ಜ್ವರ, ಕೆಮ್ಮು ನೆಗಡಿ ಬಂದಾಗ ಎಷ್ಟು ಜನ ತುರ್ತಾಗಿ ವೈದ್ಯರ ಬಳಿ ಹೋಗುತ್ತಾರೆ? ಒಂದೆರಡು ದಿನವಾದರೂ ಕಡಿಮೆಯಾಗದಿದ್ದಾಗ ಮಾತ್ರ ಆಸ್ಪತ್ರೆಗೆ ಹೋಗುತ್ತಾರೆ. ಹಲ್ಲು ನೋವಿನ ವಿಷಯದಲ್ಲಿಯೂ ಹೀಗೆ. ಹಲ್ಲಿನ ನೋವು ವಿಪರೀತವಾಗಿ ತಡೆಯಲು ಸಾಧ್ಯವೇ ಇಲ್ಲ ಎಂದಾಗ ಮಾತ್ರ, ಆಸ್ಪತ್ರೆಗೆ ಹೋಗುತ್ತಾರೆ. ಇದು ಹಲ್ಲು ನೋವನ್ನು ಮತ್ತಷ್ಟು ಹೆಚ್ಚಿಸುವುದಲ್ಲದೇ, ಹ್ಲಲಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
.ಬಾಯಿ–ಹಲ್ಲು ನೋವು: ಪ್ರಾಥಮಿಕ ಹಂತದಲ್ಲೇ ಗುಣ; ಡಾ. ಶಿಲ್ಪಾ ಎಸ್.ಅಪ್ಪಿತಪ್ಪಿಯೂ ಬಾಯಿ ಹುಣ್ಣುಗಳನ್ನು ನಿರ್ಲಕ್ಷಿಸಬೇಡಿ: ರೋಗಕ್ಕೆ ಕಾರಣವಾಗುವುದು.
ಹಾಗಾದರೆ ಹಲ್ಲು ನೋವು ಬಂದಾಗ ಆರೈಕೆ ಹೇಗೆ ಮಾಡಬೇಕು, ಹಲ್ಲಿನ ಸ್ವಾಸ್ಥ್ಯ ಕಾಪಾಡುವುದು ಹೇಗೆ? ಎಂಬ ಸಲಹೆಗಳು ಇಲ್ಲಿವೆ.

ಹಲ್ಲಿನ ಆರೈಕೆ ಏಕೆ ಮುಖ್ಯ?

ಹಲ್ಲು ನಮ್ಮ ದೇಹದ ಆರೋಗ್ಯ ಸೂಚಕವಾಗಿ ಕೆಲಸ ಮಾಡುತ್ತದೆ. ಹಲ್ಲುಗಳ ಆರೋಗ್ಯ ನಮ್ಮ ಮಿದುಳಿನ ಹಾಗೂ ಕಣ್ಣುಗಳ ಆರೋಗ್ಯದೊಂದಿಗೆ ತಳುಕು ಹಾಕಿಕೊಂಡಿದೆ. ಅಲ್ಲದೇ ಹಲ್ಲು ಮಧುಮೇಹ ಮತ್ತು ಹೃದಯ ಸಮಸ್ಯೆಗಳ ಸುಳಿವುಗಳನ್ನೂ ನೀಡುತ್ತದೆ.

ದಂತ ವೈದ್ಯರು 6 ತಿಂಗಳಿಗೊಮ್ಮೆ ಹಲ್ಲುಗಳ ತಪಾಸಣೆಗೆ ಕಡ್ಡಾಯವಾಗಿ ಮಾಡಿಸಬೇಕೆಂದು ಸಲಹೆ ನೀಡುತ್ತಾರೆ. ಆರಂಭಿಕ ಹಂತದಲ್ಲಿ ಹಲ್ಲಿಗೆ ಹಾನಿಯಾಗಿದ್ದರೂ ನೋವಾಗುವುದಿಲ್ಲ. ದಿನ ಕಳೆದಂತೆ ನಿಧಾನವಾಗಿ ನೋವು ಆರಂಭವಾಗುತ್ತದೆ. ಆದ್ದರಿಂದ ಮೊದಲೇ ಹಲ್ಲುಗಳ ಪರೀಕ್ಷೆ ಮಾಡಿಸುವುದು ಉತ್ತಮ ಅಭ್ಯಾಸವಾಗಿದೆ.

ನೋವು ಬಂದರೆ ಮಾತ್ರ ವೈದ್ಯರ ಬಳಿ ಹೋಗುವೆ..

