕೆ ‘ಸನ್–ಸ್ಟ್ರೋಕ್’ ಕಾರಣವಾಗಬಹುದು. ನಿರ್ಜಲೀಕರಣಕ್ಕೂ, ಶಾಖದ ಬಳಲಿಕೆಗೂ ಇರುವ, ಸುಲಭದಲ್ಲಿ ಗಮನಿಸಬಹುದಾದ ಪ್ರಮುಖ ವ್ಯತ್ಯಾಸವೆಂದರೆ, ನಿರ್ಜಲೀಕರಣದಲ್ಲಿ ಚರ್ಮದ ಉಷ್ಣತೆ ಹೆಚ್ಚಾಗಿರುತ್ತದೆ, ಶಾಖದ ಬಳಲಿಕೆಯಲ್ಲಿ ಅತಿಯಾಗಿ ಬೆವರಿ ಚರ್ಮವು ತಂಪಾಗಿರುತ್ತದೆ.

ಒಣ ಚರ್ಮ ಮತ್ತು ಕಡಿಮೆ ಮೂತ್ರವಿಸರ್ಜನೆಯೊಂದಿಗೆ ಬಾಯಾರಿಕೆಯ ಅನುಭವವಾದರೆ, ನಿರ್ಜಲೀಕರಣದ ಸಾಧ್ಯತೆ ಹೆಚ್ಚು. ಶಾಖಕ್ಕೆ ಒಡ್ಡಿಕೊಂಡ ನಂತರ ಅತಿಯಾಗಿ ಬೆವರು, ತಲೆತಿರುಗುವಿಕೆ, ವಾಕರಿಕೆ ಮತ್ತು ದೌರ್ಬಲ್ಯವನ್ನು ಅನುಭವಿಸಿದರೆ, ಅದು ಶಾಖದ ಬಳಲಿಕೆಯಾಗಿರಬಹುದು. ದೇಹದ ಉಷ್ಣತೆಯ ಏರಿಕೆಯೊಂದಿಗೆ ಗೊಂದಲ ಅಥವಾ ಮೂರ್ಛೆ ಹೋದರೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯ.

ಇಂತಹ ಸಮಸ್ಯೆಗಳು ಮಕ್ಕಳು ಮತ್ತು ವೃದ್ಧರು, ಹೊರಾಂಗಣ ಕೆಲಸಗಾರರು, ಕ್ರೀಡಾಪಟುಗಳು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರು, ದೀರ್ಘಕಾಲದವರೆಗೆ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡ ವ್ಯಕ್ತಿಗಳಲ್ಲಿ ಕಂಡುಬಂದರೆ ಕೂಡಲೇ ಜಾಗ್ರತೆ ವಹಿಸಬೇಕು.ಇಂತಹ ಸಂದರ್ಭಗಳನ್ನು ತಡೆಗಟ್ಟಲು ನೀರು ಅಥವಾ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು (ORS) ಕುಡಿಯಿರಿ. ಕೇವಲ ತಣ್ಣೀರನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಶಕ್ತಿಯು ಕಡಿಮೆಯಾಗಿ ಅಜೀರ್ಣದಿಂದ ಉಟಾಗುವ ರೋಗಗಳಾದ ವಾಂತಿ, ಮೈಭಾರ ಮುಂತಾದವುಗಳು ಸಂಭವಿಸಬಹುದು. ಆದ್ದರಿಂದ ನೀರಿಗೆ ಶ್ರೀಗಂಧ, ಲಾವಂಚ, ಕಚೋರ, ಸೋಗದೇಬೇರು, ಏಲಕ್ಕಿ, ಅಥವಾ ಜೀರಿಗೆ ಬೆರೆಸಿ ನೀರನ್ನು ಕುದಿಸಿ ತಣಿಸಿ ಸೇವಿಸುವುದರಿಂದ ಬೆವರುವುದನ್ನು ಕಡಿತಗೊಳಿಸಿ, ನಿರ್ಜಲೀಕರಣವಾಗುವುದನ್ನು ತಪ್ಪಿಸಬಹುದು.

ಈ ಸಮಯದಲ್ಲಿ ಕಲ್ಲಂಗಡಿ, ಕರ್ಬೂಜ, ಸೊಗದೆಬೇರು, ನಿಂಬೆ, ಮೂಸಂಬಿ, ಪುನರ್ಪುಳಿ – ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳನ್ನು ಸೇವಿಸಿದಷ್ಟು ಹೆಚ್ಚಿನ ಪ್ರಯೋಜನವಾಗುತ್ತದೆ. ಪ್ರಕೃತಿ ಚಿಕಿತ್ಸಕರ ಪ್ರಕಾರ ಕಲ್ಲಂಗಡಿ ಮತ್ತು ಕರ್ಬೂಜ ಹಣ್ಣಿನ ಸೇವನೆಯ ನಂತರ ಸಮಪ್ರಮಾಣ ನೀರನ್ನು ಕುಡಿದರೆ ಆಗ ಅವು ದೇಹದ ಕಶ್ಮಲಗಳನ್ನು ಸಂಪೂರ್ಣವಾಗಿ ಹೊರಹಾಕಲು ಸಮರ್ಥವಾಗುತ್ತವೆ.