ವಾಸ್ತವವಾಗಿ ಹಲ್ಲು ನೋವು ಕಾಣಿಸಿಕೊಳ್ಳುವ ಮೊದಲೇ ಹಲ್ಲಿಗೆ ಹಾನಿಯಾಗಿರುತ್ತದೆ. ದಿನಕಳೆದಂತೆ ನೋವು ಉಲ್ಬಣಗೊಂಡಾಗ ನಮ್ಮ ಗಮನಕ್ಕೆ ಬರುತ್ತದೆ. ವಸಡಿನ ರೋಗ ಮತ್ತು ಹಲ್ಲಿನ ಕೊಳೆಯುವುದು ಯಾವುದೇ ನೋವಿಲ್ಲದೆ ನಡೆಯುತ್ತದೆ. ಆದ್ದರಿಂದ ಹಲ್ಲು ಅಲ್ಲಾಡಲು ಪ್ರಾರಂಭಿಸಿದ ತಕ್ಷಣ ವೈದ್ಯರ ಸಂಪರ್ಕ ಉತ್ತಮ.

ಚಿಕಿತ್ಸೆ ತಡ ಮಾಡಿದರೆ ಏನಾಗುತ್ತದೆ?

ಬಹುದಿನಗಳವವರೆಗೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯದಿದ್ದರೆ, ಹಲ್ಲಿನ ರೂಟ್ ಕೆನಾಲ್ಗಳ ಸೋಂಕು ಉಂಟಾಗಬಹುದು. ವಸಡಿನ ರೋಗವಾಗಿಯೂ ಉಲ್ಬಣಗೊಳ್ಳಬಹುದು. ಇದರ ಪ್ರಭಾವ ದೇಹದ ಇತರ ಅಂಗಾಂಗಗಳ ಮೇಲೂ ಬೀಳಬಹದು. ಕ್ರೌನ್ ಅಥವಾ ಇಂಪ್ಲಾಂಟ್ ಚಿಕಿತ್ಸೆಯ ಮೂಲ ಗುಣಪಡಿಸಬಹುದು.
.ಕ್ಷೇಮ–ಕುಶಲ | ಆ್ಯಂಟಿ-ಮೈಕ್ರೋಬಿಯಲ್: ಪ್ರತಿರೋಧ ಕಾಣದ ಶತ್ರು.
ಹಲ್ಲಿನ ಆರೈಕೆಗೆ ದಿನನಿತ್ಯ ಅಭ್ಯಾಸ

ದಿನಕ್ಕೆ ಎರಡು ಹಲ್ಲನ್ನು ಸ್ವಚ್ಛಗೊಳಿಸುವುದು

ಸಿಹಿ ತಿಂಡಿ ಮತ್ತು ಪಾನೀಯಗಳ ಸೇವನೆಯನ್ನು ಕಡಿಮೆಗೊಳಿಸುವುದು.

ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ತಪಾಸಣೆ ಮಾಡಿಸುವುದು.

ಸಣ್ಣ ನೋವನ್ನು ನಿರ್ಲಕ್ಷ್ಯ ಮಾಡದಿರುವುದು.

ಭಾರತದಲ್ಲಿ ಹಲ್ಲಿನ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಹೆಚ್ಚಿನವುಗಳನ್ನು ತಡೆಯಬಹುದಿತ್ತು. ಸಮಸ್ಯೆ ಚಿಕಿತ್ಸೆ ಸಿಗುವುದಿಲ್ಲ ಎಂದಲ್ಲ. ಸರಿಯಾದ ಸಮಯಕ್ಕೆ ಹೋಗದಿರುವುದು ಸಮಸ್ಯೆ. ದಂತ ವೈದ್ಯರ ಬಳಿ ಹೋಗುವ ಕಾರಣವನ್ನು ನೋವು ಆಧಾರಿತದಿಂದ ಮುಂಜಾಗ್ರತೆ ಆಧಾರಿತಕ್ಕೆ ಬದಲಿಸಿಕೊಂಡರೆ, ಬಾಯಿ ಮಾತ್ರವಲ್ಲ, ಇಡೀ ದೇಹದ ಆರೋಗ್ಯವೇ ಸುಧಾರಿಸುತ್ತದೆ.

ಲೇಖಕರು: ಡಾ. ಸಿಂಧು ಯು. ಮುಖ್ಯಸ್ಥರು, ದಂತ ವಿಜ್ಞಾನ, ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.