ಇನ್ನು ಆರೋಗ್ಯದ ದೃಷ್ಟಿಯಿಂದ ಎಳನೀರು ಹಿತವಾಗಿದ್ದು, ಇದು ನೈಸರ್ಗಿಕ ಪಾನೀಯವಾಗಿದ್ದು, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೇಸಿಗೆ ದಿನಗಳಲ್ಲಿ ದೇಹದ ಉಷ್ಣಾಂಶವನ್ನು ತಂಪುಗೊಳಿಸುವಲ್ಲಿ ಎಳನೀರಿನ ಪಾತ್ರ ಬಹಳಷ್ಟಿದೆ. ಇದು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮ.

ಇದಲ್ಲದೆ ಹೆಸರುಕಾಳಿನ ಹಾಲಿಗೆ, ರಾಗಿಹಾಲಿಗೆ, ಬೆಲ್ಲ, ಏಲಕ್ಕಿ ಬೆರೆಸಿ ಸೇವಿಸುವುದು ದೇಹವನ್ನು ತಂಪಾಗಿರಿಸುವುದಲ್ಲದೆ, ಆಗತ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ. ಮೊಸರಿಗೆ ಸಕ್ಕರೆ ಸೇರಿಸಿ ಸೇವಿಸುವುದು, ಕಡೆದ ಮಜ್ಜಿಗೆಗೆ ಸ್ವಲ್ಪ ಸೈಂದುಪ್ಪು ಬೆರೆಸಿ ಸೇವಿಸುವುದರಿಂದ ಲವಣಾಂಶದ ಕೊರತೆಯಿಂದ ಉಂಟಾಗುವ ಅತಿಸಾರ, ವಾಂತಿಯನ್ನು ತಡೆಗಟ್ಟಬಹುದು. ಪಾಲಿಶ್ ಮಾಡದ ದೇಸೀ ತಳಿ ಅಕ್ಕಿಯನ್ನು ತೊಳೆದ ನೀರಿಗೆ, ಸ್ವಲ್ಪ ಏಲಕ್ಕಿ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಬೆರೆಸಿ ಸೇವಿಸುವುದರಿಂದ ಮೈ ಉರಿ, ಅಂಗೈ, ಅಂಗಾಲುರಿಯನ್ನು ತಡೆಗಟ್ಟಬಹುದು. ಹಣ್ಣುಗಳ ಸೇವನೆ ಮತ್ತು ಹಸಿಮೆಣಸಿನಕಾಯಿ ಹಾಕದೇ ಇರುವ ಕೋಸಂಬರಿಗಳ ಸೇವನೆಯೂ ಹಿತಕರ.

ನಿರ್ಜಲೀಕರಣವನ್ನು ತಡೆಗಟ್ಟಲು ನಿತ್ಯವೂ ಮೈಗೆ ಎಣ್ಣೆ ಹಚ್ಚಿ ಹದ ಬಿಸಿನೀರಿನಲ್ಲಿ ಸ್ನಾನ ಮಾಡುವುದು; ಸುಗಂಧ ದ್ರವ್ಯಗಳಾದ ಶ್ರೀಗಂಧ, ಗೋಪಿಚಂದನ ಹಚ್ಚಿಕೊಳ್ಳುವುದು; ಕಡಿಮೆ ವ್ಯಾಯಮ ಮಾಡುವುದು; ಗರಿಷ್ಠ ಶಾಖದ ಸಮಯದಲ್ಲಿ (ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ) ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸುವುದು; ಹಗುರವಾದ, ಉಸಿರಾಡಲು ಸುಲಭವಾಗುವ, ತಿಳಿ ಬಣ್ಣದ, ಬಟ್ಟೆಗಳನ್ನು ಧರಿಸುವುದು; ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಆಗಾಗ್ಗೆ ವಿರಾಮವನ್ನು ತೆಗೆದುಕೊಳ್ಳುವುದು; ತಂಪಾದ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು; ಕಾಫಿ, ಚಹಾ, ಮದ್ಯಪಾನಗಳಿಂದ ದೂರವಿರುವುದು; ಅತಿಯಾದ ಖಾರ, ಹಸಿಮೆಣಸಿನಕಾಯನ್ನು ಸೇವಿಸದಿರುವುದು – ಇಂತಹ ಬದಲಾವಣೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-439213313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.